ತಿಲಕ್ ನಗರದಲ್ಲಿ ನೆಲೆಸಿದ್ದ ಈ ಗುಂಪಿನ ಸದಸ್ಯರ ಮುಖವನ್ನು ಸ್ಥಳೀಯರೇ ನೋಡಿರಲಿಲ್ಲ. ಅದೆಷ್ಟು ಹೊತ್ತಿಗೆ ಮನೆಗೆ ಬರ್ತಾ ಇದ್ರು, ಹೋಗ್ತಾ ಅನ್ನುವುದೇ ಗೊತ್ತಿಲ್ಲವಂತೆ-Suspected terrorist
ಬೆಂಗಳೂರು : ನಗರದ ತಿಲಕನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರ ಮತ್ತು ಆತನೊಂದಿಗೆ ಇದ್ದ ಕೆಲ ಹುಡುಗರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತನನ್ನು ಅಸ್ಸಾಂ ಮೂಲದ ಅಖ್ತರ್ ಹುಸೇನ್ ಎಂದು ಗುರುತಿಸಲಾಗಿದೆ.
ತಿಲಕನಗರದ ಬಿಟಿಪಿ ಏರಿಯಾದ ಮೂರನೇ ಮಹಡಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಈ ಆಖ್ತರ್ ವಾಸವಾಗಿದ್ದ. ಅಸ್ಸಾಂನಿಂದ ಪರಾರಿಯಾಗಿದ್ದ ಈತ ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಅನ್ನುವ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ : DK Shivakumar : ಸಂಧಾನಕ್ಕೆ ಬಂದ ಚೆಲುವರಾಯಸ್ವಾಮಿಗೆ ಮುಖಭಂಗ
ಕಳೆದ ಕೆಲವು ದಿನಗಳಿಂದ ಸಿಸಿಬಿ ಪೊಲೀಸರು ಅಖ್ತರ್ ಮೇಲೆ ಕಣ್ಣಿಟ್ಟಿದ್ದರು. ಈತನ ಪ್ರತಿಯೊಂದು ಚಲನವಲನಗಳನ್ನೂ ನೋಡಿಕೊಂಡ ಬಳಿಕವೇ ಈ ದಾಳಿ ನಡೆಸಲಾಗಿದೆ. ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕೆಶಿಯೂ ಅಲ್ಲ ಸಿದ್ದುಗೂ ಇಲ್ಲ : ಮುಂದಿನ ಸಿಎಂ ಜಮೀರ್ ಅಹಮ್ಮದ್
ಕಾಂಗ್ರೆಸ್ ಗೆ ಬಂದ 4 ವರ್ಷದಲ್ಲಿ ಜಮೀರ್ ಕರ್ನಾಟಕದ ಮುಸ್ಲಿಂರ ನಾಯಕನಾಗಿ ಬೆಳೆದು ನಿಂತಿದ್ದಾರೆ
ಬೆಳಗಾವಿ : ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕದನ ಪ್ರಾರಂಭವಾಗಿದೆ. ಚುನಾವಣೆ ನಡೆಯಬೇಕು, ಫಲಿತಾಂಶ ಬರಬೇಕು, ಗೆಲ್ಲಬೇಕು, ಹೈಕಮಾಂಡ್ ಒಪ್ಪಬೇಕು ಇಷ್ಟೆಲ್ಲಾ ಪ್ರಕ್ರಿಯೆ ಬಾಕಿ ಇದ್ದರೂ ಕಾಂಗ್ರೆಸ್ ನಲ್ಲಿ ವಿಧಾನಸೌಧದ ಮೂರನೇ ಮಹಡಿ ಹತ್ತಲು ಸಿಕ್ಕಾಪಟ್ಟೆ ನೂಕು ನುಗ್ಗಲು. ಕೆಲ ನಾಯಕರಂತೂ ಲಕ್ ಹೊಡೆಯಬಹುದು ಅನ್ನುವ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ ಜಮೀರ್ ಅಹ್ಮದ್ ಖಾನ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗ್ತಾರೆ ಎಂದು ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದ ಭಾವೈಕ್ಯತೆ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಂತೇಶ್ ಕೌಜಲಗಿ ಮುಂದೆ ಶಾಸಕರಾದರೆ,ಜಮೀರ್ ಮುಂದೆ ಸಿಎಂ ಆಗ್ತಾರೆ ಅಂದಿದ್ದಾರೆ.
ಇದನ್ನೂ ಓದಿ : biggboss shashi : ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್
ಹಿಂದು ಮುಸ್ಲಿಂ ಭಾವೈಕ್ಯತೆ ಜಮೀರ್ ಅವರಲ್ಲೂ ಇದೆ. ಜಮೀರ್ ಹೆಸರು ರಾಜ್ಯದಲ್ಲಿ ತುಂಬಾ ಹೆಸರುವಾಸಿಯಾಗಿದೆ. ಅವರು ಕೇವಲ ಮುಸ್ಲಿಂ ನಾಯಕನಷ್ಟೇ ಅಲ್ಲ. ಎಲ್ಲಾ ಸಮುದಾಯಕ್ಕೂ ಸಹಾಯ ಮಾಡಿದ ಹಿರಿಮೆ ಅವರದ್ದು ಎಂದು ಕುಮಾರೇಶ್ವರ ಸ್ವಾಮೀಜಿ ಜಮೀರ್ ಅವರನ್ನು ಹೊಗಳಿ ಅಟ್ಟಕೇರಿಸಿದ್ದಾರೆ.
Discussion about this post