ಗೆಳತಿಯ ಪತಿಯನ್ನೇ ಪ್ರೀತಿಸಿದ ತಪ್ಪಿಗೆ ಇದೀಗ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಪತ್ನಿಯ ಸ್ನೇಹಿತನ್ನು ಪ್ರೀತಿಸಿ, ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.
ಬೆಂಗಳೂರು : ಮಚ್ಚು ಹಿಡಿದವನಿಗೆ ಮಚ್ಚಿನಿಂದಲೇ ಮರಣ ಅನ್ನುವುದು ರೌಡಿಗಳ ಲೋಕದ ಮಾತು ಹೀಗಾಗಿಯೇ ಮಚ್ಚು ಹಿಡಿಯೋ ಕೆಲಸ ಮಾಡುವ ಬದಲು ನಿಯತ್ತಿನಿಂದ ಬದುಕಿ ಎಂದು ಪೊಲೀಸರು ಪಾಠ ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಅಕ್ರಮ ಸಂಬಂಧ. ಅಕ್ರಮ ಸಂಬಂಧ ಜಾಲದೊಳಗೆ ಸಿಲುಕಿದರೆ ಯಮಕಿಂಕರರು ಹತ್ತಿರದಲ್ಲೇ ಸುಳಿದಾಡುತ್ತಿದ್ದಾರೆ ಎಂದೇ ಅರ್ಥ.
ಬೇರೊಬ್ಬ ಯುವಕನ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾಳೆ ಅನ್ನುವ ಅನುಮಾನದ ಹಿನ್ನಲೆಯಲ್ಲಿ ಪ್ರೇಯಸಿಯನ್ನು ಆಕೆಯ ಪ್ರಿಯಕರೇ ಕೊಲೆ ಮಾಡಿ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು HAL ನಿವಾಸಿ ದೀಪಾ ಪರಮ್ ( 22 ) ಎಂದು ಗುರುತಿಸಲಾಗಿದೆ. ಇನ್ನು ಕೊಲೆ ಮಾಡಿದ ಅನ್ಭುಲ್ ರತನ್ ಕಂದರ್ (25) ತಲೆ ಮರೆಸಿಕೊಂಡಿದ್ದಾನೆ.
ಜೂನ್ 9 ರಂದು ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಸ್ನೇಹಿತೆಯನ್ನೇ ಪ್ರೀತಿಸುತ್ತಿದ್ದ ರತನ್ ಯಶವಂತಪುರ ಸಮೀಪದ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದೈಹಿಕ ಸಂಬಂಧ ಬೆಳೆಸಿ ಬಳಿಕ ತಲೆದಿಂಬು ಬಳಸಿ ಹತ್ಯೆ ಮಾಡಿದ್ದಾನೆ. ನಂತರ ರೂಮ್ ನ ಬಾಗಿಲು ಲಾಕ್ ಮಾಡಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನಲೆ
ದೀಪಾ ಪದಮ್ ಹಾಗೂ ಅನ್ಭುಲ್ ಪತ್ನಿ ದೀನಮತಿ ಅಕ ದೀಪಾ ಬಾಲ್ಯದ ಗೆಳೆಯರಾಗಿದ್ದರು. ದೀಪಾಗೂ ವಿವಾಹವಾಗಿದ್ದು, ಆಕೆಯ ಪತಿ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ದೀಪಾ ಹಾಗೂ ದೀಪಾಲಿ ಬೆಂಗಳೂರಿನ ಬೇರೆ ಬೇರೆ ಸ್ಟೋರ್ ಒಂ ನಲ್ಲಿ ಕೆಲಸ ಮಾಡುತ್ತಿದ್ರೆ, ಅನ್ಭುಲ್ ಚಪ್ಪಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಜೂನ್ 9 ರಂದು ಕೊಲೆ ಮಾಡಿದ ಅನ್ಭುಲ್, ಜೂನ್ 10 ರಂದು ಮನೆಗೆ ಹೋಗಿದ್ದಾನೆ. ಜೊತೆಗೆ ಬೇರೊಬ್ಬನ ಜೊತೆಗೆ ತಿರುಗಾಡಿದ ಕಾರಣಕ್ಕೆ ದೀಪಾಳನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಆಕೆ ಸತ್ತಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಒಂದು ಸಲ ಲಾಡ್ಜ್ ಬಳಿ ಹೋಗಿ ನೋಡಿಕೊಂಡು ಬಾ. ಆಕೆ ಸತ್ತಿದ್ರೆ ಹೊಟೇಲ್ ಸಿಬ್ಬಂದಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸುವಂತೆ ಹೇಳಿದ್ದಾನೆ.
ಪತ್ನಿ ಆ ಕಡೆ ಹೋಗುತ್ತಿದ್ದಂತೆ, ಆರೋಪಿ ಗಂಟುಮೂಟೆ ಕಟ್ಟಿ ಪರಾರಿಯಾಗಿದ್ದಾನೆ. ಇತ್ತ ಗೆಳತಿಯನ್ನು ನೋಡಲು ಬದ ದೀನಮತಿ, ಲಾಡ್ಜ್ ರಿಸೆಪ್ಸನಿಸ್ಟ್ ನನ್ನು ಭೇಟಿಯಾಗಿ ರೂಮ್ ನಂಬರ್ 205ರಲ್ಲಿ ಇರುವ ಗೆಳತಿಯನ್ನು ನೋಡಬೇಕು ಅಂದಿದ್ದಾಳೆ. ರೂಮ್ ಬಾಯಿ ಜೊತೆಗೆ ದೀನಮತಿಯನ್ನು ಈ ವೇಳೆ ಕಳುಹಿಸಿಕೊಡಲಾಗಿದೆ. ಆಗ ಬಾಗಿಲು ತಟ್ಟಿದ್ರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಬಾಗಿಲು ತಳ್ಳಿ ನೋಡಿದ್ರೆ ದೀಪಾ ಕೊಲೆಯಾಗಿದ್ದಳು. ಪೂರ್ವ ಯೋಜನೆಯಂತೆ ದೀನಮತಿ ಲಾಡ್ಜ್ ಸಿಬ್ಬಂದಿ ಮೇಲೆ ಆರೋಪ ಹೊರಿಸಿದ್ದಾಳೆ.
ಈ ವೇಳೆ ಪೊಲೀಸರಿಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ್ದರೆ ಆಗ ಸತ್ಯ ಹೊರ ಬಿದ್ದಿದೆ. ಈ ವೇಳೆ ದೀಪಾಲಿ ಪತಿಗೆ ಕರೆ ಮಾಡಿದ್ರೆ ಅತನ ನಂಬರ್ ಸ್ವಿಚ್ ಆಫ್ ಆಗಿತ್ತು. ಈ ನಡುವೆ I killed deepa ಅನ್ನುವ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದ.
ಅಂದ ಹಾಗೇ ಇವರೆಲ್ಲರೂ ಒರಿಸ್ಸಾ ಮೂಲದವರು ಎಂದು ಗೊತ್ತಾಗಿದೆ.
Discussion about this post