ಟೋಲ್ ಗೇಟ್ ಇರೋದಿಲ್ಲ, fastag ಇರೋದಿಲ್ಲ ಅಂದ ಮಾತ್ರಕ್ಕೆ ಟೋಲ್ ಕಟ್ಟದೆ ಪ್ರಯಾಣಿಸಬಹುದು ಅಂದುಕೊಳ್ಳಬೇಡಿ (Eliminate fastag & toll plaza)
ನವದೆಹಲಿ : ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದೀಗ ಟೋಲ್ ವ್ಯವಸ್ಥೆಯಲ್ಲಿ ಮತ್ತೊಂದು ಕ್ರಾಂತಿಗೆ (Eliminate fastag & toll plaza) ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ರಸ್ತೆ ಹಾಗೂ ಟೋಲ್ ವ್ಯವಸ್ಥೆಯ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿರುವ ಗಡ್ಕರಿ ತಮ್ಮನ್ನು ತಾವೇ ”father of toll tax” ಎಂದು ಕರೆದಿದ್ದಾರೆ. ಜೊತೆಗೆ 2024ರ ಅಂತ್ಯದ ಹೊತ್ತಿಗೆ ಭಾರತದ ಹೆದ್ದಾರಿಗಳು ಅಮೆರಿಕಾ ರಸ್ತೆಗಳಂತೆ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಈ ಹಿಂದೆ ವಾಹನಗಳು ಸಾಲು ಗಟ್ಟಿ ನಿಲ್ಲುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ fastag ವ್ಯವಸ್ಥೆಯನ್ನು ಜಾರಿಗೆ ತರಲಾಯ್ತು. ಆದರೂ ಅದು ನಿರೀಕ್ಷಿತ ಮಟ್ಟಿನ ಯಶಸ್ವಿ ಕಾಣಲಿಲ್ಲ ಅಂದಿರುವ ನಿತಿನ್ ಗಡ್ಕರಿ, fastag ನಿಂದ ಸಾಕಷ್ಟು ಸುಧಾರಣೆಯಾದರೂ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿದಿಲ್ಲ ಅಂದಿದ್ದಾರೆ.(Eliminate fastag & toll plaza)
ಇದನ್ನೂ ಓದಿ : traffic symbol : ಹೊಸ ಟ್ರಾಫಿಕ್ ಚಿಹ್ನೆ ನೋಡಿ ತಲೆ ಕೆಡಿಸಿಕೊಂಡ ಬೆಂಗಳೂರಿಗರಿಗೆ ಪೊಲೀಸರು ಹೇಳಿದ್ದೇನು
ಹೀಗಾಗಿಯೇ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಉಪಗ್ರಹ ಆಧಾರಿತ ವ್ಯವಸ್ಥೆಯಲ್ಲಿ GPS ಮುಖೇನ ವಾಹನದ ಮಾಲೀಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತ ಅಥವಾ ವಾಹನದ ನಂಬರ್ ಪ್ಲೇಟ್ ಆಧಾರದಲ್ಲಿ ಶುಲ್ಕ ಕಡಿತಕ್ಕೆ ಚಿಂತನೆ ನಡೆದಿದೆ. ಈ ಎರಡೂ ಅವಕಾಶಗಳಲ್ಲಿ ಯಾವುದು ಬೆಟರ್ ಅನ್ನುವ ಕುರಿತಂತೆ ಪರಿಶೀಲನೆ ನಡೆದಿದೆ. ನಂಬರ್ ಪ್ಲೇಟ್ ಆಧಾರದಲ್ಲಿ ಶುಲ್ಕ ಕಡಿತಕ್ಕೆ ತಾವು ಒಲವು ಹೊಂದಿರುವುದಾಗಿ ಹೇಳಿರುವ ಗಡ್ಕರಿ ಜನಸ್ನೇಹಿಯಾಗಿರುವ ವ್ಯವಸ್ಥೆಯನ್ನು ಕೆಲವೇ ತಿಂಗಳುಗಳಲ್ಲಿ ಪರಿಚಯಿಸುವುದಾಗಿ ಹೇಳಿದ್ದಾರೆ.
ಈ ವ್ಯವಸ್ಥೆ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಟೋಲ್ ಪ್ಲಾಝಾಗಳೇ ಇರೋದಿಲ್ಲ ಅಂದಿರುವ ಗಡ್ಕರಿ ಹೊಸ ವ್ಯವಸ್ಥೆ ಜಾರಿಗೂ ಮುನ್ನ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಾಗಿದೆ. ಈ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಶಾಸನಾತ್ಮಕವಾಗಬೇಕಾಗಿದೆ ಅಂದರು.
Discussion about this post