ಬೆಂಗಳೂ ರು :ಶಿಕ್ಷಣ ಸಂಸ್ಥೆಗಳ ಮಾಲೀಕರೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜುಲೈ 29 ರಂದು ಈ ಘಟನೆ ನಡೆದಿದ್ದು, KAMS General secretary ಶಶಿಕುಮಾರ್ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದವರು.
ನಗರದ ಮುತ್ಯಾಲನಗರದಲ್ಲಿರುವ ತಮ್ಮ ನಿವಾಸಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಹಲ್ಲೆಕೋರರು ದಾಳಿ ಮಾಡಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಶಶಿಕುಮಾರ್ ತಮ್ಮ ಬಳಿ ಇದ್ದ ಗನ್ ತೋರಿಸಿದ್ದಾರೆ. ಇದರಿಂದ ಬೆದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಶಶಿಕುಮಾರ್ ಒಟ್ಟು ಮೂರು ಜನ ಮಾರಕಾಸ್ತ್ರಗಳೊಂದಿಗೆ ಬಂದಿದ್ದರು. ಕತ್ತಲಾಗಿದ್ದ ಕಾರಣ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇಡೀ ಪ್ರಕರಣ 5 ರಿಂದ 7 ಸೆಕೆಂಡ್ಗಳ ಕಾಲಾವಧಿಯಲ್ಲಿ ಮುಗಿದು ಹೋಗಿದೆ ಅಂದಿದ್ದಾರೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಹಲ್ಲೆ ಯತ್ನ ನಡೆದಿರುವ ಶಂಕೆಯಿದ್ದು, ಆರ್ಟಿಐ ಕಾರ್ಯಕರ್ತರೊಬ್ಬರ ಜೊತೆ ಶಶಿಕುಮಾರ್ ವೈಷಮ್ಯ ಹೊಂದಿದ್ದಾರೆ ಅನ್ನಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕುಮಾರ್, ನನಗೆ ಬೆದರಿಕೆ ಇರುವುದು ನಿಜ, RTE, RTI, ಪೋಷಕರ ಸಂಘಗಳಿಂದ ಮತ್ತು ಕೆಲ ಖಾಸಗಿ ಶಾಲಾ ಒಕ್ಕೂಟದ ಹೆಸರಿನಲ್ಲಿ ಬೆದರಿಕೆ ಇದೆ ಅಂದಿದ್ದಾರೆ.
Discussion about this post