ಬಾಗಲಕೋಟೆ : ಅಕ್ರಮ ಸಂಬಂಧ ಅನ್ನುವ ಕರ್ಮಕ್ಕೆ ಇದೀಗ ಹೆಣಗಳು ಉರುಳಲಾರಂಭಿಸಿದೆ. ಸಮಾಜದಲ್ಲಿ ನೈತಿಕತೆ ಅನ್ನುವುದು ನಾಶವಾಗಿದ್ದು, ದೈಹಿಕ ಸುಖಕ್ಕಾಗಿ ಸಂಬಂಧಗಳು ಬಲಿಯಾಗುತ್ತಿದೆ. ಮುಗ್ದ ಜೀವಗಳು ಅನಾಥವಾಗುತ್ತಿದೆ.
ಹೀಗೆ ಅನೈತಿಕ ಸಂಬಂಧದ ಚಟಕ್ಕೆ ಬಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ ಬಾಗಲಕೋಟೆಯ ಇಳಕಲ್ ತಾಲೂಕಿನ ಮಹಾಂತಪುರ ಗ್ರಾಮದಲ್ಲಿ ನಡೆದಿದೆ.
ಕೆಲ ದಿನಗಳಿಂದ 45 ವರ್ಷದ ಶಾಂತಪ್ಪ ಅನ್ನುವ ವ್ಯಕ್ತಿ ಗ್ರಾಮದಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಪತ್ನಿ ಹುಲಗವ್ವ ಗಂಭೀರವಾಗಿರಲಿಲ್ಲ. ಹೀಗಾಗಿ ಶಾಂತಪ್ಪ ಸಹೋದರ ಇಳಕಲ್ ಗ್ರಾಮೀಣ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ವೇಳೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಹುಲಗವ್ವಳನ್ನು ವಿಚಾರಣೆ ಕರೆದಿದ್ದಾರೆ. ಈ ವೇಳೆ ಗಂಡನನ್ನು ನಾನೇ ಕೊಲೆ ಮಾಡಿದ್ದು ಎಂದು ಬಾಯಿ ಬಿಟ್ಟಿದ್ದಾಳೆ. ಮಾತ್ರವಲ್ಲದೆ ಈ ಕೊಲೆಗೆ ತನ್ನ ಪ್ರಿಯಕರ ಬಸವರಾಜ ಮಾದರ ಹಾಗೂ ಆತನ ಸ್ನೇಹಿತ ಕೂಡಾ ಸಾಥ್ ನೀಡಿರುವುದಾಗಿ ಹೇಳಿದ್ದಾರೆ. ಅಂದ ಹಾಗೇ ಈ ಬಸವರಾಜ ಹುಲಗವ್ವಳಿಗೆ ಚಿಕ್ಕಮನ ಮಗನಾಗಬೇಕು.
ಬಸವರಾಜ ಮತ್ತು ಹುಲಗವ್ವ ನಡುವಿನ ಅಕ್ರಮ ಸಂಬಂಧ ಶಾಂತಪ್ಪನಿಗೆ ಅದು ಹೇಗೋ ಗೊತ್ತಾಗಿತ್ತು. ಈ ಸಂಬಂಧ ಮನೆಯಲ್ಲಿ ಗಲಾಟೆ ಕೂಡಾ ನಡೆದಿತ್ತು. ಯಾವಾಗ ಗಂಡ ಎಚ್ಚರಿಕೆ ನೀಡಿದ ಮೇಲೂ ಹುಲಗವ್ವ ಚಟ ಬಿಡಲಿಲ್ಲವೋ ಗಂಡನ್ನೇ ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಅದರಂತೆ ಅಕ್ಟೋಬರ್ 23 ರಂದು ಗ್ರಾಮದ ಹೊರವಲಯದ ಶೆಡ್ ನಲ್ಲಿ ಕೊಲೆ ಮಾಡಿ, ಮೃತ ಹೇದವನ್ನು ಆಲಮಟ್ಟಿ ಜಲಾಶಯದಲ್ಲಿ ಎಸೆದು ಬಂದಿದ್ದರು,
Discussion about this post