ರೇವಣ್ಣ & ಪ್ರಜ್ವಲ್ ರೇವಣ್ಣ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದ SIT – Karnataka sex tape scandal
ಮನೆ ಕೆಲಸದ ಮಹಿಳೆಗೆ ಮಾಡಿ ಸಚಿವ ಎಚ್.ಡಿ. ರೇವಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ( Karnataka sex tape scandal )ನಡೆಸಿರುವುದು ದೃಢಪಟ್ಟಿದೆ ಎಂದು ಎಸ್ಐಟಿ ಹೇಳಿದೆ. ಶುಕ್ರವಾರ ಎಸ್ಐಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಅಪ್ಪ ಮಗನ ಕರ್ಮಕಾಂಡವನ್ನು ವಿವರಿಸಲಾಗಿದೆ.
ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪ್ರಜ್ವಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು SIT ಹೇಳಿದ್ದು, ಹಾಸನದ ಪೆನ್ ಡ್ರೈವ್ ಹಗರಣ ಬಯಲಾದ ಬಳಿಕ ಇದೇ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣರಿಂದ ಹಲವು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು SIT ಹೇಳಿದೆ.
ಇನ್ನು ಇದೇ ಜಾರ್ಜ್ ಶೀಟ್ ನಲ್ಲಿ ತನ್ನ ಮನೆಗೆಲಸದ ಮಹಿಳೆಯರಿಗೆ ರೇವಣ್ಣ ಲೈಂಗಿಕ ಕಿರುಕುಳ ನೀಡಿರೋದು ಸಾಬೀತಾಗಿದೆ ಎಂದು SIT ಸಲ್ಲಿಸಿದ ಜಾರ್ಜ್ ಶೀಟ್ ಹೇಳಲಾಗಿದ್ದು, ಆಕೆಗೆ ಹಣ್ಣು ಕೊಡುವ ನೆಪದಲ್ಲಿ ಹೊಳೆ ನರಸೀಪುರ ಮನೆಯ ಮಹಡಿ ಮೇಲೆ ಕೋಣೆಗೆ ಕರೆಸಿಕೊಂಡು ರೇವಣ್ಣ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಅದೇ ಮಹಿಳೆಯ ಮೇಲೆ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಕೂಡಾ ಸಾಬೀತಾಗಿದೆ ಎಂದು SIT ಹೇಳಿದ್ದು, ಈ ದೃಶ್ಯವನ್ನು ಹಾಸನದ ಕುಡಿ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಮತ್ತೆ ಮತ್ತೆ Blackmail ಮಾಡಿದ್ದಾರೆ ಎಂದು ಜಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ಇದೇ ಜಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಿಸಿಕೊಂಡು ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದ ಅನ್ನೋ ಸ್ಫೋಟಕ ಮಾಹಿತಿಯನ್ನು ಆರೋಪಪಟ್ಟಿಯಲ್ಲಿ ಎಸ್ಐಟಿ ಉಲ್ಲೇಖಿಸಿದೆ.
ಈಗ ಸಲ್ಲಿಸಲಾಗಿರುವ ಜಾರ್ಜ್ ಶೀಟ್ 2144 ಪುಟಗಳಿದ್ದು, ಇದರಲ್ಲಿ 150 ಸಾಕ್ಷಿಗಳ ಹೇಳಿಕೆ, ವೈಜ್ಞಾನಿಕ ವರದಿ ಹಾಗೂ ತಾಂತ್ರಿಕ ಪುರಾವೆಗಳನ್ನು ಒದಗಿಸಲಾಗಿದೆ. ತಾನು ಮಾಡಿದ ಕೃತ್ಯ ತಾನು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಪ್ರಚಾರ ಪಡೆಯುತ್ತಿದ್ದಂತೆ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿ ಮೊಬೈಲ್ ಸಾಕ್ಷಿ ನಾಶ ಪಡಿಸಿದ್ದು ಮಾತ್ರವಲ್ಲದೆ, ಜೊತೆಗೆ ತಾನು ಬಳಸಿದ್ದ ಫೋನ್ ಗಳಲ್ಲಿನ ವಿದ್ಯುನ್ಮಾನ ಸಾಕ್ಷಿಗಳನ್ನು ನಾಶಪಡಿಸಿದ ಬಗ್ಗೆ ತನಿಖೆಯಿಂದ ದೃಢಪಟ್ಟಿದೆ ಎಂದು SIT ಹೇಳಿದೆ.
A Special Investigation Team (SIT) of the Karnataka Police, which is investigating four cases of sexual assault and harassment against former Janata Dal Secular (JDS) party MP Prajwal Revanna, 34, has filed a chargesheet in the first of the four cases. In this case, the former MP is accused of sexually assaulting a cook employed by his family.