School Bus ಅಪಘಾತದಲ್ಲಿ ಗಾಯಗೊಂಡ ಮಕ್ಕಳನ್ನು ಕುದೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ
ರಾಮನಗರ : ಚಾಲಕನ ನಿಯಂತ್ರಣ ತಪ್ಪಿದ School Bus ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ 25ಕ್ಕೂ ಹೆಚ್ಚು ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕುದೂರು ಹೋಬಳಿಯ ಹುಲಿಕಲ್ ಗ್ರಾಮದ ಮಾನಸ ಗಂಗೋತ್ರಿ ವಿದ್ಯಾಸಂಸ್ಥೆಗೆ ಸೇರಿದ School Bus ಇದಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ದುರ್ಘಟನೆ ಸಂಭವಿಸಿದೆ.
ಇದನ್ನು ಓದಿ : jagan mohan reddy : ಸರ್ಕಾರದ ಸಾಧನೆ ಪ್ರಚಾರಕ್ಕೆ ಸರ್ಕಾರದಿಂದಲೇ ಟಿವಿ ಚಾನೆಲ್
ಅಪಘಾತದಲ್ಲಿ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯಗಳು ಸಂಭವಿಸಿಲ್ಲ. ಗಾಯಗೊಂಡ ಮಕ್ಕಳನ್ನು ಪ್ರಾಥಮಿಕ ಚಿಕಿತ್ಸೆ ಸಲುವಾಗಿ ಕುದೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರು ಕೂಡಾ ದೌಡಾಯಿಸಿ ಆತಂಕದಲ್ಲಿ ಆಳುತ್ತಿದ್ದ ಮಕ್ಕಳನ್ನು ಸಮಾಧಾನಗೊಳಿಸಿದ್ದಾರೆ.
ನಿಮಗೆ ಆಗೋದಿಲ್ಲ ಅಂದ್ರೆ ಹೇಳಿ : ಆರಗ ಜ್ಞಾನೇಂದ್ರಗೆ ಅಮಿತ್ ಶಾ ಕ್ಲಾಸ್
ರಾಜ್ಯದ ಕಾರ್ಯಕರ್ತರ ಗಾಯಕ್ಕೆ ಮುಲಾಮು ಹಚ್ಚಲು ಕೇಂದ್ರದ ನಾಯಕರೇ ಬರಬೇಕಾಗಿ ಬಂದಿರುವುದು ಮಾತ್ರ ದುರಂತ
ಬೆಂಗಳೂರು : ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ರಾತ್ರಿ ಬಿಜೆಪಿ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಡೀ ಸಭೆಯಲ್ಲಿ ಕಾರ್ಯಕರ್ತರ ರಾಜೀನಾಮೆ, ಕರಾವಳಿಯಲ್ಲಿ ನಡೆದ ಹತ್ಯೆಗಳೇ ಚರ್ಚೆಗೆ ಬಂದಿದೆ.
ಈ ನಡುವೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಮಿತ್ ಶಾ, ಕರಾವಳಿ ಸರಣಿ ಹತ್ಯೆಗೆ ಕಾರಣಗಳನ್ನು ಕೇಳಿದ್ದಾರೆ. ನೀವು ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಮುಖ್ಯವಲ್ಲ, ಹತ್ಯೆಗಳನ್ನು ತಡೆಯುವುದು ಮುಖ್ಯ.
Read More : Eliminate fastag & toll plaza : ಕೆಲ ವರ್ಷಗಳಲ್ಲಿ ಟೋಲ್ ಗೇಟ್ ಗಳೇ ಮಾಯ
ನೀವು ಹತ್ಯೆ ಬಗ್ಗೆ ವಿವರಗಳನ್ನು ಯಾಕೆ ಪಡೆದುಕೊಂಡಿಲ್ಲ. ನಿಮಗೆ ಆಗೋದಿಲ್ಲ ಅಂದ್ರೆ ತಿಳಿಸಿ, ನಾನೇ ಅಗತ್ಯ ಕ್ರಮಗಳನ್ನು ಕೈಗಳ್ಳುತ್ತೇನೆ. ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುವುದು ನಮಗೆ ಗೊತ್ತು ಎಂದು ಹೇಳಿದ್ದಾರೆ ಅಂತಾ ನ್ಯೂಸ್ ಫಸ್ಟ್ ವಾಹಿನಿ ವರದಿ ಮಾಡಿದೆ. ಇನ್ನು ಅಮಿತ್ ಶಾ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ಕೇಂದ್ರ ಗೃಹ ಸಚಿವರು ಹಲವು ಮಾಹಿತಿಗಳನ್ನು ಕೇಳಿದ್ದಾರೆ. ಅವರು ಕೇಳಿದ ಮಾಹಿತಿಯನ್ನು ನಾವು ಹಂಚಿಕೊಂಡಿದ್ದೇವೆ. ಈ ವಿವರಗಳನ್ನು ಮಾಧ್ಯಮದ ಮುಂಚೆ ಹಂಚಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ.
Discussion about this post