ಬೆಂಗಳೂರು : ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಪ್ರಾರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬೆಳ್ಳಂದೂರು ನಿವಾಸಿ ಅರ್ಚನಾ ರೆಡ್ಡಿ (42) ಎಂದು ಗುರುತಿಸಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಗುರುತಿಸಿಕೊಂಡಿದ್ದ ಅರ್ಚನಾ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಮೊದಲ ಸಂಸಾರದಲ್ಲಿ ಅವರಿಗೆ ಎರಡು ಮಕ್ಕಳಿತ್ತು. ಇದಾದ ಬಳಿಕ ನಾಲ್ಕು ವರ್ಷಗಳ ಹಿಂದೆ ನವೀನ್ ಅನ್ನುವವರನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ಅನ್ನೋನ್ಯವಾಗಿದ್ದ ಸಂಸಾರ ಇತ್ತೀಚೆಗೆ ಅದ್ಯಾಕೋ ಹಾದಿ ತಪ್ಪಿತ್ತು. ಪ್ರತೀ ನಿತ್ಯದ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಅರ್ಚನಾ ಮಕ್ಕಳೊಂದಿಗೆ ಬೆಳ್ಳಂದೂರಿನ ಫ್ಲ್ಯಾಟ್ ನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು.
ಈ ನಡುವೆ ಹಣಕಾಸಿನ ವಿಚಾರವಾಗಿ ನವೀನ್ ಅರ್ಚನಾ ಮೇಲೆ ಹಗೆ ಸಾಧಿಸುತ್ತಿದ್ದ. ಈ ಸಂಬಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಬಳಿಕ ರಾಜಿ ಸಂಧಾನ ಮೂಲಕ ವಿಷ ಬಗೆ ಹರಿಸಲಾಗಿತ್ತು. ಹಾಗಂತ ನವೀನ್ ದ್ವೇಷ ಬಿಟ್ಟಿರಲಿಲ್ಲ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಜಿಗಣಿಯಿಂದ ಬೆಳ್ಳಂದೂರಿಗೆ ಕಾರಿನಲ್ಲಿ ಮಗ ಹಾಗೂ ಚಾಲಕನ ಜೊತೆ ಸೇರಿ ಅರ್ಚನಾ ಮರಳುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸ ರೋಡ್ ಜಂಕ್ಷನ್ ಬಳಿ ಕಾರು ಅಡ್ಡ ಹಾಕಿದ ನವೀನ್ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಅರ್ಚನಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯ್ತಾದ್ರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Bengaluru: Woman killed in front of son, cops suspect ex-husband’s role. According to police sources, the incident took place around 10:30 pm when Archana Reddy, who got divorced with Naveen around five to six years back, was traveling back home in a car.
Discussion about this post