ಒಂದು ಕಡೆ ಅಣ್ಣಾಮಲೈ ಮತ್ತೊಂದು ಮಾಧವನ್, ಇದೀಗ ನಟ ವಿಜಯ್ ಕೂಡಾ ಡಿಎಂಕೆ ವಿರುದ್ಧ ತೊಡೆ ತಟ್ಟುವಂತಿದೆ
ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಹಾಗೂ ಎಐಡಿಎಂಕೆ ಪಾರ್ಟಿಗಳದ್ದೇ ಕಾರುಬಾರು. ಜಯಲಲಿತಾ ನಿಧನದ ಬಳಿಕ ಎಐಡಿಎಂಕೆಯ ಶಕ್ತಿ ನಿಧಾನವಾಗಿ ಕುಗ್ಗಲಾರಂಭಿಸಿದೆ. ಬಣ ರಾಜಕೀಯದ ಕಾರಣದಿಂದ ಜಯಲಲಿತಾ ಬೆಳೆಸಿದ್ದ ಪಕ್ಷ ಕುಸಿಯುತ್ತಿದೆ. ಹೀಗಾಗಿಯೇ ಡಿಎಂಕೆ ಬಲ ವೃದ್ಧಿಸಿಕೊಂಡಿದೆ. ಆದರೆ ಪದೇ ಪದೇ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಡಿಎಂಕೆ ನಾಯಕರು ಜನರ ಅಸಹನೆಗೂ ಗುರಿಯಾಗಿದ್ದರೆ. ಅದರಲ್ಲೂ ಸನಾತನ ಧರ್ಮದ ವಿಚಾರ ಪ್ರಸ್ತಾಪಿಸಿದ ಕಾರಣಕ್ಕೆ ಡಿಎಂಕೆ ದೊಡ್ಡ ಬೆಲೆ ತೆರಬೇಕಾಗುವ ಎಲ್ಲಾ ಸಾಧ್ಯತೆಗಳಿವೆ.
ಈ ನಡುವೆ ಪ್ರಾದೇಶಿಕ್ಷ ಪಕ್ಷಗಳ ಪಾರುಪತ್ಯ ಅಂತ್ಯಗೊಳಿಸಲೆಂದೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಬೇರೆ ಬೇರೆ ಹಂತದ ಹೋರಾಟಗಳ ಮೂಲಕ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ.
ಈ ಎಲ್ಲದರ ನಡುವೆ ತಮಿಳುನಾಡು ರಾಜಕೀಯದಲ್ಲಿ ಸುಂಟರಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಕಾರಣದಿಂದಲೇ ಆಡಳಿತರೂಢ ಡಿಎಂಕೆ ಕೂಡಾ ಮಂಡೆ ಬೆಚ್ಚ ಮಾಡಿಕೊಂಡಿದೆಯಂತೆ. ನಟ ವಿಜಯ್ ಪಾಲಿಟಿಕ್ಸ್ ಗೆ ಎಂಟ್ರಿ ಕೊಡಲಿದ್ದಾರೆ ಅನ್ನುವ ಸುದ್ದಿ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇಳಯ ದಳಪತಿ ವಿಜಯ್. ತಮಿಳುನಾಡಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಮಾಸ್ ನಾಯಕ. ರಜಿನಿಕಾಂತ್ ನಂತರ ತಮಿಳು ಚಿತ್ರರಂಗದಲ್ಲಿ ತಲೈವಾ ಎಂದೆ ಕರೆಸಿಕೊಂಡಿರುವ ವಿಜಯ್ ಪಾಲಿಟಿಕ್ಸ್ಗೆ ಎಂಟ್ರಿ ಕೊಡೋಕೆ ಸಿದ್ಧತೆ ನಡೆಸಿದ್ದಾರಂತೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ತಮಿಳುನಾಡಿನ ಮುಂದಿನ ವಿಧಾವಸಭಾ ಎಲೆಕ್ಷನ್ನಲ್ಲಿ ಆಡಳಿತರೂಢ ಡಿಎಂಕೆ ಪಕ್ಷದ ವಿರುದ್ಧ ವಿಜಯ್ ತೊಡೆ ತಟ್ಟಲಿದ್ದಾರೆ.
ವಿಜಯ್ ತಂದೆ ಚಂದ್ರಶೇಖರ್ ಮಗನ ಹೆಸರಿನಲ್ಲಿ ರಾಜಕೀಯ ಪಕ್ಷ ನೊಂದಣಿ ಮಾಡಿಸಿ ಅಭಿಮಾನಿಗಳನ್ನು ಸಂಘಟಿಸುತ್ತಿದ್ದಾರೆ. ತಂದೆಯ ಚಟುವಟಿಕೆಗೂ ನನಗೂ ಸಂಬಂಧವಿಲ್ಲ ಎಂದು ವಿಜಯ್ ಹೇಳಿಕೊಂಡರೂ, ಅದನ್ನು ಒಪ್ಪಲು ಯಾರೊಬ್ಬರೂ ಸಿದ್ದರಿಲ್ಲ. ಪೂರಕ ಅನ್ನುವಂತೆ ವಿಜಯ್ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ನೆಪದಲ್ಲಿ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನವನ್ನೂ ನಡೆಸಿದ್ದರು.
ಒಂದು ವೇಳೆ ವಿಜಯ್ ರಾಜಕೀಯ ಪ್ರವೇಶಿಸಿದ್ರೆ ತಮಿಳುನಾಡಿನಲ್ಲಿ ಸುಂಟರಗಾಳಿಯಲ್ಲ ಬಿರುಗಾಳಿಯೇ ಎದ್ದರೂ ಅಚ್ಚರಿ ಇಲ್ಲ.
Discussion about this post