ಮುಂಬೈ : ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಮೂರು ಮಕ್ಕಳಿಗೆ ಐಸ್ಕ್ರೀಮ್ನಲ್ಲಿ ವಿಷ ಹಾಕಿ ಕೊಟ್ಟಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ಐಸ್ ಕ್ರೀಮ್ ಜೊತೆಗೆ ಇಲಿ ಪಾಷಣ ಸೇವಿಸಿದ ಮೂರು ಮಕ್ಕಳ ಪೈಕಿ ಅಲಿಷನ್ ಅಲಿ ( 5) ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳಾದ ಅಲಿನ (7) ಹಾಗೂ ಅರ್ಮಾನ್ (2) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮನ್ ಖುರ್ದ್ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಆಲಿ ನೌಶಾದ್ ಜೂನ್ 25 ರಂದು ಪತ್ನಿಯ ಜೊತೆ ಜಗಳವಾಡಿದ್ದ, ಪತಿ ಜೊತೆ ಜಗಳವಾದ ಹಿನ್ನಲೆಯಲ್ಲಿ ನಾಜಿಯಾ ತನ್ನ ಸಹೋದರಿ ಮನೆಗೆ ತೆರಳಿ ವಾಸಿಸುತ್ತಿದ್ದರು.
ಅಲ್ಲಿಗೂ ಬಂದು ಪತ್ನಿಯೊಂದಿಗೆ ಜಗಳವಾಡಿದ್ದ ನೌಶಾದ್ ಬಳಿಕ ಎರಡು ಗಂಡುಮಕ್ಕಳು ಹಾಗೂ ಒಂದು ಹೆಣ್ಣುಮಗುವಿಗೆ ಐಸ್ ಕ್ರೀಂ ಕೊಡಿಸುವ ಆಮಿಷವೊಡ್ಡಿ ಹೊರ ಕರೆದೊಯ್ದು ಐಸ್ನಲ್ಲಿ ಇಲಿ ಪಾಷಾಣ ಹಾಕಿ ಕೊಲ್ಲಲು ಪ್ರಯತ್ನಿಸಿದ್ದಾನೆ.
ಮನೆಗೆ ಬಂದ ಮಕ್ಕಳು ವಾಂತಿ ಮಾಡಿಕೊಂಡಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಮೊದಲು ಮಕ್ಕಳು ಗೊತ್ತಿಲ್ಲದೆ ಪಾಷಾಣ ಸೇವಿಸಿದ್ದಾರೆ ಎಂದು ನೌಶಾದ್ ಸುಳ್ಳು ಹೇಳಿದ್ದ. ಮಗು ಮೃತಪಟ್ಟ ಬಳಿಕ ಪತ್ನಿ ಗಂಡನ ಮೇಲೆ ಸಂಶಯ ವ್ಯಕ್ತಪಡಿಸಿದಾಗ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.
Discussion about this post