ಕಾಣಿಯೂರು ಸಮೀಪದ ಬೈತಡ್ಕ ( kaniyoor baithadka car accident ) ಸೇತುವೆ ತಡೆಗೋಡೆ ಮುರಿದು ಹೊಳೆಗೆ ಕಾರು ಬಿದ್ದ ಪ್ರಕರಣ ಸಂಬಂಧ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ. ಇಂದು ಎರಡು ಮೃತ ದೇಹಗಳು ಪತ್ತೆಯಾಗುವುದರೊಂದಿಗೆ ನಾಪತ್ತೆಯಾದವರು ಬದುಕಿ ಬರಬಹುದು ಅನ್ನುವ ಕೊನೆಯ ಆಸೆಯೂ ಬತ್ತಿ ಹೋಗಿದೆ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಬೈತಡ್ಕ ಮಸೀದಿ ಬಳಿ ಹೊಳೆಗೆ ( kaniyoor baithadka car accident ) ಕಾರು ಬಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತ ದೇಹ ಪತ್ತೆಯಾಗಿದೆ. ಇಂದು ಹೊಳೆಯ ನೀರಿನ ಹರಿವು ಇಳಿಯುತ್ತಿದ್ದಂತೆ ಮರದ ದಿಮ್ಮಿಗೆ ದೇಹ ಸಿಕ್ಕಿ ಹಾಕಿಕೊಂಡಿರುವುದು ಗೊತ್ತಾಗಿದೆ.
ಇನ್ನು ಕಳೆದ ಎರಡು ದಿನಗಳ ಕಾರ್ಯಾಚರಣೆ ನಡೆಸುತ್ತಿದ್ದ SDRF ತಂಡ ಇಂದು ಮುಂಜಾನೆಯೇ ನಾಪತ್ತೆಯಾದವರಿಗಾಗಿ ಹುಡುಕಾಟ ಪ್ರಾರಂಭಿಸಿತ್ತು. ಈ ನಡುವೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಮೊದಲು ಒಂದು ಮೃತ ದೇಹ ಪತ್ತೆಯಾಯ್ತು. ಆದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಮೃತ ದೇಹ ಸ್ಥಳೀಯರಿಗೆ ಗೋಚರಿಸಿದೆ. ಹೀಗಾಗಿ ಎಸ್. ಡಿ .ಆರ್ ಎಫ್ ಅಲ್ಲಿಗೋ ದೌಡಾಯಿಸಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ಇನ್ನು ಮೃತ ದೇಹ ಪೋಸ್ಟ್ ಮಾರ್ಟಮ್ ನಡೆಯಬೇಕಾಗಿತ್ತು. ಪೊಲೀಸರ ( karnataka police ) ಕಾನೂನು ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
ಶನಿವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಈ ವೇಳೆ ವಿಟ್ಲ ಮುಡ್ನೂರು ಶಾಂತಿಯಡ್ಕ ನಿವಾಸಿ ಧನುಷ್ ( 25 ) ಹಾಗೂ ಕನ್ಯಾನ ಕೋನಾಲೆ ನಿವಾಸಿ ಧನಂಜಯ ( 26 ) ನಾಪತ್ತೆಯಾಗಿದ್ದರು. ಭಾನುವಾರ ಮುಂಜಾನೆಯಿಂದಲೇ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ, SDRF ತಂಡ ಹುಡುಕಾಟದಲ್ಲಿ ತೊಡಗಿತ್ತು.
ಇದನ್ನೂ ಓದಿ : baithadka car accident : ಬೈತಡ್ಕ ಮಸೀದಿ ಸಮೀಪ ಹೊಳೆಗೆ ಬಿದ್ದ ಕಾರು : ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಭಾನುವಾರ ಮಧ್ಯಾಹ್ನ ಹೊತ್ತಿಗೆ ಕಾರು ಪತ್ತೆಯಾದರೂ, ನಾಪತ್ತೆಯಾದವರ ಸುಳಿವು ಇರಲಿಲ್ಲ. ಇದೀಗ ಇಬ್ಬರ ಮೃತದೇಹಗಳು ಪತ್ತೆಯಾಗುವುದರೊಂದಿಗೆ ಮಕ್ಕಳು ಜೀವಂತ ಬರುತ್ತಾರೆ ಅನ್ನುವ ಹೆತ್ತವರ ಕನಸು ನನಸಾಗಲಿಲ್ಲ. ಆದರೆ ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟಿಹಾಕಿದ್ದು, ಸಾವಿನ ನಿಖರ ಕಾರಣವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ.
Discussion about this post