ಬಿಗ್ ಬಾಸ್ ಸೀಸನ್ 10ಕ್ಕೆ ಕಾಲಿಟ್ಟಿದೆ. ಸುದೀಪ್ ಅವರು ಈರ್ ಬಾರಿ ಕಾರ್ಯಕ್ರಮ ಹೇಗೆ ನಡೆಸುತ್ತಾರೆ ಅನ್ನುವುದೇ ಕುತೂಹಲ
ಬಿಗ್ ಬಾಸ್ ವೇದಿಕೆ ಹತ್ತಿದ್ರೆ ಭವಿಷ್ಯದಲ್ಲಿ ಸೆಟ್ಲ್ ಅನ್ನೋ ಮಾತಿದೆ. ಆದರೆ ಅದು ಮೊದಲ ಎಪಿಸೋಡ್ ಗಳಲ್ಲಾಯ್ತು. ಈಗ ಹಾಗೇನಿಲ್ಲ ವೇದಿಕೆ ಹತ್ತಿ ಸೆಲೆಬ್ರೆಟಿ ಅಮಲು ಏರಿಸಿಕೊಂಡಿದ್ದೇ ಬಂತು. ಒಂದಿಷ್ಟು ದಿನ ನಶೆ. ಆಮೇಲೆ ಎಂದಿನಂತೆ ಬದುಕಿನ ಬಂಡಿ ಓಡಿಸಲು ಮೈ ಬಗ್ಗಿಸಲೇ ಬೇಕು. ಇರ್ಲಿ ಬಿಡಿ.
ಕನ್ನಡದ ಬಿಗ್ ಬಾಸ್ ಇದೀಗ ದಶಕದ ಸಂಭ್ರಮದಲ್ಲಿದೆ. ಹಾಗೇ ಒಂದ್ಸಲ ಹಳೆಯ ಸೀಸನ್ ಸ್ಪರ್ಧಿಸಿ ಹಾಗೇ ಮರೆಯಾದವರ ಹೆಸರುಗಳನ್ನು ನೋಡಿಕೊಂಡು ಬರೋಣ.
ಶ್ವೇತಾ ಪಂಡಿತ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಇವರು ಎಲ್ಲಿದ್ದಾರೆ ಅಂತಾ ಗೊತ್ತಿಲ್ಲ. ಬಿಗ್ ಬಾಸ್ ಗೂ ಮುಂಚೆ ಒಂದಿಶ್ಟು ಸಿನಿಮಾಗಳು ಕೈಯಲ್ಲಿತ್ತು. ಈಗ ಚಂದನವನದಲ್ಲೂ ಇಲ್ಲ, ಸೋಶಿಯಲ್ ಮೀಡಿಯಾದಲ್ಲೂ ಇಲ್ಲ.
ಚಂದ್ರಿಕಾ, ಸೀಸನ್ 1 ರಲ್ಲಿ ಕಾಣಿಸಿಕೊಂಡ ಇವರು ಸೀಸನ್ ಮುಗಿದ ಬಳಿಕ ಕ್ಯಾಮಾರ ಮುಂದೆ ಅಪರೂಪವಾಗಿ ಹೋಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ.
Discussion about this post