ಬೇರೆ ಬೇರೆ ಮನೆಗೆ ಮದುವೆಯಾಗಿ ಹೋದರೆ ಬೇರೆ ಬೇರೆ ಆಗ್ತೀವಿ ಎಂದು ನೊಂದ ಅವಳಿ ಸಹೋದರಿಯರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದ ನಿವಾಸಿಗಳಾದ ಸುರೇಶ್ ಮತ್ತು ಯಶೋದ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಮತ್ತು ದಿವ್ಯಾ (19) ಆತ್ಮಹತ್ಯೆ ಮಾಡಿಕೊಂಡವರು.
ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದಿದ್ದು, ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ನಿರ್ಧರಿಸಿದ್ದರು. ಬೇರೆ ಬೇರೆ ಮನೆಗೆ ಮದುವೆಯಾಗಿ ಹೋದರೆ ತಮ್ಮ ಬಾಂಧವ್ಯ ಎಲ್ಲಿ ಕೊನೆಯಾಗುತ್ತದೋ ಎಂದು ಆತಂಕಗೊಂಡ ಸೋದರಿಯರು ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Discussion about this post