Advertisements

Category: Entertainment

ರವಿಬೆಳಗೆರೆಯವರೇ ಅವರು ಅಪ್ರಸ್ತುತ ಅನ್ನುವುದಾದರೆ… ಈ ಕಾಲಕ್ಕೆ ನಿಜಕ್ಕೂ ನೀವು ಪ್ರಸ್ತುತರೇ…..

ಬಿಗ್ ಬಾಸ್ ಸೀಸನ್ 7 ನಿಧಾನವಾಗಿ ಬಿಸಿಯೇರಲಾರಂಭಿಸಿದೆ. ಒಂದೇ ಮನೆಯ ಸದಸ್ಯರಂತೆ ನಾವಿರಬೇಕು ಎಂದು ಪ್ರತಿಜ್ಞೆ ಮಾಡಿದ ಮಂದಿ ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ತಮ್ಮ ಗೆಲುವಿನ ನಾಗಲೋಟಕ್ಕೆ ಅಡ್ಡಿಯಾದವರನ್ನು ಹೊಡೆದುರಿಳಿಸುವುದಕ್ಕೆ ಮಾಸ್ಟರ್ ಪ್ಲಾನ್ ಗಳನ್ನು ತಮಗೆ ಗೊತ್ತಿಲ್ಲದಂತೆ ಹೆಣೆಯಲಾರಂಭಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿದ್ದು ಸೋಮವಾರ ಅಂದ್ರೆ ಸೀಸನ್ 7 ರ ಎರಡನೇ ದಿನ.ನಾಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಒಂದೇ ದಿನದಲ್ಲಿ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ಅಳೆದ…

Advertisements

ಜೊತೆ ಜೊತೆಯಲ್ಲಿ ಧಾರಾವಾಹಿ ಕತೆ ಮೇಲೆ ಬಂತಲ್ಲ ಅಪವಾದ…!

ಕನ್ನಡದ ಸೀರಿಯಲ್ ಲೋಕದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ. ಪ್ರಸಾರ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಹಿರಿಮೆ ಇದರದ್ದು. ಇದಕ್ಕೆ ಕಾರಣ ಹಲವು. ಇಲ್ಲಿ ಕಾಣಿಸಿಕೊಂಡಿರುವ ಕಲಾವಿದರು ಒಂದು ಕಾರಣವಾದರೆ, ಆರೂರು ಜಗದೀಶ್ ಅವರ ನಿರ್ದೇಶನ ಮತ್ತೊಂದು ಕಾರಣ. ಜೊತೆಗೆ ಈ ಧಾರಾವಾಹಿಯ ಕಥೆಯೂ ಅಷ್ಟೇ ಚೆನ್ನಾಗಿರುವ ಕಾರಣದಿಂದ ಸೀರಿಯಲ್ ಸೂಪರ್ ಹಿಟ್…

ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್

ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ.. ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ಈ ಹಿಂದೆ ರಾಜೇಶ್ವರಿ ನಟಿಸುತ್ತಿದ್ದರು.ವೈಯುಕ್ತಿಕ ಕಾರಣಗಳಿಂದ ಅವರು ಅಗ್ನಿ ಸಾಕ್ಷಿ ತಂಡವನ್ನು ತೊರೆದಿದ್ದರು. ಅಷ್ಟು ಹೊತ್ತಿಗಾಗಲೇ ರಾಜೇಶ್ವರಿ ಚಂದ್ರಿಕಾ ಪಾತ್ರಕ್ಕೊಂದು ತೂಕ ತಂದು ಕೊಟ್ಟಿದ್ದರು. ರಾಜೇಶ್ವರಿ ಅಗ್ನಿ ಸಾಕ್ಷಿ ತಂಡ ತೊರೆಯುತ್ತಿದ್ದಂತೆ ಮುಂದೆ…

ನಿರ್ಮಾಪಕರೊಂದಿಗಿನ ಜಗಳದ ಮೂಲಕ ಸುದ್ದಿಯಾಗಿದ್ದ ಹರೀಶ್ ರಾಜ್ ಇದೀಗ ಮಹಾಮನೆ ಅಂಗಳದಲ್ಲಿ…

ನಿಗೂಢ’ ಚಿತ್ರದ ಚಿತ್ರೀಕರಣಕ್ಕಾಗಿ ಕೊಟ್ಟಿಗೆ ಹಾರಕ್ಕೆ ಹೋಗಿದ್ದೆ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಇದನ್ನೇ ತಪ್ಪಾಗಿ ಅರ್ಥೆಸಿಕೊಂಡು ಸಾಲಕೊಡದೆ ತಲೆಮರೆಸಿಕೊಂಡಿದ್ದಾನೆ ಎಂದು ನಿರ್ಮಾಪಕ ಮುರಳಿ ನನ್ನ ಮೇಲೆ ವಿನಾಕಾರಣ ವಂಚನೆ ಆರೋಪ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದ್ದವರು ಹರೀಶ್ ರಾಜ್. ‘ಗನ್ ಚಿತ್ರದ ನಟ, ನಿರ್ದೇಶಕ ಜವಾಬ್ದಾರಿ ಹೊತ್ತುಕೊಂಡಿದ್ದ  ಹರೀಶ್ ರಾಜ್ ವಿರುದ್ಧ ನಿರ್ಮಾಪಕ ಮುರಳಿ ಅನ್ನುವ ದೂರು ಕೊಟ್ಟ ಕಾರಣದಿಂದ ಕೆಲ…

ಮಹಾಮನೆಯಲ್ಲಿ ಕರಾವಳಿ ಮಂದಿಗೆ ಸಿಂಹಪಾಲು : ಶೈನ್ ಶೆಟ್ಟಿ ಶೈನ್ ಆಗ್ತಾರ ಇಂಚ….?

ಮೀರಾ ಮಾಧವ, ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟಿದ್ದಾರೆ. ಕರಾವಳಿ ಮೂಲದ ಇವರಿಗೆ ಸಿನಿಮಾ ರಂಗದಲ್ಲಿ ಬೆಳೆಯಬೇಕು ಅನ್ನುವ ಆಸೆಯಿದೆ. ಬದುಕಿನಲ್ಲಿ ಯಾವುದಕ್ಕೂ ಹಿಂಜಿರಿಯದ ಇವರ ತಾಕತ್ತಿಗೆ ಮೊಬೈಲ್ ಕ್ಯಾಂಟೀನ್ ಬೆಸ್ಟ್ ಉದಾಹರಣೆ. ಬನಶಂಕರಿ ಸಮೀಪ ಮೊಬೈಲ್ ಕ್ಯಾಂಟೀನ್ ನಡೆಸುವ ಈ ನಟ ಬಿಗ್ ಬಾಸ್ ಮನೆಯಲ್ಲಿ ಮನ ಗೆಲ್ಲುವ ತಾಕತ್ತು ಹೊಂದಿದ್ದಾರೆ….

ಸೂಜಿದಾರದ ಚೈತ್ರಾ ಕೋಟೂರ್ ಮಹಾಮನೆಯ ಏಕೈಕ ಬರಹಗಾರ್ತಿ…

‘ಸೂಜಿದಾರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟಿ ಚೈತ್ರಾ ಕೋಟೂರ್ ಈ ಬಾರಿಯ ಬಿಗ್‌ ಬಾಸ್‌ಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ, ಸಿನಿಮಾಗಳ ನಿರ್ದೇಶನದ ತಂಡದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಹುಣ್ಣಿಮೆ ರಾತ್ರಿಯಲಿ, ಹರಕು ಚಾಪೆಯಲಿ ನಾನು ಸುಮ್ಮನೆ ಮಲಗಿರಲು ಎಂಬ ಅದ್ಭುತ ಸಾಲುಗಳನ್ನು ಬರೆದವರು ಇದೇ ಚೈತ್ರಾ ಕೋಟೂರ್. ಸೂಜಿದಾರ ಸಿನಿಮಾಕ್ಕಾಗಿ ಬರೆದ ಈ ಹಾಡು…

ಮಹಾಮನೆಯಲ್ಲಿ ಕ್ಯೂಟ್ ನಿರೂಪಕಿ : ಸ್ಟಾರ್ ಗಿರಿಯನ್ನು ಕೆಳಗಿಳಿಸಿದ್ರೆ ಗೆಲುವಿನ ನಡೆ ಸುಲಭ…

ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಬಿಗ್ ಬಾಸ್ ಗೆ ಹೋಗಿ ಬಂದ ಪ್ರಮುಖ ನಿರೂಪಕ ಹಾಗೂ ನಿರೂಪಕಿಯರಾಗಿದ್ದಾರೆ. ಇದೀಗ ಚೈತ್ರ ವಾಸುದೇವನ್ ಅನ್ನುವ ಕ್ಯೂಟ್ ನಿರೂಪಕಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, ‘ಕಲರ್ಸ್ ಕನ್ನಡ…

ಇಬ್ಬರು ಹೆಂಡಿರ ಮುದ್ದಿನ ರಾಜು ತಾಳಿಕೋಟೆ…. ನಗು ತರಿಸಿದ್ರೆ ತಾಳಿಯಾನು…

ನಾನು ಜಾತಿಯಿಂದ ಮುಸ್ಲಿಂ. ಆದರೆ ನನ್ನ ಹೆಂಡತಿ ಹಿಂದೂ. ಹಾಗಾಗಿ ನಮ್ಮ ಮನೆಯಲ್ಲಿ ರಂಜಾನ್ ಹಾಗೂ ರಾಮನವಮಿ ಎರಡೂ ಆಚರಿಸಲಾಗುತ್ತದೆ ಎಂದಿದ್ದಾರೆ ರಾಜು ತಾಳಿಕೋಟೆ. ದ್ರಾಕ್ಷಿ ಕೃಷಿಯನ್ನೂ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದ, ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಗೆ 14ನೇ ಸ್ಪರ್ಧಿಯಾಗಿ ಅವರು ಪ್ರವೇಶ ಮಾಡಿದ್ದಾರೆ. ನಾಡು ಎಲ್ಲವನ್ನೂ ಕೊಟ್ಟಿದೆ, ನಾಡಿಗೆ ಏನಾದರೂ ಕೊಡಬೇಕು…

ಈ ಸುಜಾತ ಸಿತಾರಾ ಅವತಾರ ತಾಳಿದ್ರೆ ಮಹಾ ಮನೆಯಲ್ಲಿ ರಾಡಿ ರಂಪಾಟ ಗ್ಯಾರಂಟಿ…

ಕಿರುತೆರೆಯಲ್ಲಿ ನಿರೂಪಕರಾಗಿ, ನಟಿಯಾಗಿ ಗಮನಸೆಳೆದಿರುವ ಸುಜಾತಾ ಸತ್ಯನಾರಾಯಣ ಕೂಡ ಈಗ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಸದ್ಯ ಅವರು ಸ್ಟಾರ್ ಸುವರ್ಣ ವಾಹಿನಿಗಾಗಿ ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇದಕ್ಕೂ ಮೊದಲು ಸುಜಾತಾ ಸತ್ಯನಾರಾನಾರಾಯಣವರು ‘ರಾಧಾ ರಮಣ’ ಧಾರಾವಾಹಿಯಲ್ಲಿ ಸಿತಾರಾ ಪಾತ್ರದ ಮೂಲಕ ಗಮನಸೆಳೆದಿದ್ದರು. ಖಳ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರನ್ನು ಬಿಗ್‌ಬಾಸ್‌…

ದುನಿಯಾ ಅನ್ನುವ ಹೆಸರೊಂದೇ ರಶ್ಮಿಯನ್ನು ಕಾಪಾಡಬೇಕು…!

ದುನಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ನೀಡಿದ ರಶ್ಮಿ 11 ಸ್ಪರ್ಧಿಯಾಗಿ ಬಿಗ್‌ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ‘ದುನಿಯಾ’ ನಂತರ ಅಷ್ಟೊಂದು ಯಶಸ್ಸು ಕಾಣದ ರಶ್ಮಿ, ಈಗ ತಮ್ಮ ವೃತ್ತಿ ಜೀವನದ ಸೆಕೆಂಡ್ ಇನಿಂಗ್ಸ್ ಶುರು ಮಾಡೋಕೆ, ಬಿಗ್ ಮನೆಗೆ ಬಂದಿದ್ದಾರೆ. ಜಗ್ಗಿ ಜಗನ್ನಾಥ್, ಕಾರ್ನಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಶ್ಮಿಯನ್ನು ಅದ್ಯಾಕೋ ಚಂದನವನ ಒಪ್ಪಿಕೊಳ್ಳಲಿಲ್ಲ….