ಎರಡು ಮಕ್ಕಳನ್ನು ಹೊಂದಿದ್ದ ತಾಯಿಯೊಬ್ಬರು ಮೂರನೇ ಗರ್ಭ ತೆಗೆಸಲು ಸುಪ್ರೀಂ ಮೆಟ್ಟಿಲೇರಿದ್ದರು. ಈ ವೇಳೆ ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈ ತೀರ್ಪಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು
ನವದೆಹಲಿ : ಗರ್ಭಕ್ಕೆ 26 ವಾರ ತುಂಬಿರುವ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್ ವಿವಾಹಿತ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ. ಗರ್ಭಪಾತಕ್ಕೆ ನಿಗದಿಪಡಿಸಿರುವ 24 ವಾರಗಳು ಕಳೆದು ಹೋಗಿದೆ. ಜೊತೆಗೆ ತಜ್ಞರ ವರದಿಯಲ್ಲಿ ಭ್ರೂಣ ಹಾಗೂ ತಾಯಿಯ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಇದೇ ಆದೇಶದಲ್ಲಿ ಮಹಿಳೆಯು ಗರ್ಭ ಧರಿಸಿ 26 ವಾರ ಮತ್ತು 5 ದಿನ ಆಗಿದೆ. ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸುವುದು ತಪ್ಪಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
Read this : ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ
ಪ್ರಕರಣದ ಹಿನ್ನಲೆ
ಎರಡು ಮಕ್ಕಳಿದ್ದು, ಮೂರನೇ ಸಲ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು ಗರ್ಭ ತೆಗೆಸಲು ಅನುಮತಿ ಕೋರಿ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. 27 ವರ್ಷದ ಮಹಿಳೆಯ ವಾದ ಆಲಿಸಿದ್ದ ನ್ಯಾಯಾಲಯ ಮೊದಲು ಗರ್ಭ ತೆಗೆಸಲು ಅನುಮತಿ ನೀಡಿತ್ತು. ಆದರೆ ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ತೀರ್ಪು ಹಿಂಪಡೆಯುವಂತೆ ಮನವಿ ಮಾಡಿತ್ತು. ತಜ್ಞರ ವರದಿ ಸಲ್ಲಿಸಿ ತೀರ್ಪು ಮರು ಪರಿಶೀಲನೆಗೆ ಕೋರಿತ್ತು. ಏಮ್ಸ್ ನ ತಜ್ಞರ ವರದಿ ಸಲ್ಲಿಕೆಯ ಬಳಿಕೆ ದ್ವಿಸದಸ್ಯ ಪೀಠದಲ್ಲಿ ಭಿನ್ನ ತೀರ್ಪು ಪ್ರಕಟಗೊಂಡಿತು. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿ.ವಿ. ನಾಗರತ್ನ ಅವರ ಪೀಠ ಭಿನ್ನ ತೀರ್ಪು ಪ್ರಕಟಿಸಿತ್ತು.
Read this : ಹೃದಯ ಕಸಿ ಮೂಲಕ 61 ವರ್ಷದ ವ್ಯಕ್ತಿಗೆ ಹೊಸ ಜೀವನ ಕಲ್ಪಿಸಿದ ಆಸ್ಟರ್ ( Aster) ಸಿಎಂಐ ಆಸ್ಪತ್ರೆ
ಈ ಹಿನ್ನಲೆಯಲ್ಲಿ ಇಡೀ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದರು. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿತ್ತು.
ಗರ್ಭಿಣಿ ಅಥವಾ ಭ್ರೂಣದ ಆರೋಗ್ಯದಲ್ಲಿ ಗಂಭೀರ ಸಮಸ್ಯೆ, ಅತ್ಯಾಚಾರದಿಂದ ಗರ್ಭಧಾರಣೆ, ಗರ್ಭಿಣಿ ಅಪ್ರಾಪ್ತೆಯಾಗಿದ್ದ ಸಂದರ್ಭಗಳಲ್ಲಿ ಮಾತ್ರ 24 ವಾರದ ಭ್ರೂಣ ತೆಗಸಲು ಕಾಯ್ದೆಯಲ್ಲಿ ಅನುಮತಿ ಇದೆ. ಅದಕ್ಕೂ ವೈದ್ಯಕೀಯ ಶಿಫಾರಸು ಕಡ್ಡಾಯ
Discussion about this post