ಅಸ್ಸಾಂ : ದುಬೈನಲ್ಲಿ ಕಳುವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ ಅವರ ಹೆರಿಟೇಜ್ ಹ್ಯೂಬ್ಲೋಟ್ ವಾಚ್ ಅಸ್ಸಾಂನಲ್ಲಿ ಪತ್ತೆಯಾಗಿದೆ. ಈ ವಿಷಯವನ್ನು ಅಸ್ಸಾಂ ಪೊಲೀಸರೇ ದೃಢಪಡಿಸಿದ್ದು ಶನಿವಾರ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಕೈ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದ್ದು, ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ ಜ್ಯೋತಿ ಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ದುಬೈನ ಅಂಗಡಿಯೊಂದರಿಂದ ಈ ವಾಚ್ ಅನ್ನು ಕಳುವು ಮಾಡಲಾಗಿತ್ತು. ಇದಾದ ಬಳಿಕ ದುಬೈ ಪೊಲೀಸರು ವಾಚ್ ಹುಡುಕಾಟ ಪ್ರಾರಂಭಿಸಿದಾಗ, ಕೈ ಗಡಿಯಾರ ಭಾರತಕ್ಕೆ ಬಂದಿರೋದು ಗೊತ್ತಾಗಿತ್ತು. ಹೀಗಾಗಿ ಕೇಂದ್ರದ ಅಪರಾಧ ಸಂಸ್ಥೆಗಳೊಂದಿಗೆ ದುಬೈ ಪೊಲೀಸರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಶನಿವಾರ ಮುಂಜಾನೆ 4 ಗಂಟೆಗೆ ಬಂಧಿಸಲಾಗಿದೆ.
ಬಂಧಿತನನ್ನು ವಾಜಿದ್ ಹುಸೇನ್ ಎಂದು ಗುರುತಿಸಲಾಗಿದ್ದು, ಆರೋಪಿ ಪೂರ್ವ ಅಸ್ಸಾಂನ ಶಿವಸಾಗರ್ ಮೂಲದವನಾಗಿದ್ದು, ದುಬೈನ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆಗಸ್ಟ್ ತಿಂಗಳಲ್ಲಿ ರಜೆ ಪಡೆದುಕೊಂಡಿದ್ದ ಆರೋಪಿ ಭಾರತಕ್ಕೆ ಬಂದಿದ್ದ. ಬರುವ ವೇಳೆ ತನ್ನ ಜೊತೆಗೆ ವಾಚ್ ಅನ್ನು ಕೂಡಾ ಕದ್ದುಕೊಂಡು ಬಂದಿದ್ದ. ಯಾವಾಗ ಪ್ರಕರಣ ದುಬೈ ಪೊಲೀಸರಿಗೆ ಗೊತ್ತಾಯ್ತೋ, ಆರೋಪಿ ಪತ್ತೆಗೆ ಶೋಧ ಕಾರ್ಯ ಪ್ರಾರಂಭವಾಗಿತ್ತು. ಹೀಗಾಗಿ ಉಭಯ ದೇಶಗಳ ಪೊಲೀಸ್ ಪಡೆಗಳ ನಡುವಿನ ಅಂತರರಾಷ್ಟ್ರೀಯ ಸಮನ್ವಯತೆಯ ಮೂಲಕ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
Discussion about this post