ಜನ್ಮದಿನ ಚಿತ್ರೀಕರಣಕ್ಕೆ ಡ್ರೋನ್ ಬಳಸಿದ್ದೇ ತಪ್ಪಾಯ್ತು
ನವದೆಹಲಿ : ದೆಹಲಿಯಲ್ಲಿ ಆಯೋಜಿಸಲಾಗಿದ್ದ G-20 ಶೃಂಗಸಭೆ ಹಿನ್ನಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ವಿದೇಶದ ಅತೀ ಗಣ್ಯರು ರಾಜಧಾನಿಗೆ ಭೇಟಿ ನೀಡುತ್ತಿರುವ ಕಾರಣ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ನಡುವೆ ಜನ್ಮದಿನ ಆಚರಣೆಯೊಂದು ಸಂಕಷ್ಟ ತಂದೊಡ್ಡಿದೆ.
ಜಿ 20 ಹಿನ್ನಲೆಯಲ್ಲಿ ಕೈಗೊಂಡ ಬಿಗಿ ಭದ್ರತೆ ಭಾಗವಾಗಿ ಡ್ರೋನ್ ಹಾರಾಟದ ಮೇಲೂ ನಿರ್ಬಂಧ ಹೇರಲಾಗಿತ್ತು. ಹಾಗಿದ್ದರೂ ಕೇಂದ್ರ ದೆಹಲಿ ಪ್ರದೇಶದಲ್ಲಿ ಅದ್ದೂರಿ ಜನ್ಮದಿನ ಆಚರಿಸಿದ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ. ಬರ್ತ್ ಡೇ ಕಾರ್ಯಕ್ರಮವನ್ನು ಡ್ರೋನ್ ಬಳಸಿ ಚಿತ್ರೀಕರಿಸಿದ್ದೇ ತಪ್ಪಾಗಿದ್ದು, ಪಾರ್ಟಿ ಆಯೋಜಿಸಿದ ಕುಟುಂಬಸ್ಥರು ಮತ್ತು ಡ್ರೋನ್ ಹಾರಿಸಿದ ಕ್ಯಾಮಾರಮನ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಸಿ 188ರಡಿ ಅಡಿಯಲ್ಲಿ FIR ದಾಖಲಾಗಿದ್ದು, ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪ ಸಾಬೀತಾದ್ರೆ 1 ತಿಂಗಳ ಸೆರೆವಾಸ ಅಥವಾ 200 ರೂಪಾಯಿ ದಂಡ, ತಪ್ಪಿದ್ರೆ ಎರಡೂ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರಬಹುದು.
Discussion about this post