ಕೊರೋನಾ ಬಳಿಕ ಜನ ಕಾಸಿಲ್ಲ ಕಾಸಿಲ್ಲ ಅನ್ನುತ್ತಿದ್ದಾರೆ. ( Tirumala hundi) ಆದರೆ ಕಲಿಯುಗದ ವೈಕುಂಠದಲ್ಲಿ ಕಾಂಚಾಣ ಸದ್ದು ಮಾಡುತ್ತಿದೆ
ತಿರುಮಲ : ಕೊರೋನಾ ಲಾಕ್ ಡೌನ್ ನಿಯಮಗಳು ಸಡಿಲಗೊಂಡ ಬಳಿಕ ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದೆ. ಕೇವಲ 8 ತಿಂಗಳ ಅವಧಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಣ ಹರಿದು ಬಂದಿದೆ.( Tirumala hundi)
2020-21ರಲ್ಲಿ 731 ಕೋಟಿ ರೂಪಾಯಿ ಆದಾಯವನ್ನು ಹುಂಡಿ ಮೂಲಕ ಸಂಗ್ರಹಿಸಲಾಗಿತ್ತು. ಆದರೆ ಈ ಮೊತ್ತ 2021-22ನೇ ಸಾಲಿನಲ್ಲಿ 933 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಆದರೆ 2019 – 20ರಲ್ಲಿ 1,150 ಕೋಟಿ ರೂಪಾಯಿ ಆದಾಯವನ್ನು ತಿರುಮಲ ಗಳಿಸಿತ್ತು. ( Tirumala hundi)
Read More : Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ
ಈ ಬಾರಿ ನವೆಂಬರ್ ಅಂತ್ಯಕ್ಕೆ 1,033 ಕೋಟಿ ಆದಾಯ ಹರಿದು ಬಂದಿದ್ದು, ಈ ವರ್ಷದ ಅಂತ್ಯಕ್ಕೆ ಈ ಮೊತ್ತ 1,150 ಕೋಟಿ ರೂಪಾಯಿ ದಾಟುವ ನೀರಿಕ್ಷೆ ಇದೆ. ಈ ಮೂಲಕ 2019-20ರ ದಾಖಲೆಯನ್ನು ಮುರಿಯಬಹುದು ಅನ್ನಲಾಗಿದೆ.

ಇನ್ನು ತಿಂಗಳ ಲೆಕ್ಕಕ್ಕೆ ಬರುವುದಾದರೆ
ಏಪ್ರಿಲ್ 2022 : 127.99 ಕೋಟಿ ರೂ
ಮೇ 2022 : 129.93 ಕೋಟಿ ರೂ
ಜೂನ್ 2022 : 123.76 ಕೋಟಿ ರೂ
ಜುಲೈ 2022 : 139.47 ಕೋಟಿ ರೂ
ಆಗಸ್ಟ್ 2022 : 140.34 ಕೋಟಿ ರೂ
ಸಪ್ಟಂಬರ್ 2022 : 122.18 ಕೋಟಿ ರೂ
ಅಕ್ಟೋಬರ್ 2022 : 122.83 ಕೋಟಿ ರೂ
ನವೆಂಬರ್ 2022 : 127.31 ಕೋಟಿ ರೂ
ಇನ್ನು ಡಿಸೆಂಬರ್ 21ರ ಹೊತ್ತಿಗೆ 88 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು, ವರ್ಷದ ಅಂತ್ಯಕ್ಕೆ ಇದು ದುಪ್ಪಟ್ಟಾಗುವ ಸಾಧ್ಯತೆಗಳಿದೆ.
ಇದರೊಂದಿಗೆ ಹುಂಡಿ ಕಾಣಿಕೆ ಸಂಗ್ರಹದಲ್ಲಿ ತಿರುಮಲ ದೇವಸ್ಥಾನ ದಾಖಲೆಯೊಂದನ್ನು ಬರೆದಿದ್ದು, ಒಂದೇ ದಿನ 6 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. 2022ರ ಜುಲೈ 4 ರಂದು ಈ ದಾಖಲೆ ಬರೆಯಲಾಗಿದ್ದು, 6.18 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಾಗಿತ್ತು. ಈ ಹಿಂದೆ 5.73 ಕೋಟಿ ರೂಪಾಯಿ ಒಂದೇ ದಿನ ಸಂಗ್ರಹವಾದ ಅಧಿಕ ಮೊತ್ತವಾಗಿತ್ತು. 2012ರ ಏಪ್ರಿಲ್ 1 ರಂದು 5.73 ಕೋಟಿ ರೂಪಾಯಿ ಹುಂಡಿ ಕಾಣಿಕೆ ಸಂಗ್ರಹವಾಗಿತ್ತು.
1950ರ ಹೊತ್ತಿಗೆಲ್ಲ ದಿನಕ್ಕೆ 1 ಲಕ್ಷ ರೂಪಾಯಿ ಹುಂಡಿ ಕಾಣಿಕೆ ಸಂಗ್ರಹವಾಗುತ್ತಿತ್ತು. 1958ರ ಹೊತ್ತಿಗೆ ಈ ಮೊತ್ತ ಕೋಟಿಯನ್ನು ತಲುಪಿತ್ತು. ಆದರೆ ಅದು ಹಾಗೇ ಮುಂದುವರಿಯಲಿಲ್ಲ, ಮತ್ತೆ ಕುಸಿತು ಕಂಡಿತು. 1990ರ ಹೊತ್ತಿಗೆ ಮತ್ತೆ ಏರಿಕೆ ಕಂಡಿತು. ಅಂದರೆ 30 ವರ್ಷಗಳ ಬಳಿಕ ಕೋಟಿ ಲೆಕ್ಕದಲ್ಲಿ ಹುಂಡಿ ಕಾಣಿಕೆ ಬರಲಾರಂಭಿಸಿತು. ಈ ಮೊತ್ತ ವರ್ಷ ಕಳೆದಂತೆ ದಿನಕ್ಕೆ 3 ಕೋಟಿ ರೂಪಾಯಿ 4 ಕೋಟಿ ರೂಪಾಯಿಗೆ ಏರಿಕೆ ಕಂಡಿತು. ಇದೀಗ 5 ಕೋಟಿ ರೂಪಾಯಿ ಗರಿಷ್ಟ ಮೊತ್ತ ಸಂಗ್ರಹದ ಮೂಲಕ ದಾಖಲೆ ಬರೆಯಲಾಗಿದೆ. ಅಂದ ಹಾಗೇ ತಿರುಮಲ ದೇವಸ್ಥಾನದ ಹೆಸರಿನಲ್ಲಿ 16 ಸಾವಿರ ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇರಿಸಲಾಗಿದೆ.
Discussion about this post