ಕಾಸು ಸಂಪಾದಿಸಲು ಜನ ಅದ್ಯಾವ ರೀತಿಯಲ್ಲಿ ಅಡ್ಡ ದಾರಿಯನ್ನು ಬಳಸಿಕೊಳ್ಳುತ್ತಾರೆ ನೋಡಿ. ಆದರೆ ಈತನ ಪಾಪದ ಕೊಡ ತುಂಬಿತ್ತು.( Pen drive Arrest)
ಬೆಂಗಳೂರು : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೊರಟವ ಇದೀಗ ಜೈಲು ಸೇರಿದ್ದಾನೆ. ರಾಜೇಂದ್ರನಗರದ ನಿವಾಸಿ ಶೋಯೆಬ್ ಪೇಂಟರ್ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಮನೆಗೆ ತೆರಳುವ ಹಾದಿಯಲ್ಲಿ ಈತನಿಗೊಂದು ಪೆನ್ ಡ್ರೈವ್ ಸಿಕ್ಕಿತ್ತು. ( Pen drive Arrest)
Read More : Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ
ಮನೆಗೆ ಬಂದ ಶೋಯೆಬ್ ಈ ಪೆನ್ ಡ್ರೈವ್ ತೆರೆದು ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ್ದಾನೆ. ಇದೇ ಪೆನ್ ಡ್ರೈವ್ ನಲ್ಲಿ ಇದ್ದ ದಾಖಲೆಗಳ ಮೂಲಕ ಯುವತಿ ಮೊಬೈಲ್ ನಂಬರ್ ಸಂಪಾದಿಸಿ ವಾಟ್ಸಾಪ್ ಮೂಲಕ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ.( ( Pen drive Arrest))
ಜೊತೆಗೆ ಪೆನ್ ಡ್ರೈವ್ ವಾಪಾಸ್ ಕೊಡಬೇಕಾದರೆ 70 ಸಾವಿರ ಹಣ ಕೊಡಬೇಕು, ನಾನು ಕೊಡುವ QR ಕೋಡ್ ಸ್ಕ್ಯಾನ್ ಮಾಡಿ ಹಣ ಕೊಡಬೇಕು ಎಂದು ಕಿರುಕುಳ ನೀಡಲಾರಂಭಿಸಿದ್ದ.
ಶೋಯೆಬ್ ಕಾಟದಿಂದ ಬೇಸತ್ತ ಮುಂಬೈ ಮೂಲಕ 25 ವರ್ಷದ ಮಹಿಳಾ ಟೆಕ್ಕಿ, ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ಆಧಾರದಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Discussion about this post