ಕೊಲೆ ಆರೋಪಿ ದರ್ಶನ್ ಗಿರೋದು ಬರೀ ರೌಡಿಗಳ ಲಿಂಕ್…?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳು ಕಳೆದಿದೆ. ಕೊಲೆ ಆರೋಪ ಹೊತ್ತ ನಟನನ್ನು ನೋಡಲು ಹೋಗಿ ಬಂದವರೆಲ್ಲಾ ಆಯ್ಯೋ ಪಾಪ ಎಂದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅವೆಲ್ಲವೂ ಬರೀ ನಾಟಕ ಅನ್ನೋದು ಈಗ ಗೊತ್ತಾಗಿದೆ.
ಮನೆಯೂಟ ಬೇಕು, ಹೊಟ್ಟೆ ಸರಿ ಇಲ್ಲ, ಆರೋಗ್ಯದಲ್ಲಿ ಏರು ಪೇರು ಅಂದೆಲ್ಲಾ ಕೋರ್ಟ್ ಮೆಟ್ಟಿಲು ಹತ್ತಿದ ದರ್ಶನ್ ಹೇಳಿದ್ದು ಬರೀ ಸುಳ್ಳು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ.
ಇದೀಗ ಸ್ಪೇಷಲ್ ಬ್ಯಾರಕ್ ಹೊರಗೆ ನಟ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಜೊತೆ ದರ್ಶನ್ ಕುಳಿತಿದ್ದಾರೆ. ಎರಡು ದಿನಗಳ ಹಿಂದೆ ಸಿಸಿಬಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿತ್ತು ಎಂದು ಹೇಳಲಾಗಿದೆ.
ನಟ ದರ್ಶನ್ ಅವರು ಜೈಲಿನಲ್ಲಿ ಹಾಯಾಗಿ ದಿನಗಳನ್ನು ಕಳೆಯುತ್ತಿದ್ದಾರೆ. ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ದರ್ಶನ್ಗೆ ಇದರಿಂದ ರಾಜಾತಿಥ್ಯ ಸಿಗುತ್ತಿದೆಯೇ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಈ ನಡುವೆ ಕೈಯಲ್ಲಿ ಸಿಗರೇಟ್, ಕಾಫಿ ಮಗ್ ಹಿಡಿದಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಗೃಹಸಚಿವ ಜಿ.ಪರಮೇಶ್ವರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರಂತೆ. ಫೋಟೋನ ಯಾರೋ ವೈರಲ್ ಮಾಡಿದ್ದು, ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೆಯೇ ಅನ್ನೋ ಕುರಿತಂತೆ ಬಂಧಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೊತೆ ಗೃಹ ಸಚಿವ ಪರಮೇಶ್ವರ್ ಚರ್ಚೆ ಮಾಡಿದ್ದಾರೆ.
ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ದು, ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ ಜೈಲಿನ ಅಧಿಕಾರಿಗಳ ತಲೆ ದಂಡ ಖಚಿತ ಅನ್ನಲಾಗಿದೆ.
ಈ ನಡುವೆ ಈ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಕೇಂದ್ರ ಜೈಲು ಸೆರೆ ಮನೆಯೋ, ಅರಮನೆಯೋ ಅನ್ನೋದನ್ನ ಗೃಹ ಸಚಿವರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮುಖಂಡ ಎನ್ ರವಿ ಕುಮಾರ್ ಆಗ್ರಹಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ, ಕಾನೂನು ಸುವ್ಯವಸ್ಥೆ ಹಾಳಾಗಿರೋದು ಇದರಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
Bengaluru: An undated photograph from inside the Bengaluru prison went viral on Sunday, showing jailed Kannada film star Darshan Thoogudeepa smoking a cigarette and sipping a cuppa.
Darshan, along with his 16 associates, have been in judicial custody since June 22 for the murder of Renukaswamy, 34, a native of Chitradurga. Darshan is alleged to have plotted and executed Renukuswamy’s murder after he reportedly sent obscene messages to the actor’s female friend, Pavithra Gowda.