ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಯುವತಿಯ ತಂದೆಯನ್ನೇ ಪಾಗಲ್ ಪ್ರೇಮಿಯೊಬ್ಬ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲದ ಬೆತ್ತನಗೆರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಒಂದು ವರ್ಷದಿಂದ ಸ್ಥಳೀಯ ಪುಡಿ ರೌಡಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಆದರೆ ಯುವತಿ ಇದಕ್ಕೆ ಒಪ್ಪಿರಲಿಲ್ಲ. ಮಾತ್ರವಲ್ಲ ಪುಡಿ ರೌಡಿ ನರೇಶ್ ಕಿರುಕುಳ ನೀಡುತ್ತಿರುವ ಬಗ್ಗೆ ತಂದೆ ನಾಗಪ್ಪ ಬಳಿ ದೂರಿಕೊಂಡಿದ್ದಳು.
ಮಗಳ ಮೇಲೆ ಕಿರುಕುಳ ನೀಡುತ್ತಿದ್ದ ನರೇಶ್ ನನ್ನು ತರಾಟೆಗೆ ತೆಗೆದುಕೊಂಡಿದ್ದ ನಾಗಪ್ಪ ಎಚ್ಚರಿಕೆಯನ್ನು ಕೊಟ್ಟಿದ್ದರು. ಈ ನಡುವೆ ಪಾಗಲ್ ಪ್ರೇಮಿ ನಾಗಪ್ಪ ವಿರುದ್ಧ ದ್ವೇಷ ಕಾರಲಾರಂಭಿಸಿದ್ದ ಮಾತ್ರವಲ್ಲದೆ ತನ್ನ ಸಹಚರರಿಗೂ ಈ ಬಗ್ಗೆ ಹೇಳಿಕೊಂಡಿದ್ದ.
ಹೀಗಾಗಿ ನಾಲ್ವರು ಸಹಚರರೊಂದಿಗೆ ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಿರುವ ನರೇಶ್ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post