ಆರೋಪಿ ದರ್ಶನ್ ಭೇಟಿಯಾಗಿ ಎಡವಟ್ಟು ಮಾಡಿದ್ದ ಸಾಕ್ಷಿ ಚಿಕ್ಕಣ್ಣ
ತಲೆ ಇದ್ರೆ ಸಾಲದು ಬುದ್ದಿ ಇರಬೇಕು ಅನ್ನೋದು ಇದೇ ಮಾತಿಗೆ. ಕೊಲೆ ಆರೋಪ ಹೊತ್ತ ದರ್ಶನ್ ನನ್ನು ಭೇಟಿ ಮಾಡಿದ ಕರ್ಮಕ್ಕೆ ಕಾಮಿಡಿ ನಟ ಚಿಕ್ಕಣ್ಣ ಇದೀಗ ಸಾರ್ವಜನಿಕವಾಗಿ ಜೋಕರ್ ಅನ್ನಿಸಿಕೊಂಡಿದ್ದು ಮಾತ್ರವಲ್ಲ, ಪೊಲೀಸರ ಮುಂದೆ ಕೈ ಕೆಟ್ಟಿ ನಿಲ್ಲಬೇಕಾಗಿ ಬಂದಿದೆ.
ಯಸ್ ಅತ್ತ ನಟ ದರ್ಶನ್ ಸಮಾಜಘಾತುಕರ ಜೊತೆ ಸಂಬಂಧ ಬೆಳೆಸಿದ ಕರ್ಮಕ್ಕೆ ಕುಖ್ಯಾತ ಬಳ್ಳಾರಿ ಜೈಲು ಸೇರಿದ್ರೆ, ಇತ್ತ ನಟ ಚಿಕ್ಕಣ್ಣ ಎಸಿಪಿ ಚಂದನ್ ಮುಂದೆ ನಿಂತಿದ್ದಾರೆ.
ತನಿಖಾಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಣ್ಣ ಗುರುವಾರ ಬೆಳಗ್ಗೆ ಬಸವೇಶ್ವರ ನಗರ ಎಸಿಪಿ ಕಚೇರಿಗೆ ಹಾಜರಾಗಿದ್ದಾರೆ.
ಪ್ರಕರಣವೊಂದರಲ್ಲಿ ಸಾಕ್ಷಿಯಾಗಿ ಗುರುತಿಸಲ್ಪಟ್ಟ ವ್ಯಕ್ತಿ ಅದೇ ಪ್ರಕರಣದ ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಇದನ್ನು ಮೀರಿ ನಟ ಚಿಕ್ಕಣ್ಣ ದರ್ಶನ್ ನನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಇದರ ಬೆನ್ನಲ್ಲಿ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ನೀಡಿದ್ದರು.
ಈ ಹಿಂದೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ್ದ ಚಿಕ್ಕಣ್ಣ ಮುಂದಿನ ದಿನಗಳಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಇಡೀ ಪ್ರಕರಣದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಪುಣ್ಯಾತ್ಮ ಅಂದ್ರೆ ಚಿಕ್ಕಣ್ಣ, ರೇಣುಕಾಸ್ವಾಮಿ ಕೊಲೆಯಾದ ದಿನ ಸ್ಟೋನಿ ಬ್ರೂಕ್ ಪಬ್ನಲ್ಲಿ ನಟ ಚಿಕ್ಕಣ್ಣ ಮತ್ತು ದರ್ಶನ್ ಅಂಡ್ ಗ್ಯಾಂಗ್ ಹಗಲಲ್ಲೇ ಕುಡಿಯುತ್ತಾ ಕೂತಿದ್ದರು.
ಈ ವೇಳೆ ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್ ತಲುಪಿದ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ಆ ಕಡೆ ತೆರಳಿದ್ದ, ಅದ್ಯಾವ ಜನ್ಮದ ಪುಣ್ಯವೋ ಅನ್ನುವಂತೆ ಚಿಕ್ಕಣ್ಣ ದರ್ಶನ್ ಗಾಡಿ ಹತ್ತಿರಲಿಲ್ಲ. ಒಂದು ವೇಳೆ ಚಿಕ್ಕಣ್ಣ ದರ್ಶನ್ ಗಾಡಿ ಏರುತ್ತಿದ್ರೆ ಇವತ್ತು ದಿಕ್ಕಾಪಾಲಾದ ಡಿ ಬಾಸ್ ಗ್ಯಾಂಗ್ ನಲ್ಲಿ ಚಿಕ್ಕಣ್ಣ ಕೂಡಾ ಇರುತ್ತಿದ್ದ.
ಇಷ್ಟೆಲ್ಲಾ ಆದ ನಂತರವೋ ಚಿಕ್ಕಣ್ಣ ಬುದ್ದಿ ಕಲಿಯದೇ ಇರೋದು ದುರಂತ. ಸಮಾಜಕ್ಕೆ ಆದರ್ಶವಾಗಿ ಕಾಣಿಸಿಕೊಳ್ಳೋದು ಸುಲಭ, ಆದರೆ ಆದರ್ಶವಾಗಿರೋದು ಕಷ್ಟ ಅನ್ನೋದು ಚಿಕ್ಕಣ್ಣ ಇದೀಗ ಬೆಸ್ಟ್ ಉದಾಹರಣೆ