ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ಹಿಡಿದ ಮಂಗಳ ಮುಖಿಯರು
ಸ್ವಾವಲಂಬಿಗಳಾಗಿ, ನಾವು ಎಲ್ಲರಂತೆ ಮನುಷ್ಯರು ಅನ್ನೋ ತೋರಿಸುವ ನಿಟ್ಟಿನಲ್ಲಿ ಅನೇಕ ಮಂಗಳಮುಖಿಯರು ಬದುಕು ಕಟ್ಟಿಕೊಂಡಿದ್ದಾರೆ. ಈ ಮೂಲಕ ಉಳಿದವರಿಗೂ ಮಾದರಿಯಾದವರಿದ್ದಾರೆ. ಈ ನಡುವೆ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಮಂಗಳಮುಖಿಯರು, ಇಡೀ ಸಮುದಾಯಕ್ಕೆ ಮಸಿ ಬಳಿಯೋ ಕೆಲಸ ಮಾಡುತ್ತಿದ್ದಾರೆ.
ತೃತೀಯಲಿಂಗಿಯಾಗಲು ಯುವಕನೊಬ್ಬನನ್ನು ಒತ್ತಾಯಿಸಿ, ಒಪ್ಪದೇ ಹೋದ ವೇಳೆ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿ ಹಿಂಸೆ ನೀಡಿದ ಆರೋಪದಡಿಯಲ್ಲಿ 5 ಮಂದಿ ಮಂಗಳ ಮುಖಿಯರ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
18 ವರ್ಷದ ಸಂತ್ರಸ್ಥ ನೀಡಿದ ದೂರಿನಂತೆ ಚಿತ್ರಾ, ಅಶ್ವಿನಿ, ಕಾಜಲ್, ಪ್ರೀತಿ ಮತ್ತು ಮುಗಿಲ ಎಂಬ ತೃತೀಯ ಲಿಂಗಿಗಳ ವಿರುದ್ಧ ಪೊಲೀಸರು FIR ದಾಖಲಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಂಬೇಡ್ಕರ್ ಕಾಲೇಜು ಸಮೀಪದಲ್ಲಿದ್ದ ಟೀ ಅಂಗಡಿಯಲ್ಲಿ ಸಂತ್ರಸ್ತ ಕೆಲಸ ಮಾಡಿಕೊಂಡಿದ್ದ ಸಂತ್ರಸ್ಥನನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು ನಮ್ಮ ಜೊತೆಗೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ, ಉತ್ತಮ ಸಂಪಾದನೆಯ ದಾರಿ ಮಾಡಿಕೊಡುವುದಾಗಿ ಪುಸಲಾಯಿಸಿದ್ದಾರೆ. ಯುವಕ ಇದಕ್ಕೆ ಒಪ್ಪದೆ ಹೋದಾಗ ಬಲವಂತವಾಗಿ ಬೆದರಿಸಿ ಟ್ಯಾನರಿ ರಸ್ತೆಯ ಮನೆಯಲ್ಲಿ ಕೂಡಿ ಹಾಕಿದ್ದಾರೆ.
ಭಿಕ್ಷೆ ಬೇಡಲು ಒಪ್ಪದೇ ಹೋದಾಗ ರೌಡಿಗಳಿಗೆ ಹೇಳಿ ನಿನ್ನ ತಂದೆ-ತಾಯಿಯನ್ನು ಕೊಲೆ ಮಾಡಿಸುತ್ತೇವೆ ಎಂದು ಬೆದರಿಸಿದ್ದಾರೆ. ಬೆದರಿಕೆಗೆ ಹೆದರಿದ ಯುವಕ ಸುಮಾರು ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ಹಣ ಸಂಪಾದಿಸಿದ್ದಾನೆ.
ಜುಲೈ 17ರಂದು ನೀನು ಗಂಡಸಾಗಿರುವಾಗಲೇ ಪ್ರತೀ ದಿನ ಎರಡು ಸಾವಿರ ರೂಪಾಯಿ ದುಡಿಯುತ್ತೀಯ. ಹೆಣ್ಣಾದ್ರೆ ಇನ್ನೂ ಹೆಚ್ಚು ದುಡಿಯಬಹುದು ಅಂದಿದ್ದಾರೆ.ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗು ಎಂದು ಬಲವಂತ ಮಾಡಿದ್ದಾರೆ.
ಇದಕ್ಕೆ ಯುವಕ ಒಪ್ಪದೆ ಹೋದಾಗಗಾಂಜಾ ಸೇವಿಸಿ, ಮದ್ಯಪಾನ ಮಾಡಿಕೊಂಡು ಬಂದ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ನಂತರ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಯುವಕ ಎಚ್ಚರಗೊಂಡ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಫೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.
ಯುವಕ ಎಚ್ಚರಗೊಂಡಾಗ ಮರ್ಮಾಂಗದ ಬಳಿ ರಕ್ತದೊಂದಿಗೆ ಗಾಯವಾಗಿರೋದು ಗೊತ್ತಾಗಿದೆ. ನಂತರ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿದ್ದಾರೆ. ಜೊತೆಗೆ ಇನ್ನು ಮುಂದೆ ಭಿಕ್ಷಾಟನೆ ಮಾಡುವುದರ ಜೊತೆಗೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಒಪ್ಪದೇ ಹೋದಾಗ 5 ಲಕ್ಷ ರೂಪಾಯಿಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇವರ ಹಿಂಸೆ ತಾಳಲಾರದೆ ನಂತರ ಅಲ್ಲಿಂದ ತಪ್ಪಿಸಿಕೊಂಡ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾನೆ.