ದೊಡ್ಡಬಳ್ಳಾಪುರ : ಗಂಡ ಹೊರಗೆ ಊಟಕ್ಕೆ ಕರೆದುಕೊಂಡು ಹೋಗಲಿಲ್ಲ ಎಂದು ನೊಂದ ಗೃಹಿಣಿಯೊಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಮೃತರನ್ನು 24 ವರ್ಷದ ಸಂಧ್ಯಾ, ಮಕ್ಕಳಾದ 4 ವರ್ಷದ ಕುಸುಮಾ ಹಾಗೂ 1 ವರ್ಷದ ಮಗ ರೋಹಿತ್ ಎಂದು ಗುರುತಿಸಲಾಗಿದೆ.
ಸಂಧ್ಯಾ ಪಟ್ಟಣದಲ್ಲಿ ಬೆಳೆದಿದ್ದ ಹುಡುಗಿಯಾಗಿದ್ದು ಹೀಗಾಗಿ ವಾರಕ್ಕೆ ಒಂದು ಸಾರಿಯಾದರೂ ಹೋಟೆಲ್ ಗೆ ಊಟಕ್ಕೆ ಹೋಗುವ ಆಸೆ ಇಟ್ಟುಕೊಂಡಿದ್ದರಂತೆ. ಆದರೆ ಹಳ್ಳಿಯಲ್ಲಿ ಬೆಳೆದ ಗಂಡನಿಗೆ ಹೆಂಡತಿಯ ಆಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜಿಗುಪ್ಸೆಗೊಂಡ ಸಂಧ್ಯಾ ಎರಡು ಮಕ್ಕಳ ಜೊತೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನಲಾಗಿದೆ.
ಸಂಧ್ಯಾ ಯಲಹಂಕದಲ್ಲಿರುವ ತವರು ಮನೆಗೆ ಬಂದ ಸಂದರ್ಭದಲ್ಲಿ ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದರಂತೆ. ಗಂಡನ ಮನೆಗೆ ಹೋದ ವೇಳೆ ಹೋಟೆಲ್ ಹೋಗೋಣ ಅಂದ್ರೆ ಪತಿ ಶ್ರೀಕಾಂತ್ ಮನೆಯಲ್ಲಿ ಊಟ ಮಾಡೋಣ ಅನ್ನುತ್ತಿದ್ದರಂತೆ. ಇದರಿಂದ ನೊಂದುಕೊಂಡ ಸಂಧ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನಲಾಗಿದೆ.
ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.
Discussion about this post