ಬೆಂಗಳೂರು : ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜಪುರ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕೆಲ ದಿನಗಳ ಹಿಂದೆ ಆನ್ ಲೈನ್ ತರಗತಿ ವೇಳೆ ದಿಢೀರ್ ಅಂತಾ ಆಶ್ಲೀಲ ವಿಡಿಯೋ ಪ್ರಸಾರವಾದ ಘಟನೆ ನಡೆದಿದೆ. ದಿಢೀರ್ ಅಂತಾ ಲಿಂಕ್ ಅಪ್ ಲೋಡ್ ಆದ ಕಾರಣ ಈ ಘಟನೆ ನಡೆದಿದ್ದು, ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋ ತೆರೆದುಕೊಂಡಿದ್ದು, ಇದರಿಂದ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮುಜುಗರಕ್ಕೀಡಾಗಿದ್ದಾರೆ.
ಶಿಕ್ಷಣ ಇಲಾಖೆ ಭೌತಿಕ ತರಗತಿ ನಡೆಸಲು ಅನುಮತಿ ನೀಡಿದ್ದರೂ ಈ ಶಾಲೆ ಆನ್ ಲೈನ್ ಮೂಲಕವೇ ತರಗತಿ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ತರಗತಿಯ ಮಕ್ಕಳು ಆನ್ ಲೈನ್ ತರಗತಿಗೆ ಲಾಗಿನ್ ಆಗಿ ಭಾಗಿಯಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಯೊಬ್ಬ ನೆಟ್ ವರ್ಕ್ ಸಮಸ್ಯೆಯಿಂದ ಲಾಗ್ ಜೌಟ್ ಆಗಿದ್ದಾನೆ. ಮತ್ತೆ ಅದೇ ವಿದ್ಯಾರ್ಥಿಯಿಂದ ಲಾಗಿನ್ ರಿಕ್ವೆಸ್ಟ್ ಬಂದಾಗ ತರಗತಿ ಶಿಕ್ಷಕರು ಅದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋ ಲಿಂಕ್ ಎಲ್ಲಾ ಮಕ್ಕಳಿಗೂ ತಲುಪಿದೆ.
ಈ ಲಿಂಕ್ ಕ್ಲಿಕ್ ಮಾಡಿದ ವೇಳೆ ಅಶ್ಲೀಲ ವಿಡಿಯೋ ತೆರೆದುಕೊಂಡಿವೆ. ಇದರಿಂದ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಂಡಿದ್ದ ಮಂದಿ ಶಾಕ್ ಆಗಿದ್ದಾರೆ. ವಿಷಯ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ ಆನ್ ಲೈನ್ ತರಗತಿಯನ್ನು ಬಂದ್ ಮಾಡಲಾಗಿದೆ.
ಈ ಬಗ್ಗೆ ಶಾಲಾ ಮಂಡಳಿ ಕೂಡಾ ಆಂತರಿಕ ತನಿಖೆ ನಡೆಸಿದ್ದು , ಹೇಗಾಯ್ತು ಅನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಇನ್ನು ಈ ಬಗ್ಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಆನ್ ಲೈನ್ ತರಗತಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿಯನ್ನು ರೂಪಿಸುವಂತೆ ಆಗ್ರಹಿಸಿದೆ.
ಡೆಲ್ಟಾದಷ್ಟು ಡೇಂಜರ್ ಅಲ್ಲ : ಒಮಿಕ್ರೋನ್ ರೂಪಾಂತರಿ ಬಗ್ಗೆ ಡಾ.ಸುಧಾಕರ್ ಹೇಳಿದಿಷ್ಟು
ಬೆಂಗಳೂರು : ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರೋನ್ ವೈರಸ್ ಇದೀಗ ಹೊಸ ಆತಂಕಕ್ಕೆ ಕಾರಣವಾಗಿದೆ. ಇದೇ ರೂಪಾಂತರಿ ವೈರಸ್ ಅಮೆರಿಕಾದಲ್ಲಿ ಕೊರೋನಾದ 5ನೇ ಅಲೆಯನ್ನು ಸೃಷ್ಟಿಸಲಿದೆ ಎಂದು ಅಲ್ಲಿನ ಸಾಂಕ್ರಾಮಿಕ ರೋಗ ತಜ್ಞ ಡಾ ಫೌಸಿ ಹೇಳಿದ್ದಾರೆ. ಅಮೆರಿಕಾದಲ್ಲಿ ಇನ್ನೂ 6.2 ಕೋಟಿ ಜನ ಲಸಿಕೆ ಪಡೆಯಬೇಕಾಗಿದೆ. ಹೀಗಾಗಿ ಅಮೆರಿಕಾ 5ನೇ ಅಲೆಗೆ ತುತ್ತಾಗುವ ಸಾಧ್ಯತೆಗಳಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ನಡುವೆ 13 ದೇಶಗಳಿಗೆ ಹೊಸ ರೂಪಾಂತರಿ ವೈರಸ್ ಒಮಿಕ್ರೋನ್ ಹರಡಿದ್ದು, ಭಾರತದಲ್ಲಿ ಸಕಲ ಎಚ್ಚರಿಕೆಗಳನ್ನು ವಹಿಸಲಾಗಿದೆ. ಇನ್ನು ಕರ್ನಾಟಕವೂ ಕೂಡಾ ಆತಂಕದಿಂದ ಹೊರತಾಗಿಲ್ಲ. ಅಮೆರಿಕಾದಂತೆ ಕರ್ನಾಟಕದಲ್ಲೂ ಸಾಕಷ್ಟು ಮಂದಿ ಲಸಿಕೆ ಪಡೆದಿಲ್ಲ. ಮೊದಲ ಡೋಸ್ ಪಡೆದ ಅನೇಕರು ಸೆಕೆಂಡ್ ಡೋಸ್ ಕಡೆ ಮುಖವೇ ಹಾಗಿಲ್ಲ. ಹೀಗಾಗಿ ಒಮಿಕ್ರೋನ್ ಒಂದ್ಸಲ ಎಂಟ್ರಿ ಕೊಟ್ರೆ ನಿಯಂತ್ರಣ ಕಷ್ಟ.
ಇನ್ನು ಒಮಿಕ್ರೋನ್ ವೈರಸ್ ಬಗ್ಗೆ ಮಾಹಿತಿ ಕೊಟ್ಟಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಒಮಿಕ್ರೋನ್ ಡೆಲ್ಟಾದಷ್ಟು ಡೇಂಜರ್ ಅಲ್ಲ ಅಂದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯರೊಂದಿಗೆ ಚರ್ಚಿಸಿರುವುದಾಗಿ ಹೇಳಿರುವ ಸುಧಾಕರ್ ಒಮಿಕ್ರೋನ್ ವೇಗವಾಗಿ ಹರಡುತ್ತಿದ್ದರೂ ಡೆಲ್ಟಾ ರೂಪಾಂತರಿಯಷ್ಟು ಅಪಾಯಕಾರಿ ಅಲ್ಲ ಅಂದಿದ್ದಾರೆ.
ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು : ಇದು ಒಮಿಕ್ರೋನ್ ರೂಪಾಂತರಿಯೇ…?
ಬೆಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು, ಭಾರತಕ್ಕಿಲ್ಲ ಕೊರೋನಾ ಮೂರನೇ ಅಲೆ ಭೀತಿ ಅನ್ನುವ ಹೆಡ್ ಲೈನ್ ನಡುವೆ ನೆಮ್ಮದಿಯ ನಿಟ್ಟುಸಿರು ಬಿಟ್ರೆ, ಒಮಿಕ್ರೋನ್ ರೂಪಾಂತರಿ ವೈರಸ್ ಆತಂಕ ಹೆಚ್ಚಿಸಿದೆ. ಈ ಬಗ್ಗೆ ತಜ್ಞರಲ್ಲೂ ಸ್ಪಷ್ಟತೆಗಳಿಲ್ಲದಿರುವುದು ಮತ್ತು ಮತ್ತಷ್ಟು ಸಂಶೋಧನೆಯ ಅಗತ್ಯವಿರುವ ಕಾರಣ ಈ ಹೊಸ ಶತ್ರುವಿನ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ.
ಈ ನಡುವೆ ನವೆಂಬರ್ 2 ರಂದು ನವೆಂಬರ್ 20ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ 94 ಮಂದಿ ಆಗಮಿಸಿದ್ದಾರೆ. ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಒಬ್ಬರಲ್ಲಿ ಡೆಲ್ಟಾ ಮಾದರಿ ಖಚಿತಪಟ್ಟಿದ್ದು ಮತ್ತೊಬ್ಬರಲ್ಲಿ ಡೆಲ್ಟಾಗಿಂದ ಭಿನ್ನವಾದ ವಂಶವಾಹಿಗಳು ಗುಣಗಳು ಪತ್ತೆಯಾಗಿವೆ. ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ ಇದು ಉಲ್ಲೇಖಿತವಾಗಿದ್ದು, ಹೀಗಾಗಿ ಈ ಮಾದರಿಯನ್ನು ಮತ್ತಷ್ಟು ಅಧ್ಯಯನ ಸಲುವಾಗಿ ಕೇಂದ್ರ ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಿದೆ. ಈ ಮೂಲಕ ಅದು ರೂಪಾಂತರಿ ವೈರಾಣು ಅನ್ನುವುದನ್ನು ಪತ್ತೆ ಹಚ್ಚಲು ನಿರ್ಧರಿಸಲಾಗಿದೆ. ಇದನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಗುಡ್ ನ್ಯೂಸ್ ಅಂದ್ರೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದು, 224 ಸಂಪರ್ಕಿತರಿಗೂ ಸೋಂಕು ದೃಢಪಟ್ಟಿಲ್ಲ.
Discussion about this post