ವ್ಹೀಲಿಂಗ್ ಕೋರರ ವಿರುದ್ಧ ಸಮರ ಸಾರಿದ ಸಾರ್ವಜನಿಕರು
ರಾಜ್ಯ ಹಲವು ನಗರಗಳಲ್ಲಿ ವ್ಙೀಲಿಂಗ್ ಕೋರರ ಹಾವಳಿ ಮಿತಿ ಮೀರಿದೆ. ಪೊಲೀಸರು ಅದ್ಯಾವ ಆಧುನಿಕ ತಂತ್ರಜ್ಞಾನದ ಮೊರೆ ಹೋದ್ರು, ವ್ಹೀಲಿಂಗ್ ಪುಂಡರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ರಸ್ತೆಯಲ್ಲಿ ಕ್ಯಾಮಾರ ಇದ್ರೂ ಚಕ್ರ ಎತ್ತುವ ಚಾಳಿಗೆ ಬ್ರೇಕ್ ಬಿದ್ದಿಲ್ಲ.
ಅದರಲ್ಲೂ ಈ ವ್ಹೀಲಿಂಗ್ ಕೋರರ ಹಾವಳಿಯಿಂದ ಬೇಸತ್ತಿರೋದು ಬೆಂಗಳೂರು. ನಗರ ಹಾಗೂ ಹೊರವಲಯದಲ್ಲಿ ಇವರ ಹಾವಳಿ ಮಿತಿ ಮೀರಿದೆ. ನಂಬರ್ ಪ್ಲೇಟ್ ಇಲ್ಲದ ಗಾಡಿಯನ್ನು ಕೆದರಿದ ಕೂದಲಿನ ಯುವಕರು ಓಡಿಸುತ್ತಿದ್ದಾರೆ ಅಂದ್ರೆ ಅನುಮಾನವೇ ಬೇಡ ಇವರೆಲ್ಲರೂ ವ್ಹೀಲಿಂಗ್ ಕೋರರು. ಇನ್ನು ವ್ಙೀಲಿಂಗ್ ಮಾಡುವವರ ವರ್ತನೆಯೂ ಅದ್ಯಾವ ದರೋಡೆಕೋರರಿಗಿಂತಲೂ ಕಡಿಮೆ ಇರೋದಿಲ್ಲ.
ಕೆಲವು ಕಡೆಗಳಲ್ಲಿ ಪೊಲೀಸರು ವ್ಙೀಲಿಂಗ್ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಮರೆಯಲ್ಲಿ ನಿಂತು ಫೈನ್ ಹಾಕೋವಷ್ಟು ಆಸಕ್ತಿ ವ್ಙೀಲಿಂಗ್ ಮಾಡುವವರನ್ನು ನಿಯಂತ್ರಿಸುವಲ್ಲಿ ಇರೋದಿಲ್ಲ.
ಈ ನಡುವೆ ಬೈಕ್ ವ್ಙೀಲಿಂಗ್ ಮಾಡಿ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುತ್ತಿದ್ದ ಪುಂಡರನ್ನು ಸಾರ್ವಜನಿಕರೇ ಅಡ್ಡಗಟ್ಟಿ ದ್ವಿಚಕ್ರ ವಾಹನವನ್ನು ಜಖಂಗೊಳಿಸಿ, ಫ್ಲೈ ಓವರ್ ನಿಂದ ಎಸೆದ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆಗಸ್ಟ್ 15 ರಂದು ಈ ಘಟನೆ ನಡೆದಿದ್ದು, ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಎರಡು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ನಾಲ್ವರು ಪುಂಡರು ವ್ಙೀಲಿಂಗ್ ಮಾಡುತ್ತಿದ್ರು. ಇದನ್ನು ಗಮನಿಸಿದ ಸಾರ್ವಜನಿಕರು ಅಡಕಮಾರನಹಳ್ಳಿ ಸಮೀಪ ಮೇಲ್ಸೇತುವೆ ವ್ಙೀಲಿಂಗ್ ಪುಂಡರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬೆದರಿದ ಯುವಕರು ಪರಾರಿಯಾಗಿದ್ದಾರೆ.
ಪುಂಡರು ಬಿಟ್ಟು ಹೋದ ಗಾಡಿಯನ್ನು ಪುಡಿ ಮಾಡಿದ ಸಾರ್ವಜನಿಕರು ಫ್ಲೈ ಓವರ್ ನಿಂದ ಎಸೆದು ಬುದ್ದಿ ಕಲಿಸಿದ್ದಾರೆ.
ಇದೀಗ ವ್ಙೀಲಿಂಗ್ ಕೋರರ ಮಾಹಿತಿ ಪಡೆದುಕೊಂಡಿರುವ Dysp ಜಗದೀಶ್ ಪ್ರಕರಣದ ತನಿಖೆಗೆ ತಂಡ ರಚಿಸಿದ್ದಾರೆ. ಬೈಕ್ ಗಳಿಗೆ ಅಳವಡಿಸಿರುವ ನಂಬರ್ ಪ್ಲೇಟ್ ನಕಲಿ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.