Category: News

SSLC ಪರೀಕ್ಷೆ ಶುಭ ಕೋರಿದ ಗಣ್ಯರು

ಬೆಂಗಳೂರು : ರಾಜ್ಯದಲ್ಲಿ SSLC ಪರೀಕ್ಷೆಗಳು ಪ್ರಾರಂಭಗೊಂಡಿದೆ. ಇಡೀ ಕರುನಾಡು SSLC ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ. ದೇವರೇ ಮಕ್ಕಳಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರತಿಯೊಬ್ಬರೂ ಬೇಡಿಕೊಳ್ಳುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದು ಮಕ್ಕಳಿಗೆ ಶುಭ ಕೋರಿದ್ದಾರೆ. ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಾ ಮಕ್ಕಳಿಗೆ ಗುಡ್ ಲಕ್ ಅಂದಿದ್ದಾರೆ. ಪ್ರತಿಪಕ್ಷಗಳ ಕಡೆಯಿಂದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕೂಡಾ ಭಯಪಡಬೇಡಿ, ಧೈರ್ಯವಾಗಿ…

ಮುಪ್ಪಿನ ಚಪಲ – 16ರ ಬಾಲಕಿಗೆ ಪ್ರೇಮ ಪತ್ರ ಕೊಟ್ಟ 66ರ ವೃದ್ಧ

60 ದಾಟಿದ್ರೆ ಅರುಳು ಮರಳು ಅನ್ನುವ ಮಾತಿದೆ. ಆದರೆ ತಮಿಳುನಾಡಿನಲ್ಲಿ 60 ದಾಟಿದ ಮುದುಕನೊಬ್ಬ ಗಾದೆ ಮಾತನ್ನೂ ಮೀರಿ ವರ್ತಿಸಿದ್ದಾನೆ. 66ರ ವೃದ್ಧನೊಬ್ಬ 16ರ ಬಾಲಕಿಗೆ ಲವ್ ಲೆಟರ್ ನೀಡಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ವೃದ್ಧ ಚಪಲ ಚನ್ನಿಗರಾಯನನ್ನು ಮೊಹಮ್ಮದ್ ಬಾಹಿರ್ ಬಾಷಾ ಎಂದು ಗುರುತಿಸಲಾಗಿದೆ. ಮುದುಕ ಕೊಟ್ಟ ಲವ್ ಲೆಟರ್ ಅನ್ನು ಹಾಲಕಿ ಪೋಷಕರಿಗೆ ತೋರಿಸಿದ್ದಾಳೆ. ಗಾಬರಿಗೊಂಡ ಪೋಷಕರು…

ಪಡೆದದ್ದು ಕೆಮ್ಮಿನ ಔಷಧಿಗೆ ಲೈಸೆನ್ಸ್ ತಯಾರಿಸಿದ್ದು ಕೊರೋನಾ ಮಾತ್ರೆ

ಬೆಂಗಳೂರು : ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿರುವ ಕೊರೋನಿಲ್ ಮಾತ್ರೆ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆದುಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಸಂಸ್ಥೆಗೆ ನೋಟಿಸ್ ನೀಡಲು ಉತ್ತರಾಖಂಡರದ ಆಯುರ್ವೇದ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗಾಗಲೇ ಕೊರೋನಿಲ್ ಮಾತ್ರೆಯ ಜಾಹೀರಾತು ನಿಲ್ಲಿಸುವಂತೆ ಸೂಚಿಸಿರುವ ಆಯುಷ್, ಕ್ಲಿನಿಕಲ್ ಟ್ರಯಲ್ ನ ಮಾಹಿತಿಯನ್ನು ಕೊಡುವಂತೆ ಸೂಚಿಸಿದೆ. ಈ ನಡುವೆ ಕೆಮ್ಮು, ಜ್ವರದ…

ಕೊರೋನಾ ಬಗ್ಗೆ ಪೈಲೆಟ್ ಚರ್ಚೆ – ಪಾಕ್ ವಿಮಾನ ಪತನ

ಪಾಕಿಸ್ತಾನ : ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವಲ್ಲ, ಬದಲಾಗಿ ಪೈಲೆಟ್ ಗಳು ತಮ್ಮ ಕರ್ತವ್ಯದ ಕಡೆಗೆ ಗಮನ ಕೊಡುವುದನ್ನು ಬಿಟ್ಟು ಕೊರೋನಾ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು ಕಾರಣ ಎಂದು ಗೊತ್ತಾಗಿದೆ. ವಿಮಾನ ಅಪಘಾತ ಬಗ್ಗೆ ತನಿಖೆ ನಡೆಸುತ್ತಿದ್ದ ಸಂಸ್ಥೆ ಕಾಕ್ ಪಿಟ್ ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಸಂಸತ್ತಿಗೂ ಮಾಹಿತಿ ನೀಡಲಾಗಿದೆ. ಈ…

ಸಚಿವ ಡಾ.ಕೆ. ಸುಧಾಕರ್ ಮನೆಯ ನಾಲ್ವರು ಸದಸ್ಯರಿಗೆ ಕೊರೋನಾ ಸೋಂಕು

ಬೆಂಗಳೂರು : ಸೂರ್ಯಗ್ರಹಣದ ಬೆನ್ನಲ್ಲೇ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಶಾಕ್ ಸುದ್ದಿ ಬಂದಿದೆ. ನಿನ್ನೆಯಷ್ಚೇ ಸುಧಾಕರ್ ಮನೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ತಗುಲಿದೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ಅವರ ತಂದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಬೆಳಗ್ಗೆ ಡಾ. ಕೆ. ಸುಧಾಕರ್ ಅವರ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದನ್ನು ಸಚಿವರೇ…

ಕರಾವಳಿ ಜಿಲ್ಲೆಯ ಶಾಲೆ ಒಂದು ವರ್ಷ ಬಂದ್

ದಕ್ಷಿಣ ಕನ್ನಡ : ಕೊರೋನಾ ಆತಂಕದ ನಡುವೆ ಶಾಲೆ ಪ್ರಾರಂಭಿಸುವ ಕುರಿತಂತೆ ಚಿಂತನೆಗಳು, ಚರ್ಚೆ ನಡೆಯುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ವರ್ಕಿಂಗ್ ದಂಪತಿಗಳು ಶಾಲೆ ಶುರುವಾದ್ರೆ ಅನುಕೂಲ ಅನ್ನುವ ವಾದವನ್ನೂ ಮಂಡಿಸಿದ್ದಾರೆ. ಈ ನಡುವೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯದ ವಸತಿ ನಿಯ ವಿದ್ಯಾ ಸಂಸ್ಥೆಯನ್ನು…

ಬೆಂಗಳೂರಿನ ಇಬ್ಬರು sslc ಮಕ್ಕಳಿಗೆ ಕೊರೋನಾ ಸೋಂಕು

ಬೆಂಗಳೂರು : ಒಂದೆಡೆ ರಾಜ್ಯ ಸರ್ಕಾರ SSLC ಪರೀಕ್ಷೆ ನಡೆಸಲು ಸಿದ್ದತೆ ನಡೆಸುತ್ತಿದೆ. ಮಕ್ಕಳು ಕೂಡಾ ಶೈಕ್ಷಣಿಕ ಹಂತದ ಪ್ರಮುಖ ಘಟ್ಚ ಅನ್ನಿಸಿರುವ sslc  ಪರೀಕ್ಷೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಜೂನ್ 25ರಿಂದ ಪರೀಕ್ಷೆ ಬರೆಯಬೇಕಾಗಿರುವ ಬೆಂಗಳೂರಿನ ಇಬ್ಬರು SSLC ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಹೀಗಾಗಿ ಪರೀಕ್ಷೆ ಬರೆಯಲು ಸಿದ್ದವಾಗುತ್ತಿರುವ ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರು ಕಲಾಸಿಪಾಳ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮೃತರಾಗಿದ್ದ…

ದೇವೇಗೌಡರು ಮತ್ತು ಚೆನ್ನಮ್ಮ ದಂಪತಿಗೆ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ದಂಪತಿ ತಮ್ಮ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾ ಮೂಲಕ ತಾತಾ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯನ್ನು ಕೋರಿದ್ದಾರೆ.

ಮುತ್ತಪ್ಪ ರೈ ಆರೋಗ್ಯ ಪರಿಸ್ಥಿತಿ ಚಿಂತಾಜನಕ

ಬೆಂಗಳೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅವರು ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದು, ತನ್ನ ವಿಲ್ ಪವರ್ ಮೂಲಕ ಇನ್ನಷ್ಟು ದಿನ ಬದುಕುತ್ತೇನೆ ಅನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.

ಕನ್ನಡದ ಹಾಸ್ಯ ನಟ ಮೈಕಲ್ ಮಧು ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಮಧು ನಿಧನ ಹೊಂದಿದ್ದಾರೆ. ಇಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಇವರು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆಯಷ್ಟು ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಾಳೆ ಬೆಳಗ್ಗೆ ಕಿಮ್ಸ್ ಆಸ್ಪತ್ರೆ ಮೈಕಲ್ ಮಧು ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಒಪ್ಪಿಸಲಿದೆ.