ಆಫ್ಸ್ಪ ಕಾಯ್ದೆ ಜಾರಿಯ ಕಾರಣದಿಂದ ಸಶಸ್ತ್ರ ಪಡೆಗಳು ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಶ್ರಮಿಸಲಿದೆ
ಮಣಿಪುರದಲ್ಲಿ ಹಿಂಸಾಚಾರ ನಿಲ್ಲದೆ ಇರುವ ಕಾರಣದಿಂದ ರಾಜ್ಯದಲ್ಲಿ (Manipura) ಆಫ್ಸ್ಪ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ – AFSPA) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದು ರಾಜ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡ ಬೆನ್ನಲ್ಲೇ ಈ ಆದೇಶ ಹೊರ ಬಿದ್ದಿದೆ.
ಏನಿದು ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ 1958
ಕಾಯ್ದೆಯ ಪ್ರಕಾರ ಕಾನೂನು ಬಾಹಿರ ವ್ಯಕ್ತಿಗಳ ಮೇಲೆ ಗುಂಡು ಹಾರಿಸಬಹುದು. ಅನುಮಾನಿತ ವ್ಯಕ್ತಿಗಳನ್ನು ವಾರಂಟ್ ಇಲ್ಲದೇ ಬಂಧಿಸಬಹುದು. ಯಾವುದೇ ವಾಹನವನ್ನು ತಡೆಗಟ್ಟಿ ಪರಿಶೀಲಿಸಬಹುದು. ಜೊತೆಗೆ ಯೋಧರು ಯಾವುದೇ ಕಾರಣಕ್ಕೂ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸುವ ಹಾಗೂ ವಿಚಾರಣೆ ನಡೆಸಲು ಅವಕಾಶವೇ ಇಲ್ಲಿ ಇಲ್ಲ. ಈ ಕಾಯ್ದೆ ಭಾರತದಲ್ಲಿ ಮೊದಲು ಜಾರಿಗೆ ತಂದವರು ಬ್ರಿಟಿಷರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಈ ಕಾಯ್ದೆಯನ್ನು ಬಳಸಿ ಅವರನ್ನು ನಿಯಂತ್ರಿಸಲಾಗುತ್ತಿತ್ತು.
Discussion about this post