ವಿಜಯಪುರ : ಎರಡನೇ ಪತಿಯ ಮಾತು ಕೇಳಿ ಮೊದಲ ಪತ್ನಿಯ ಮಕ್ಕಳನ್ನು ಪಾಪಿ ತಂದೆಯೊಬ್ಬ ಕೊಲೆ ಮಾಡಲು ಮುಂದಾದ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ಹುಟ್ಟಿಸಿದ ತಂದೆಯ ಈ ಕೃತ್ಯದಿಂದ ಒಂದು ಮಗು ಮೃತಪಟ್ಟಿದ್ದು ಮತ್ತೊಂದು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಿಂಚನಾಳ ತಾಂಡಾದ ವಿನೋದ್ ಚೌಹಾಣ್ ಎಂಬಾತ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಆ ಸಂಸಾರದಲ್ಲಿ ಎರಡು ಮಕ್ಕಳಿತ್ತು. ಮೊದಲ ಪತ್ನಿ ಮೃತಪಟ್ಟ ಬೆನ್ನಲ್ಲೇ ಸವಿತಾ ಎಂಬಾಕೆಯನ್ನು ವರಿಸಿದ್ದ ವಿನೋದ್ ಸಂಸಾರ ಸಾಗಿಸಿದ್ದ. ಆದರೆ ಸವಿತಾಳಿಗೆ ಗಂಡನ ಮೊದಲ ಪತ್ನಿಯ ಮಕ್ಕಳು ಹೊರೆ ಅನ್ನಿಸಿದೆ. ಹೀಗಾಗಿ ಸದಾ ಕಿರುಕುಳ ನೀಡುತ್ತಿದ್ದಳು.
ಮಾತ್ರವಲ್ಲದೆ ಮೊದಲ ಪತ್ನಿಯ ಎರಡೂ ಮಕ್ಕಳನ್ನು ಕೊಲೆ ಮಾಡುವಂತೆ ಪತಿಗೆ ಕುಮ್ಮಕ್ಕು ನೀಡಿದ್ದಾಳೆ. ಪತ್ನಿಯ ಮಾತು ಕೇಳಿದ ವಿನೋದ್ ಮಕ್ಕಳನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ಪ್ರಯತ್ನದಲ್ಲಿ ಸುಮಿತ್ ಅನ್ನುವ ಬಾಲಕ ಮೃತಪಟ್ಟಿದ್ದು ಮತ್ತೊಬ್ಬ ಬಾಲಕ ಸಂಪತ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.
ಇದೀಗ ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಾಗಿದೆ.
ಸಿಡಿಎಸ್ ಹುದ್ದೆ ರೇಸ್ ನಲ್ಲಿ ನರವಣೆ ಮತ್ತು ಭದೌರಿಯಾ
ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್ ಸೇರಿದಂತೆ ಇತರ ಸೇನಾ ಸಿಬ್ಬಂದಿಗೆ ಇಡೀ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಗುರುವಾರ ರಾತ್ರಿ ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅಗಲಿದ ವೀರಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಈ ನಡುವೆ ದುರ್ಘಟನೆಯಲ್ಲಿ ಮೃತಪಟ್ಟ ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಮೂವರ ಶವಗಳನ್ನು ಮಾತ್ರ ಗುರುತಿಸಲಾಗಿದೆ. ಇನ್ನುಳಿದ 10 ಪಾರ್ಥಿವ ಶರೀರಗಳ ಗುರುತು ಪತ್ತೆಗೆ ಪ್ರಕ್ರಿಯೆ ನಡೆಯುತ್ತಿದೆ.
ಇನ್ನು ಬಿಪಿನ್ ರಾವತ್ ಅಕಾಲಿಕ ಮರಣದಿಂದ ಖಾಲಿಯಾಗಿರುವ ಸಿಡಿಎಸ್ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡುವ ಅನಿವಾರ್ಯತೆ ಸರ್ಕಾರಕ್ಕಿದೆ. ನೋವಿನ ನಡುವೆಯೂ ಆಡಳಿತಾತ್ಮಕ ಕಾರಣದಿಂದ ಹುದ್ದೆಯನ್ನು ಖಾಲಿ ಬಿಡೋ ಹಾಗಿಲ್ಲ. ಹೀಗಾಗಿ ಇನ್ನು 7 ದಿನದಲ್ಲಿ ಹೊಸ ಸಿಡಿಎಸ್ ನೇಮಕ ಆದೇಶ ಹೊರ ಬೀಳುವ ಸಾಧ್ಯತೆಗಳಿದೆ. ಮಾಹಿತಿಗಳ ಪ್ರಕಾರ ಸಶಸ್ತ್ರ ಪಡೆಗಳ ಮುಖ್ಯಸ್ಥರ (CDS ) ಹುದ್ದೆ ರೇಸ್ ನಲ್ಲಿ ಹಾಲಿ ಸೇನಾ ಮುಖ್ಯಸ್ಥ ಜ. ಮನೋಜ್ ನರವಣೆ ಹಾಗೂ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್.ಕೆ. ಎಸ್ ಭದೌರಿಯಾ ಇದ್ದಾರಂತೆ. ಭದೌರಿಯಾ 42 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ
Discussion about this post