ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ ಮಸೀದಿಯ ಸಮೀಪದ ಹೊಳೆಗೆ ಕಾರು ಬಿದ್ದಿರುವುದು ಸ್ಪಷ್ಟ ( baithadka car accident ). ಸಾಕ್ಷಿ ಅನ್ನುವಂತೆ ಹೊಳೆಗೆ ಅಡ್ಡಲಾಗಿ ಹಾಕಿದ್ದ ತಡೆ ಬೇಲಿ ಕೂಡಾ ಜಖಂ ಆಗಿದೆ
ಪುತ್ತೂರು : ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಹೊಳೆಗೆ ಕಾರೊಂದು ಉರುಳಿ ಬಿದ್ದ ಘಟನೆ ಶನಿವಾರ ತಡ ರಾತ್ರಿ ಸಂಭವಿಸಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು ಅನ್ನುವ ಮಾಹಿತಿ ಲಭ್ಯವಾಗಿದ್ದು, ಇಬ್ಬರ ಹೆಸರು ಕೂಡಾ ಧನುಷ್ ಎಂದಾಗಿದೆ. ( baithadka car accident) ಇಬ್ಬರೂ ಸೋದರ ಸಂಬಂಧಿಗಳಾಗಿದ್ದು, ಎಲ್ಲಿಂದ ಹೊರಟಿದ್ದರು ಎಲ್ಲಿಗೆ ಹೋಗುತ್ತಿದ್ದರು ಅನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಒಬ್ಬ ಧನುಷ್ ವಿಟ್ವ ಕುಂಡಡ್ಕದವರಾಗಿದ್ದು ಮತ್ತೊಬ್ಬ ಧನುಷ್ ಕನ್ಯಾನದವರು ಎಂದು ಗೊತ್ತಾಗಿದೆ. ಶನಿವಾರ ರಾತ್ರಿ 12.01 ಕ್ಕೆ ಸಂಬಂಧಿಕರಿಗೆ ಫೋನ್ ಮಾಡಿದ್ದ ಅವರು ಲಾರಿ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ಡ್ಯಾಮೇಜ್ ಆಗಿದೆ ಎಂದು ಹೇಳಿದ್ದರು. ಆದಾದ ಬಳಿಕ ಅವರ ಪೋನ್ ಸ್ವಿಚ್ ಆಫ್ ಆಗಿತ್ತು.
ಇದನ್ನೂ ಓದಿ : Pavitra lokesh : ಪವಿತ್ರಾ ಲೋಕೇಶ್ ನನ್ನ ಪತ್ನಿ ಅನ್ನೋದಕ್ಕೆ ಪುರಾವೆ ಕೊಟ್ಟ ಸುಚೇಂದ್ರ ಪ್ರಸಾದ್
ಹಾಗಾದ್ರೆ ಲಾರಿ ಅಪಘಾತ ಮತ್ತು ಹೊಳೆಗೆ ಕಾರು ಹಾರಿದ ಘಟನೆಗಳು ತಾಳೆಯಾಗುತ್ತಿಲ್ಲ. ಹೀಗಾಗಿ ಸಂಪೂರ್ಣ ಗೊಂದಲ ಉಂಟಾಗಿದೆ.ಈ ನಡುವೆ ಹೊಳೆ ಬಿದ್ದ ಕಾರನ್ನು ಸ್ಥಳೀಯ ಈಜುಗಾರರ ಸಹಾಯದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಇಬ್ಬರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಖೈದಿಗಳಿಗೆ ಜೈಲು ಸಿಬ್ಬಂದಿಯಿಂದಲೇ ಡ್ರಗ್ಸ್ ಮದ್ಯ ಮೊಬೈಲ್ ಪೂರೈಕೆ
ಖೈದಿಗಳಿಗೆ ರಾಜಾತಿಥ್ಯ ನೀಡಿದರೆ ಇನ್ಮುಂದೆ ಅಮಾನತು ಇಲ್ಲ : ಕಾರಾಗೃಹ ಕರ್ಮಕಾಂಡದ ಬಳಿಕ ಕ್ರಾಂತಿ
ಬೆಂಗಳೂರು : ಖೈದಿಗಳ ಪಾಲಿಗೆ ಸ್ವರ್ಗ ಅಂದ್ರೆ ಅದು ಪರಪ್ಪನ ಅಗ್ರಹಾರ. ಕಾರಾಗೃಹ ಸಿಬ್ಬಂದಿ ಸರ್ಕಾರಿ ಕೆಲಸ ಅಂದ್ರೆ ಸಪ್ಲಯರ್ ಕೆಲಸ ಅಂದುಕೊಂಡಿದ್ದಾರೆ. ಈ ಕಾರಣದಿಂದಲೇ ಪರಪ್ಪನ ಅಗ್ರಹಾರದ ಖೈದಿಗಳಿಗೆ ಡ್ರಗ್ಸ್ ಮದ್ಯ ಮೊಬೈಲ್ ಪೂರೈಕೆ ಮಾಡುತ್ತಾರೆ.ಕೆಲವೊಂದು ಮಾಹಿತಿಗಳ ಪ್ರಕಾರ ಪೂರೈಕೆಯಾಗಬಾರದ ವಸ್ತುಗಳು ಕೂಡಾ ಪೂರೈಕೆಯಾಗುತ್ತದೆ ಅನ್ನುವ ಮಾತುಗಳಿಗೆ.
ಈ ನಡುವೆ ಪರಪ್ಪನ ಅಗ್ರಹಾರದ ಕರ್ಮಕಾಂಡದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ಕಾರಾಗೃಹದ ನೂತನ ಮುಖ್ಯ ಆಧೀಕ್ಷಕರನ್ನಾಗಿ ಪಿ.ಎಸ್.ರಮೇಶ್ ಅವರನ್ನು ನೇಮಿಸಿದೆ. ಜೊತೆಗೆ ಜೈಲಿನಲ್ಲಿ ಅಕ್ರಮ ಎಸಗಿದ ಹಲವು ಸಿಬ್ಬಂದಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ.
ಇದೀಗ ಅಧಿಕಾರ ಸ್ವೀಕರಿಸಿರುವ ಪಿ.ಎಸ್.ರಮೇಶ್ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಇನ್ಮುಂದೆ ಅವಕಾಶವಿರೋದಿಲ್ಲ. ಒಂದು ವೇಳೆ ಖೈದಿಗಳ ಜೊತೆಗೆ ಕೈ ಜೋಡಿಸಿದರೆ ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಬದಲಾಗಿ ನೇರವಾಗಿ ಸರ್ಕಾರಿ ಕೆಲಸದಿಂದಲೇ ವಜಾ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.
ಇನ್ನು ಜೈಲಿನಲ್ಲಿ ಅಕ್ರಮ ನಡೆಯುವುದು ಮೊದಲೇನಲ್ಲ. ಅದೆಷ್ಟೋ ಬಾರಿ ಸುದ್ದಿ ವಾಹಿನಿಗಳು ಜೈಲಿನ ಅಕ್ರಮದ ಕಥೆಯನ್ನು ಸಾರಿ ಸಾರಿ ಹೇಳಿದೆ. ಆದರೆ ಸರ್ಕಾರ ಕಿವುಡಾಗಿತ್ತು. ಅನೇಕ ಅಧಿಕಾರಿಗಳು ಜೈಲಿನಲ್ಲಿ ಸುಧಾರಣೆಯಾಗಬೇಕು ಎಂದು ವರದಿ ಕೊಟ್ಟಿದ್ದರು. ಆದರೆ ಸರ್ಕಾರ ಕುರುಡಾಗಿತ್ತು. ಆದರೆ ಈಗ ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬಳಿಸಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹಿಂದುತ್ವ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಇದರಿಂದ ಮುಜುಗರಕ್ಕೆ ಒಳಗಾಗಿತ್ತು.
ಕಳೆದ ವಾರ ಅಗ್ನೇಯ ವಿಭಾಗದ ಪೊಲೀಸರು ಪರಪ್ಪನ ಆಗ್ರಹಾರಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಒಂದು ಸಿಮ್ ಕಾರ್ಡ್, ಮೂರು ಮೆಮೋರಿ ಕಾರ್ಡ್, ಒಂದು ಪೆನ್ ಡ್ರೈವ್, 75 ಸಾವಿರ ನಗದು, ನಾಲ್ಕು ಚಾಕು, ಜಾರ್ಜಿಂಗ್ ಕೇಬಲ್, ಎರಡು ಹೆಡ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಮೂಲಕ ಮೂರು ದಿನಗಳಲ್ಲಿ ಆರ್ FIR ಗಳು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿತ್ತು.
ಈ ನಡುವೆ ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಡಿಜಿಪಿ ಮುರುಗನ್ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಜೈಲಿಗೆ ಭೇಟಿಗೆ ಕೊಟ್ಟು ಸಮಗ್ರ ವರದಿ ಕೊಟ್ಟಿದ್ದ ಸಮಿತಿ ಸುಧಾರಣೆಗೆ ಅನೇಕ ಸಲಹೆಗಳನ್ನು ಶಿಫಾರಸು ಮಾಡಿತ್ತು. ಮಾತ್ರವಲ್ಲದೆ ಅಕ್ರಮದಲ್ಲಿ ಕೈ ಜೋಡಿಸಿದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹೇಳಿತ್ತು.
Discussion about this post