ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಈಶ್ವರಪ್ಪ, ಇದು ಮಗನ ರಾಜಕೀಯ ಭವಿಷ್ಯದ ಚರ್ಚೆ ಆಗಿರೋ ಸಾಧ್ಯತೆಗಳಿದೆ
ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಬಿಜೆಪಿಯ ಒಂದು ವರ್ಗ ಆತಂಕಕ್ಕೆ ಒಳಗಾಗಿದ್ರೆ, ಕುಮಾರಸ್ವಾಮಿಯವರ ಜೊತೆಗೆ ಆತ್ಮೀಯತೆ ಹೊಂದಿರುವ ಬಿಜೆಪಿ ನಾಯಕರು ದಾಳ ಉರುಳಿಸಲಾರಂಭಿಸಿದ್ದಾರೆ.
ಈ ನಡುವೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಮುಖಂಡ ಸಾರಾ ಮಹೇಶ್ ಕೂಡಾ ಉಪಸ್ಥಿತರಿದ್ದರು.
ಈಶ್ವರಪ್ಪ ಅವರು ಈಗಾಗಲೇ ರಾಜಕೀಯ ನಿವೃತಿ ಪಡೆದಿದ್ದು, ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಗನನ್ನು ಕಣಕ್ಕಿಳಿಸಲು ಸರ್ಕಸ್ ನಡೆದಿದೆ. ಹಾಲಿ ಸಂಸದ ಶಿವಕುಮಾರ ಉದಾಸಿಯವರು ವೈಯುಕ್ತಿಕ ಕಾರಣಗಳಿಂದ ರಾಜಕೀಯ ನಿವೃತಿ ಪಡೆಯಲಿದ್ದು, ಅವರ ಬೆಂಬಲದೊಂದಿಗೆ ಈಶ್ವರಪ್ಪ ಪುತ್ರ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಮೈತ್ರಿಯ ಬಳಿಕ ಕುಮಾರಸ್ವಾಮಿ ಬೆಂಬಲ ಸಿಕ್ರೆ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಸುಲಭವಾಗಿ ಲೋಕಸಭಾ ಸದಸ್ಯರಾಗುತ್ತಾರೆ.

ಈ ಭೇಟಿಯ ಕಾರಣದಿಂದ ಮೈತ್ರಿ ವಿರೋಧಿಸುತ್ತಿರುವ ಬಿಜೆಪಿ ನಾಯಕರು ಕೈ ಹಿಸುಕಿಕೊಳ್ಳುವುದು ಖಚಿತ
Discussion about this post