Category: News

ಪಾಕ್ ಪ್ರಧಾನಿ ಭಾಷಣದ ಮೇಲೆ ಇವರಿಗ್ಯಾಕೆ ಇನ್ನಿಲ್ಲದ ಪ್ರೀತಿ….?

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಭಾಷಣವನ್ನು ಅಂತರರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕೂಡಾ ಇಷ್ಟೊಂದು ಪ್ರಚಾರ ಕೊಟ್ಟಿಲ್ಲ. ಆದರೆ ಭಾರತದ ಕೆಲ ಬುದ್ದಿಜೀವಿಗಳ ವಾಲ್ ಗಳಲ್ಲಿ ಇಮ್ರಾನ್ ಖಾನ್ ಭಾಷಣ ರಾರಾಜಿಸುತ್ತಿದೆ. ನಮ್ಮ ದೇಶದ ಪ್ರಧಾನಿ ಮಾಡಿದ ಭಾಷಣಗಳನ್ನು ಎಂದಿಗೂ ತರ್ಜುಮೆ ಮಾಡದ ಮಂದಿ,( ರಾಜಕೀಯ ಭಾಷಣಗಳನ್ನು ಸೈಡಿಗಿಡಿ – ಕಲ್ಯಾಣ ಯೋಜನೆಗಳ ಕುರಿತಂತೆ ಪ್ರಧಾನಿ ಅದೆಷ್ಟು ಸಾರಿ ಮಾತನಾಡಿಲ್ಲ) ಇಮ್ರಾನ್…

ಗಡಿಯ ಬಳಿ ಬಂದಿದ್ದು 24 ಪಾಕ್ ವಿಮಾನ : ಎದುರಿಸಿದ್ದು ಭಾರತ 8 ವಿಮಾನ

ಬುಧವಾರ ಬೆಳಿಗ್ಗೆ ಭಾರತದ ವಾಯು ವಲಯ ದಾಟಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನದ 24 ಯುದ್ಧ ವಿಮಾನಗಳು ಆಗಮಿಸಿತ್ತು ಅನ್ನು ಅಘಾತಕಾರಿ ಅಂಶ ಹೊರ ಬಿದ್ದಿದೆ. ಆದರೆ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ ಭಾರತೀಯ ವಾಯುಪಡೆ ಪಾರಮ್ಯ ಮೆರೆದವು. ವಿಶೇಷ ಅಂದ್ರೆ ಹಾರಾಡುವ ಶವ ಪೆಟ್ಟಿಗೆ ಎಂದು ಕರೆಯಲ್ಪಡುವ ಮಿಗ್ ವಿಮಾನ ಪಾಕಿಸ್ತಾನದ ಎಫ್ 16 ನ್ನು ಹೊಡೆದುರುಳಿಸಿದೆ….

ರಮ್ಯ ಮೇಡಂ, ಮೋದಿ ನಿದ್ರಿಸುತ್ತಿಲ್ಲ… ಅಭಿನಂದನ್ ನಾಳೆ ಬರ್ತಾರೆ.. ಸುದ್ದಿ ಗೊತ್ತಾಯ್ತ…?

ಫೇಕ್ ಅಕೌಂಟ್ ಗಳನ್ನು ಕ್ರಿಯೇಟ್ ಮಾಡುವುದು ಹೇಗೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿಕೊಡಲು ಹೋಗಿ ಸುದ್ದಿಯಾಗಿದ್ದ ರಮ್ಯ ಮೇಡಂ…ಸ್ವಾರಿ..ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯ ನಿನ್ನೆ ಮತ್ತೆ ಸುದ್ದಿಯಾಗಿದ್ದರು. ಪುಲ್ವಾಮ ದಾಳಿ, ಏರ್ ಸ್ಟ್ರೈಕ್ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ ಮೇಡಂ, ಬುಧವಾರ ಪಾಕ್ ವಿಮಾನವೊಂದನ್ನು ಭಾರತೀಯ ವಾಯು ಪಡೆ ಹೊಡೆದುರಿಳಿಸಿದ ಬೆನ್ನಲ್ಲೇ ಎಚ್ಚರವಾಗಿದ್ದರು. ನೀವು ನಿದ್ರೆ ಮಾಡ್ತೀರೋ ಇಲ್ವೋ..ಅಭಿನಂದನ್ ಅವರನ್ನು ಕರೆ…

ನಾಳೆ ಭಾರತಕ್ಕೆ ವೀರಯೋಧ ಅಭಿನಂದನ್ : ಲಭಿಸಿತು ಭಾರತೀಯರಿಗೆ ಪೂಜಾ ಫಲ

ಭಾರತದ ಪೈಲಟ್ ಅಭಿನಂದನ್ ಅವರು ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾಗಲಿದ್ದಾರೆ. ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದ ಪಾಕಿಸ್ತಾನ ಅಭಿನಂದನ್ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗಡಾಯಿಸಿರುವ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಮೊಹಮ್ಮದ್…

‘ಸುಳ್ಳುಸ್ತಾನ’ : ಮತ್ತೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಪಾಕಿಸ್ತಾನ

ಪಾಕಿಸ್ತಾನ ಅಂದರೆ ಅದು ಪಾಪಿಸ್ತಾನ ಅನ್ನುವುದು ಜಗತ್ತಿಗೆ ಗೊತ್ತಿರುವ ಸತ್ಯ. ಅದರೊಂದಿಗೆ ಸುಳ್ಳು ಹೇಳುವುದು ‘ಸ್ವರ್ಗ’ ಬಿರುದಾಂಕಿತ ರಾಷ್ಟ್ರಕ್ಕೆ ಅದರ ರಕ್ತದಿಂದಲೇ ಬಂದಿದೆ. ಅಲ್ಲಿ ಅದ್ಯಾನ ನಾಯಕನೇ ಬರಲಿ ಅಲ್ಲಿ ಸುಳ್ಳು ಅವರ ಮನೆ ಆಸ್ತಿಯಾಗಿರುತ್ತದೆ. ರಕ್ತ ಪಿಪಾಸುಗಳು ಸತ್ಯವಂತರಾಗಿರುತ್ತಿದ್ದರೆ ಶಾಂತಿ ಅನ್ನುವುದು ಎಂದೋ ನೆಲೆಸಿರುತ್ತಿತ್ತು. ಇದೀಗ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ. ಪಾಕಿಸ್ತಾನ ಎಫ್ 16 ಅನ್ನು ಭಾರತೀಯ…

ಪ್ರಾಣಿಗಳು ನಾಡಿಗೆ ನುಗ್ಗುವ ದಿನ ದೂರವಿಲ್ಲ : ಎಚ್ಚರಿಕೆ ಕೊಟ್ಟ ದರ್ಶನ

ಬಂಡೀಪುರ ರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಆಗಿರುವ ನಷ್ಟವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಮನುಷ್ಯರೇ ಮಾಡಿರುವ ತಪ್ಪಿಗೆ ಮೂಕ ಪ್ರಾಣಿ, ಪಕ್ಷಿಗಳು ನರಳುವಂತಾಗಿದೆ. ರಾಜಕೀಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೂ ಇದರಲ್ಲಿ ಅಡಗಿದೆ ಅನ್ನುವುದನ್ನು ಮರೆಯುವಂತಿಲ್ಲ. ಈ ನಡುವೆ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ, ಎಲ್ಲರು ತಯಾರಾಗಿರಿ ಎಂದು ದರ್ಶನ್ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ…

ಶುರುವಾಯ್ತು ಟೆಂಪಲ್ ರನ್ : ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಸುಮಾರು 10 ಕಿಲೋಮೀಟರ್ ಉದ್ದದ ಕಡಿದಾದ ಮೆಟ್ಟಿಲನ್ನೇರಿ ರಾಹುಲ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ರಾಹುಲ್ ಕೇವಲ ಎರಡು ಗಂಟೆಗಳಲ್ಲಿ ಬೆಟ್ಟವನ್ನು ಏರಿದ್ದು,ಅಲಿಪಿರಿಯಲ್ಲಿ ಬೆಟ್ಟ ಹತ್ತಲು ಪ್ರಾರಂಭಿಸಿದ ರಾಹುಲ್ ಬಳಿಕ ದೇವಸ್ಥಾನದ ಅತಿಥಿ ಗೃಹದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ದೇವಾಲಯ ಪ್ರವೇಶಿಸಿದರು….