ಉತ್ತರ ಪ್ರದೇಶ : ಪೊಲೀಸ್ ಕಸ್ಟಡಿಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ನಿರ್ಲಕ್ಷ್ಯದ ಆರೋಪದಡಿಯಲ್ಲಿ ಐವರು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಅಲ್ತಾಫ್ ಅನ್ನುವ ಯುವಕನನ್ನು ನವೆಂಬರ್ 9 ರಂದು ಮಂಗಳವಾರ ಮಹಿಳೆಯೊಬ್ಬಳ ಅಪಹರಣ ಮತ್ತು ಬಲವಂತದ ಮದುವೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಕರೆಸಲಾಗಿತ್ತು.
ಈ ವೇಳೆ ಟಾಯ್ಲೆಟಿಗೆ ಹೋಗಬೇಕೆಂದು ಹೇಳಿ ಹೋಗಿದ್ದ ಅಲ್ತಾಫ್ ಹಲವು ಹೊತ್ತಾದರೂ ಬರಲಿಲ್ಲ. ಹೀಗಾಗಿ ಪೊಲೀಸರು ಒಳಗಡೆ ಹೋಗಿ ನೋಡಿದಾಗ ಜಾಕೆಟಿನ ಲಾಡಿ ಬಳಸಿ ನಲ್ಲಿಗೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಜ್ಞೆ ತಪ್ಪಿದ್ದ ಅಲ್ತಾಫ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗೆ ಆತ ಮೃತಪಟ್ಟಿದ್ದ.
थाने की बाथरूम में लगी नल की टोंटी से लटककर कोई आत्महत्या कैसे कर सकता है उप्र पुलिस?
— Srinivas BV (@srinivasiyc) November 9, 2021
क्या आरोपी की लंबाई 1-2 फ़ीट थी?
pic.twitter.com/KtzbkEQ8fo
Discussion about this post