2024ರ ಚುನಾವಣೆಯನ್ನು ಗುರಿಯಾಗಿರಿಸಿ ಈ ಚಾನೆಲ್ ಪ್ರಾರಂಭಿಸಲಾಗುತ್ತಿದೆ,ಯಾರದ್ದೋ ದುಡ್ಡು ಜಾತ್ರೆ ಮಾತ್ರ ಜಗನ್ ಹೆಸರಿನಲ್ಲಿ ( jagan mohan reddy)
ಅಮರಾವತಿ : ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ( jagan mohan reddy) ಸರ್ಕಾರಿ ಟಿವಿ ಚಾನೆಲ್ ಪ್ರಾರಂಭಿಸಲು ಮುಂದಾಗಿದ್ದಾರೆ. ಈ ಸಂಬಂಧದ ಕಡತಕ್ಕೆ ಈಗಾಗಲೇ ಹಸಿರು ನಿಶಾನೆ ಕೂಡಾ ಸಿಕ್ಕಿದ್ದು ಶೀಘ್ರದಲ್ಲೇ ಎಪಿ ಫೈಬರ್ ನ್ಯೂಸ್ ಅನ್ನುವ ವಾಹಿನಿ ಲೋಕಾರ್ಪಣೆಗೊಳ್ಳಲಿದೆ.
ಆಂಧ್ರ ಸರ್ಕಾರ, ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯ ಸಾಧನೆಗಳ ಪ್ರದರ್ಶನ ಮತ್ತು 2024ರ ವಿಧಾನಸಭಾ ಚುನಾವಣೆಯ ( jagan mohan reddy) ಪರೋಕ್ಷ ಪ್ರಚಾರ ಕಾರ್ಯ ಇದೇ ಎಪಿ ಫೈಬರ್ ನ್ಯೂಸ್ ಮೂಲಕ ನಡೆಯಲಿದೆ.
ಇದನ್ನೂ ಓದಿ : Bhavana Ramanna : ಬಿಜೆಪಿಗೆ ಹೋಗಿದ್ರಿ..ಮತ್ಯಾಕೆ ಇಲ್ಲಿ ಬಂದ್ರಿ : ಪ್ರತಿಭಟನೆಯಲ್ಲಿ ನಟಿ ಭಾವನಾಗೆ ತರಾಟೆ
ಈ ವಾಹಿನಿ ಮೂಲಕ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಅಚ್ಚರಿ ಅಂದ್ರೆ ಜಗನ್ ಈಗಾಗಲೇ ಸಾಕ್ಷಿ ಹೆಸರಿನಲ್ಲಿ ಟಿವಿ ಚಾನೆಲ್ ನಲ್ಲಿ ಮತ್ತು ಪತ್ರಿಕೆಯೊಂದನ್ನು ಹೊಂದಿದ್ದಾರೆ.
ಇನ್ನು ಎಪಿ ಫೈಬರ್ ನ್ಯೂಸ್ ಅನ್ನು AP State FiberNet Limited (APSFL) ಮೂಲಕ ಪರಿಚಯಿಸಲಾಗುತ್ತಿದೆ. ಈ ಸಂಬಂಧ APSFL ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ್ದು, ವಾಹಿನಿ ಲೋಕಾರ್ಪಣೆಗೆ ಸಿದ್ದೆತೆಗಲು ಕೂಡಾ ನಡೆಯುತ್ತಿದೆ. APSFL ಈಗಾಗಲೇ 10 ಲಕ್ಷ ಚಂದಾದಾರನ್ನು ಹೊಂದಿದ್ದು, ಈ ವರ್ಷದ ಅಂತ್ಯಕ್ಕೆ 60 ಲಕ್ಷ ಚಂದಾದಾರರನ್ನು ತಲುಪುವು ನಿರೀಕ್ಷೆ ಇದೆ.
Discussion about this post