ಪುಣೆ : ಯುವಕನೊಬ್ಬನ ಸಾವಿನ ಪ್ರಕರಣವನ್ನು ಚಪ್ಪಲಿಯೊಂದರ ಆಧಾರದಲ್ಲಿ ಪೊಲೀಸರು ಭೇದಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಲಾಗದೆ ಪರದಾಡುತ್ತಿದ್ದ ಪೊಲೀಸರು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ.
ಅಕ್ಟೋಬರ್ 22ರಂದು ಪುಣೆಯ ಬಾವಧಾನ್ ಊರಿನಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿತ್ತು. ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಶವ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಶವದ ವಿವಿಧ ಭಾಗಗಳು ಬೇರೆ ಬೇರೆ ಕಡೆ ಎಸೆದು ಹೋಗಿದ್ದ ಕಾರಣ ಶವದ ವಾರೀಸುದಾರರನ್ನು ಪತ್ತೆ ಮಾಡುವುದು ಸುಲಭವಿರಲಿಲ್ಲ.
ಈ ನಡುವೆ ಇದೇ ಗ್ರಾಮದ 27 ವರ್ಷದ ಯುವಕ ಮನೆಯಿಂದ ನಾಪತ್ತೆಯಾಗಿದ್ದಾನೆ ಅನ್ನುವ ದೂರು ದಾಖಲಾಗಿದ್ದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದಾಗ ಅರೆಬೆಂದ ಶವದ ವಾರೀಸುದಾರರು ಇವರೇ ಎಂದು ಗೊತ್ತಾಗಿದೆ. ಶವದ ಮೂಲದ ಗೊತ್ತಾಯ್ತು, ಆದರೆ ಕೊಲೆಗಾರ ಅನ್ನುವುದು ಮುಂದಿರುವ ಸವಾಲು.
ಅದ್ಯಾವ ಮೂಲೆಯಿಂದ ತನಿಖೆ ನಡೆಸಿದರೂ ಕೊಲೆಗಾರ ಮಾತ್ರ ಪತ್ತೆಯಾಗುತ್ತಿರಲಿಲ್ಲ. ಕೊಲೆಗೆ ಸಂಬಂಧಿಸಿದಂತೆ ಒಂದೇ ಒಂದು ಕ್ಲೂ ಕೂಡಾ ಸಿಕ್ಕಿರಲಿಲ್ಲ. ಈ ನಡುವೆ ಮೃತ ಯುವಕನ ಶವದ ಜೊತೆಗೆ ಒಂದೇ ಒಂದು ಚಪ್ಪಲಿ ಸಿಕ್ಕಿತ್ತು. ಹೀಗಾಗಿ ಯುವಕ ಎಲ್ಲಿಗೆಲ್ಲಾ ಓಡಾಡಿದ್ದಾನೆ ಎಂದು ಪರಿಶೀಲನೆ ಪ್ರಾರಂಭಿಸಿದಾಗ ಮನೆಯೊಂದರ ಮುಂದೆ ಮತ್ತೊಂದ ಚಪ್ಪಲಿ ಪತ್ತೆಯಾಗಿದೆ.
ಹೀಗಾಗಿ ಇದೇ ಮನೆ ಮಂದಿ ಕೊಲೆಗಾರರಿರಬಹುದು ಅನ್ನುವ ಅನುಮಾನದ ಹಿನ್ನಲೆಯಲ್ಲಿ ಮನೆ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಂಬಂಧದ ಕಹಾನಿ ಬಯಲಾಗಿದೆ. ಮನೆ ಮಾಲೀಕನ ಪತ್ನಿಯ ಜೊತೆ ಈ ಯುವಕ ಅಕ್ರಮ ಸಂಬಂಧ ಹೊಂದಿದ್ದ.
ಈ ಹಿನ್ನಲೆಯಲ್ಲಿ ಯುವಕನ ಪಾಠ ಕಲಿಸಲು ಯುವಕ ಮನೆಗೆ ಬರುತ್ತಿದ್ದಂತೆ ತನ್ನ ಸ್ನೇಹಿತರ ಜೊತೆ ಸೇರಿ ಯುವಕನನ್ನು ಸಾಯಿಸಿದ್ದಾನೆ. ಬಳಿಕ ಶವವನ್ನು ಸುಟ್ಟು ಹಾಕಿ ಅವಶೇಷಗಳನ್ನು ನಗರದ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದಾರೆ. ಆದರೆ ಗಡಿ ಬಿಡಿಯಲ್ಲಿ ಎರಡೂ ಚಪ್ಪಲಿಗಳನ್ನು ನಾಶಮಾಡಲು ಆರೋಪಿಗಳು ಮರೆತಿರುವುದು ಪೊಲೀಸರಿಗೆ ಸಹಾಯ ಮಾಡಿದೆ.
27-year-old man, who had gone missing in mid-October, was allegedly murdered by the husband of the woman he was having an affair with, said Pune police. Three people, including the main accused, were arrested in connection with the matter.
Discussion about this post