ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದ ಶಶಿಕುಮಾರ್,(biggboss shashi) ತಮ್ಮ ಸಹ ಸ್ಪರ್ಧಿಯೊಬ್ಬರನ್ನು ವಿವಾಹವಾಗುತ್ತಾರೆ ಅನ್ನಲಾಗಿತ್ತು. ಆದರೆ ಅವರು ಮತ್ತೊಬ್ಬರ ಕೈ ಹಿಡಿದಿದ್ದಾರೆ
ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 6ರ ಮೂಲಕ ಸಮಾಜಕ್ಕೆ ಪರಿಚಯವಾದ ರೈತ ಪ್ರತಿಭೆ ಶಶಿಕುಮಾರ್ (biggboss shashi) ಇದೀಗ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಮನೆಯ ಮೂಲಕ ಮಾರ್ಡನ್ ರೈತ ಎಂದೇ ಪ್ರಸಿದ್ಧರಾಗಿರುವ ಶಶಿಕುಮಾರ್ (biggboss shashi) ಆಗಸ್ಟ್ 6 ಮತ್ತು ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ. ದೊಡ್ಡಬಳ್ಳಾಪುರದ ಸ್ವಾತಿ ಅನ್ನುವವರೊಂದಿಗೆ ಶಶಿಕುಮಾರ್ ವಿವಾಹ ನೆರವೇರಲಿದೆ.
ಇದನ್ನೂ ಓದಿ : Wife murdered husband : ಅಪಘಾತವಾಗಿದೆ ಅಂದ ಪತಿಯನ್ನು ಪತ್ನಿಯೇ ಬಂದು ಸಾಯಿಸಿದ್ಲು
ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲಕ ಶಶಿಕುಮಾರ್ ಜಿಕೆವಿಕೆ ಕೃಷಿ ವಿವಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು, ಕೃಷಿಯೊಂದಿಗೆ, ಕೃಷಿಗೆ ಸಂಬಂಧಿಸಿದ ವ್ಯವಹಾರವೊಂದನ್ನು ನಡೆಸುತ್ತಿದ್ದಾರೆ. ಜೊತೆಗೆ ಮೆಹಬೂಬಾ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಶಶಿಕುಮಾರ್ ಮುಂದಾಗಿದ್ದಾರೆ.
ಇನ್ನು ಶಶಿಕುಮಾರ್ ಮದುವೆಯಾಗಲಿರುವ ಹುಡುಗಿ ಸ್ವಾತಿ ಇತ್ತೀಚೆಗಷ್ಟೇ ಯುಪಿಎಸ್ಸಿ ಪ್ರಿಲಿಮ್ಸ್ ಪಾಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ವೀಣಾ ಕಾಶಪ್ಪನವರ್ ಜೊತೆ ಸಂಬಂಧ ಹದಗೆಟ್ಟಿದೆ. ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹಿಂದೆ ಹರಡಿತ್ತು, ಇದೀಗ ಮತ್ತೆ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ
ಬಾಗಲಕೋಟೆ : ಮೊದಲ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಡಿವೋರ್ಸ್ ಕೊಡುವ ಮುನ್ನವೇ ಹುನಗುಂದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ರೆ ಅನ್ನುವ ಸುದ್ದಿ ಹಿಂದೊಮ್ಮೆ ಹರಡಿತ್ತು. ಆದರೆ ಅದಕ್ಕೆ ಯಾವುದೇ ಸಾಕ್ಷಿಗಳು ಇರಲಿಲ್ಲ.
ಇದನ್ನೂ ಓದಿ : Karnataka politics : ರಾಜ್ಯಪಾಲರಿಗೆ ಯಡಿಯೂರಪ್ಪ : ಆಫರ್ ಒಪ್ಪಿಕೊಳ್ತಾರ ರಾಜಾಹುಲಿ
ಆದರೆ ಇದೀಗ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿದ್ದು, ತಂದೆ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂದು ಉಲ್ಲೇಖಿಸಲಾಗಿದೆ. ತಾಯಿಯ ಹೆಸರು ಪೂಜಾಶ್ರೀ ಎಂದು ನಮೂದಾಗಿದೆ. ಈ ಮೂಲಕ ಈ ಹಿಂದೆ ಹರಡಿದ್ದ ನಟಿ ಪೂಜಾಶ್ರೀ ಮತ್ತು ವಿಜಯಾನಂದ ಮದುವೆ ಸುದ್ದಿಗೆ ಜೀವ ಬಂದಿದೆ. ಅಷ್ಟು ಮಾತ್ರವಲ್ಲದೆ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆಯಾಗಿದ್ದು ಹೌದು ಅನ್ನುತ್ತಿದೆ ಮೂಲಗಳು.
ಇದನ್ನೂ ಓದಿ : Talakala swamiji : ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ಆತ್ಮಹತ್ಯೆ
ಇನ್ನು ವರ್ಷದ ಹಿಂದೆಯೇ ವಿಜಯಾನಂದ ಕಾಶಪ್ಪನವರ ಹಾಗೂ ವೀಣಾ ಕಾಶಪ್ಪನವರ್ ಸಂಬಂಧ ಹದಗೆಟ್ಟಿದೆ ಅನ್ನಲಾಗಿದೆ. ಆದರೆ ಈ ಬಗ್ಗೆ ವೀಣಾ ಅವರಾಗಲಿ ಪೂಜಾಶ್ರೀಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಾನಂದ ಕಾಶಪ್ಪನವರ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನು ಮಾತನಾಡಲಿ, ಫೋಟೋ ವೈರಲ್ ಬಗ್ಗೆ ನನಗೆ ಗೊತ್ತಿಲ್ಲ. ದಾಖಲೆ ಕೊಡಿ, ದಾಖಲೆ ಕೊಟ್ಟರೆ ಮಾತನಾಡುತ್ತೇನೆ ಅಂದಿದ್ದಾರೆ. ವೈಯುಕ್ತಿಕ ಜೀವನವೇ ಬೇರೆ, ರಾಜಕೀಯವೇ ಬೇರೆ, ವಿರೋಧಿಗಳೇ ಹೀಗೆ ಮಾಡುತ್ತಿದ್ದಾರೆ ಅಂದಿದ್ದಾರೆ.
Discussion about this post