ಬೆಂಗಳೂರು : ಹೀಗೂ ಮುಂಡಾಯಿಸಬಹುದ ಎಂದು ಖದೀಮರೇ ತಲೆ ಕೆಡಿಸಿಕೊಳ್ಳುವ ಮಟ್ಟಿಗೆ ವಂಚನೆ ಮಾಡಿದ ಕೀರ್ತಿ ಯುವರಾಜ ಸ್ವಾಮಿಗೆ ಸಲ್ಲಬೇಕು. ವಂಚನೆ ಸಲುವಾಗಿ ಈ ಪುಣ್ಯಾತ್ಮ ಧರಿಸದ ವೇಷವಿಲ್ಲ. ಅದರಲ್ಲೂ ಹೈಕೋರ್ಟ್ ನಿವೃತ ನ್ಯಾಯಮೂರ್ತಿಗೆ ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡ್ತೀವಿ ಎಂದು ನಂಬಿಸಿ ಕೋಟಿ ಕೋಟಿ ವಸೂಲಿ ಮಾಡಿದ್ದಾನೆ ಅಂದ್ರೆ ಇವನ್ನು ಅದೆಷ್ಟು ಚಾಣಾಕ್ಷನಾಗಿರಬೇಡ. ಕೋಟಿ ಕೋಟಿ ಕೊಟ್ಟ ನ್ಯಾಯಮೂರ್ತಿಗಳಿಗೆ ಇಷ್ಟೊಂದು ಹಣ ಹೇಗೆ ಬಂತು ಅನ್ನುವುದು ಬೇರೆ ಪ್ರಶ್ನೆ. ಚಿತ್ರ ನಿರ್ಮಾಪಕರು ಸುಮ್ನೆ ಇವರಿಗೆ ಹಣ ಕೊಟ್ರ ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಈ ನಡುವೆ ಈ ಕಳ್ಳ ಯುವರಾಜ ಸ್ವಾಮಿ ಅಮಿತ್ ಶಾ ಸೇರಿದಂತೆ ಅನೇಕ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಅಂದ್ರೆ ವಂಚನೆ ವಿಚಾರದಲ್ಲಿ ಇವನೊಬ್ಬ ಯುನಿವರ್ಸಿಟಿಯೇ ಸರಿ. ಇವನ ಮೇಲೆ ದಾಖಲಾಗಿರುವ ಅಷ್ಟು ಪ್ರಕರಣಗಳನ್ನು ಒಂದ್ಸಲ ನೋಡಿದ್ರೆ ಅರೇ ಹೀಗೂ ವಂಚಿಸಬಹುದ ಎಂದು ಅನ್ನಿಸುತ್ತದೆ.
ಹೀಗೆಲ್ಲಾ ವೆರೈಟಿಯಾಗಿ ವಂಚಿಸಿದ ಕಳ್ಳ ಸ್ವಾಮಿ ಜೈಲು ಸೇರಿದ್ದು, ಜಾಮೀನಿಗಾಗಿ ಪರದಾಡುತ್ತಿದ್ದ. ಹೇಗಾದರೂ ಸರಿ ಜಾಮೀನು ಪಡೆಯಲೇಬೇಕು ಎಂದು ಡಿಸೈಡ್ ಮಾಡಿರುವ ಸ್ವಾಮಿ ಢಿಪರೆಂಟ್ ಆಗಿ ಜಾಮೀನಿಗಾಗಿ ಆರ್ಜಿ ಸಲ್ಲಿಸಿದ್ದಾನೆ. 14 ಬಗೆಯ ವಿವಿಧ ರೋಗಗಳಿಂದ ನಾನು ಬಳಲುತ್ತಿದ್ದು ಚಿಕಿತ್ಸೆ ಪಡೆಯಬೇಕಾಗಿದೆ. ಹೀಗಾಗಿ ದಯವಿಟ್ಟು ಜಾಮೀನು ಕೊಡಿ ಅಂದಿದ್ದಾನೆ.
ಅಂದ ಹಾಗೇ ಯುವರಾಜಸ್ವಾಮಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ಏನು ಗೊತ್ತಾ ಇಲ್ಲಿದೆ ಪಟ್ಟಿ
- ತೀವ್ರ ಮಾನಸಿಕ ಖಿನ್ನತೆ
- ಅಧಿಕ ರಕ್ತದೊತ್ತಡ
- ಮಧುಮೇಹ ಸಮಸ್ಯೆ
- ಲಿವರ್ ದಪ್ಪವಾಗುವ ಸಮಸ್ಯೆ
- ಕುತ್ತಿಗೆ ಹಾಗೂ ಬೆನ್ನು ಹುರಿಯಲ್ಲಿ ಸಮಸ್ಯೆ
- ಗುದ ದ್ವಾರದಲ್ಲಿ ಬಿರುಕು, ಕುಳಿತುಕೊಳ್ಳಲು ಸಮಸ್ಯೆ
- ಐರನ್ ಮತ್ತು ವಿಟಮಿನ್ ಕೊರತೆ
- ಚರ್ಮವನ್ನು ಉಜ್ಜಿದರೆ ಉರಿ ಉರಿ
- ಎಡ ಭುಜದ ಮೂಳೆ ಮುರಿತದಿಂದ ನೋವು
- ಕುತ್ತಿಗೆ ನೋವು
- ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ
- ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅನ್ನನಾಳದಲ್ಲಿ ಉರಿ
- ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆನೋವು
- ಚಿಕನ್ ಗುನ್ಯಾದಿಂದ ವೈರಲ್ ಫಿವರ್
Discussion about this post