ಟ್ಯಾಂಕರ್ ನೀರಿನ ದರ ಕೇಳಿದ್ರೆ ನೀರು ಕುಡಿಯೋದೇ ಬೇಡ ಅನ್ನಿಸುತ್ತಿದೆ Bengaluru Water Crisis
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯೋ ನೀರಿನ ಸಮಸ್ಯೆ ತೀವ್ರವಾಗಿದೆ. Bengaluru Water Crisis ಫೆಬ್ರವರಿ ಹೊತ್ತಿಗೆ ಬಿಸಿಲಿನ ಝಳ ಹೆಚ್ಚಾಗಿದ್ದು, ಬಿರು ಬೇಸಿಗೆಯ ಅನುಭವವಾಗುತ್ತಿದೆ ಈ ನಡುವೆ ಬೋರ್ ವೆಲ್ ಬತ್ತಿದ್ದು, ಕಾವೇರಿ ಕೈ ಕೊಟ್ಟಿದ್ದು, ಟ್ಯಾಂಕರ್ ನೀರನ್ನೇ ( Water tanker )ಅವಲಂಭಿಸಬೇಕಾಗಿದೆ.
ಬೆಂಗಳೂರಿನಲ್ಲಿ ನವೆಂಬರ್ ನಲ್ಲಿ ಕುಡಿಯೋ ನೀರಿನ ಸಮಸ್ಯೆ ಶುರುವಾಗಿತ್ತು. ರಾಜಧಾನಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಸಹಜವಾಗಿಯೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿರುವ ಜಲಮಂಡಳಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ : ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಪ್ರವೇಶ
ಹೀಗಾಗಿ ಬಹುತೇಕ ಅಪಾರ್ಟ್ ಮೆಂಟ್ ಗಳು ಟ್ಯಾಂಕರ್ ನೀರಿನ ಮೊರೆ ಹೋಗಿದೆ. ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರವೂ ಏರಲಾರಂಭಿಸಿದೆ
ಸಾಮಾನ್ಯವಾಗಿ 6000 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರಿಗೆ 500 ರೂಪಾಯಿ ದರ ವಿಧಿಸಲಾಗುತ್ತಿದ್ದು, ಈಗ ಈ ಮೊತ್ತ 1500ರ ಗಡಿ ದಾಟಿದ್ದು, ಕೆಲ ಏರಿಯಾಗಳಲ್ಲಿ 2000 ಸಾವಿರ ರೂಪಾಯಿ ದರ ವಿಧಿಸಲಾಗುತ್ತಿದೆ.
ಇದೇ ಪರಿಸ್ಥಿತಿ ಮುಂದುವರಿದ್ರೆ ಮಾರ್ಚ್ ಏಪ್ರಿಲ್ ಹೊತ್ತಿಗೆ ಟ್ಯಾಂಕರ್ ನೀರಿನ ದರ 3 ಸಾವಿರ ರೂಪಾಯಿಯಾದರೂ ಅಚ್ಚರಿ ಇಲ್ಲ.
ಇದನ್ನೂ ಓದಿ : ಕ್ಯಾನ್ಸರ್ನಿಂದ ದೂರವಿರಲು ʼಕ್ಯಾನ್ಸರ್ ಪ್ರಿವೆನ್ಷನ್ ಎ ಗೈಡ್ʼ ಪುಸ್ತಕ ಅನಾವರಣ
ಟ್ಯಾಂಕರ್ ನೀರಿನ ದರ ಏರಿಕೆಗೆ ಬೇಡಿಕೆಯೊಂದೇ ಕಾರಣವಲ್ಲ. ಅಂತರ್ಜಲ ಕೊರತೆಯಿಂದ ಹಲವಾರು ಕಡೆಗಳಲ್ಲಿ ಬೋರ್ ವೆಲ್ ಗಳು ಕೂಡಾ ಬತ್ತಿ ಹೋಗಿದೆ. ಹೀಗಾಗಿ ಟ್ಯಾಂಕರ್ ತುಂಬಿಸಿಕೊಳ್ಳಲು 50 ಕಿಮೀಗೂ ಅಧಿಕ ದೂರವನ್ನು ಪ್ರಯಾಣಿಸಬೇಕಾಗಿದೆ. ಅಲ್ಲೂ ನೀರು ತುಂಬಿಸಿಕೊಳ್ಳಲು ಗಂಟೆ ಗಟ್ಟಲೆ ಕಾಯಬೇಕು.
ದಿನಕ್ಕೆ 12 ಟ್ರಿಪ್ ಹೊಡೆಯುತ್ತಿದ್ದ ಟ್ಯಾಂಕರ್ ಚಾಲಕರು, ಕೇವಲ 3 ರಿಂದ 4 ಟ್ರಿಪ್ ಹೊಡೆಯಲು ಸಾಧ್ಯವಾಗುತ್ತಿದೆ. ಅಷ್ಟರ ಮಟ್ಟಿಗೆ ನೀರಿನ ಬೇಡಿಕೆ ಏರಿದೆ
ಇನ್ನು ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಕೆದಾರರು ಹೊಸ ಆಡರ್ಡರ್ ತೆಗೆದುಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ತಮ್ಮ ಮಾಮೂಲಿ ಗ್ರಾಹಕರಿಗೆ ಮಾತ್ರ ನೀರು ಪೂರೈಸುತ್ತಿದ್ದಾರೆ.
Discussion about this post