Category: News

ಬೆಂಗಳೂರಿನಲ್ಲಿ ಬೈಕ್ ಏರಿದ ಮುಖ್ಯಮಂತ್ರಿ ಕುಮಾರಸ್ವಾಮಿ

ರಾಜ್ಯ ಸರ್ಕಾರ ವಿನೂತನ ಯೋಜನೆಯಾದ “ಜನ ಸೇವಕ – ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳು” ಯೋಜನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಬಾಗಲಗುಂಟೆಯಲ್ಲಿ ಮನೆ ಮನೆ ತೆರಳಿ ಚಾಲನೆ ನೀಡಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಯೋಜನೆಯನ್ನು ಮುಖ್ಯಮಂತ್ರಿಗಳು ಸ್ಥಳೀಯರೊಬ್ಬರ ಮೋಟಾರ್ ಸೈಕಲ್ ಮೇಲೆ ಕುಳಿತು ಹಲವಾರು ಮನೆಗಳಿಗೆ ತೆರಳಿ ಯೋಜನೆಯ ಲಾಭ ಪಡೆಯುವಂತೆ ಕೋರಿದರು. ಈ ಸಂದರ್ಭದಲ್ಲಿ ನಾಗರಿಕರೊಂದಿಗೆ…

ಭಾರತಕ್ಕೆ ಮರಳಿದ ವೀರ ಪುತ್ರ : ಅಭಿನಂದನ್ ಗೆ ಸ್ವಾಗತ ಕೋರಿದ ರಾಜಕೀಯ ನಾಯಕರು

ಏರ್ ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕಿಸ್ತಾನಿ ಸೈನಿಕರರ ವಶದಲ್ಲಿ ಸಿಕ್ಕು ಹಿಂಸೆ ಅನುಭವಿಸಿ ಈಗ ಬಿಡುಗಡೆಯಾಗಿರುವ ಭಾರತದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಹ ಸ್ವಾಗತ ಕೋರಿದ್ದು, ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಪ್ರಧಾನಿ ಮೋದಿ ಸ್ವಾಗತ ಕೋರಿದ್ದು, ಅವರ ಶೌರ್ಯಕ್ಕೆ ಇಡೀ…

ಅತ್ತೆ ಸೊಸೆ ಜಗಳ ಸುದ್ದಿಯನ್ನು ನಂಬಬೇಡಿ : ಪುಲ್ವಾಮದಲ್ಲಿ ಹುತಾತ್ಮರಾದ ಯೋಧ ಗುರು ತಾಯಿ ಕಣ್ಣೀರು

ಮನೆಯಲ್ಲಿ ಕಿತ್ತಾಟ ಏನೂ ಇಲ್ಲ. ಅತ್ತೆ ಸೊಸೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಅನ್ನುವ ಮಾತುಗಳು ಮಾಧ್ಯಮಗಳಲ್ಲಿ ಬಂದಿದೆ. ದಯವಿಟ್ಟು ಅದನ್ನು ನಂಬಬೇಡಿ ಎಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ತಾಯಿ ಚಿಕ್ತಾಯಮ್ಮ ಮನವಿ ಮಾಡಿದ್ದಾರೆ. ನಾನು ಮತ್ತು ಸೊಸೆ ಅಮ್ಮ ಮಗಳ ರೀತಿ ಇದ್ದೇವೆ. ಹಲವಾರು ಮಂದಿ ಅಷ್ಟು ಕೋಟಿ ಇಷ್ಟು ಕೋಟಿ ಎಂದು ಹೇಳುತ್ತಿದ್ದಾರೆ. ಬಂದ…

ತವರಿಗೆ ಮಹಾವೀರ : ಎಂಟೆದೆ ಭಂಟ ವೀರ ಅಭಿನಂದನ್ ಗೆ ಅದ್ದೂರಿ ಸ್ವಾಗತ

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ರಾತ್ರಿ ಸರಿ ಸುಮಾರು 9.20 ಗಂಟೆಗೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ವಾಪಸ್​ ಕಳುಹಿಸಿದೆ. ಏರ್​​ ವೈಸ್​​ ಮಾರ್ಷಲ್​​ಗಳಾದ ಆರ್​ಜಿಕೆ ಕಪೂರ್​​ ಮತ್ತು ಶ್ರೀಕುಮಾರ್​​ ಪ್ರಭಾಕರನ್​, ಪೈಲಟ್​​ ಅಭಿನಂದನ್ ಅವರನ್ನು ಸ್ವಾಗತಿಸಿದರು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹಿಂದೂಸ್ತಾನಕ್ಕೆ  ವಾಪಸ್​​ ಕಳುಹಿಸುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ​​ ಸಂಸತ್ತಿನಲ್ಲಿ ನಿನ್ನೆಯೇ…

ಅಭಿನಂದನ್ ಬಿಡುಗಡೆ ವಿಳಂಭ : ನಾಟಕ ಪ್ರಾರಂಭಿಸಿದ ಪಾಪಿಸ್ತಾನ

ಕಂತ್ರಿ, ಕುತಂತ್ರಿ, ಪಾಪಿಸ್ತಾನ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಪಾಕಿಸ್ತಾನ ಎಂಬ ರಕ್ತ ಪಿಪಾಸು ರಾಷ್ಟ್ರ ಮತ್ತೆ ತನ್ನ ನರಿ ಬುದ್ದಿಯನ್ನು ತೋರಿಸಲಾರಂಭಿಸಿದ್ದಾರೆ. ನಿನ್ನೆ ಪಾಕಿಸ್ತಾನದ ಸಂಸತ್ತಿನಲ್ಲಿ ಶಾಂತಿ ಹೆಜ್ಜೆಯಿಡುವ ನಿಟ್ಟಿನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಸುಳ್ಳೇ ನನ್ನಪ್ಪ ಅನ್ನುವುದನ್ನು ರಕ್ತದಲ್ಲಿ ಬೆರೆಸಿರುವ ಪಾಕಿಸ್ತಾನ ನಿನ್ನೆ ಸಂಸತ್ತಿನಲ್ಲಿ ಹೇಳಿರುವುದು ಸುಳ್ಳು ಅನ್ನುವುದನ್ನು ಸಾಬೀತು ಮಾಡಿದೆ. ನಿಗದಿಯಂತೆ…

ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳಾಗದಿರಲಿ : ಪೇಜಾವರ ಶ್ರೀ

ವಿಂಗ್ ಕಮಾಂಡರ್ ಅಭಿನಂದನ್ ತೋರಿದ್ದು ಮೆಚ್ಚುವ ಧೈರ್ಯ. ಶತ್ರುಗಳ ದೇಶದಲ್ಲಿ ಆವರು ವರ್ತಿಸಿದ ರೀತಿಯಿಂದ ದೇಶದ ಗೌರವ ಹೆಚ್ಚಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವು ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರಿಗೂ ಹಾನಿಯಾಗುತ್ತದೆ. ಹಾಗಾಗಿ ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದರು. ಇದೇ ವೇಳೆ ಬುದ್ದಿಜೀವಿಗಳ ಬಗ್ಗೆ…

ಪಾಪಿಸ್ತಾನ ಪ್ರಧಾನಿಯ ಅಸಲಿ ಮುಖವೇನು : ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ರೆ ಉರಿದು ಬಿದ್ದನಲ್ಲ ಇಮ್ರಾನ್ ಖಾನ್

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ ನಲ್ಲಿ ಅದ್ಭುತವಾದ ಭಾಷಣ ಮಾಡಿದ್ದಾರೆ. ನಾನೊಬ್ಬ ಒಳ್ಳೆಯ ಕ್ರಿಕೆಟರ್ ಮಾತ್ರವಲ್ಲ ಚೆನ್ನಾಗಿ ಕಥೆಯೂ ಹೇಳಲು ಬರುತ್ತದೆ ಅನ್ನುವುದನ್ನು ಸಾಬೀತು ಮಾಡಿದ್ದಾರೆ. ಪುಲ್ವಾಮ ದಾಳಿಗೂ ನಮಗೂ ಸಂಬಂಧವೇ ಇಲ್ಲ ಅನ್ನುವಂತೆ ಇಮ್ರಾನ್ ಖಾನ್ ಮಾತನಾಡಿದ್ದಾರೆ. “ ಪುಲ್ವಾಮ ಘಟನೆ ನಡೆದು ಅರ್ಧ ಗಂಟೆಯೂ ಆಗಿರಲಿಲ್ಲ. ಆಗಲೇ ಭಾರತವು ಪಾಕಿಸ್ತಾನದತ್ತಾ ಬೆರಳು ತೋರಿಸಿತು. ಈ ಘಟನೆ…