ಪರಿಚಿತರ ಮನೆಗಳನ್ನೇ ಈಕೆ ಟಾರ್ಗೇಟ್ ಮಾಡುತ್ತಿದ್ದಳು. ಕೈ ತುಂಬಾ ಕಾಸಿದ್ದರು ಆದ್ಯಾಕೆ ಈಕೆ ಕಳ್ಳತನ ( Mysore ) ಮಾಡುತ್ತಿದ್ದಳು ಅನ್ನುವುದೇ ಯಕ್ಷ ಪ್ರಶ್ನೆ
ಮೈಸೂರು : ಪರಿಚಯಸ್ಥರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಬಂಧಿತಳನ್ನು ಮೈಸೂರು ( Mysore ) ಆಲನಹಳ್ಳಿ ನಿವಾಸಿ ಪ್ರಭಾಮಣಿ ಎಂದು ಗುರುತಿಸಲಾಗಿದೆ. ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈಕೆ 5 ಮನೆಗಳ ಮಾಲಕಿ ಅನ್ನುವುದು ಗೊತ್ತಾಗಿದೆ.
ಕೆಲ ವಾರಗಳ ಹಿಂದೆ, ಜೂನ್ 30ರಂದು ಕುಮಾರ್ ಅನ್ನುವವರ ಪತ್ನಿ ಪ್ರಭಾಮಣಿ ಮಗಳ ಬಳಿಗೆ ಫಿಸಿಯೋಥೆರಪಿಗಾಗಿ ಬಂದಿದ್ದರು. ಚಿಕಿತ್ಸೆಗಾಗಿ ಮನೆಗೆ ಬಂದವರನ್ನು ಚೆನ್ನಾಗಿಯೇ ಮಾತನಾಡಿಸಿದ್ದ ಪ್ರಭಾಮಣಿ, ಕೆಲವೇ ಹೊತ್ತಿನಲ್ಲಿ ಜಾಗ ಖಾಲಿ ಮಾಡಿದ್ದಳು. ಸಂಜೆ 7.30ರ ಹೊತ್ತಿಗೆ ಕುಮಾರ್ ಮನೆಗೆ ಬಂದ ಪ್ರಭಾಮಣಿ, 190 ಗ್ರಾಮ್ ಚಿನ್ನ,3 ಕೆಜಿ ಬೆಳ್ಳಿ ಮತ್ತು 90 ಸಾವಿರ ದೋಚಿದ್ದಾಳೆ.
ಇದನ್ನು ಓದಿ : Vijay Mallya : ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ವಿಧಿಸಿದ ಸುಪ್ರೀಂಕೋರ್ಟ್
ನಕಲಿ ಕೀ ಬಳಸಿ ಮನೆ ಲೂಟಿ ಮಾಡಿದ ಪ್ರಭಾಮಣಿ ಏನೂ ಆಗಿಲ್ಲ ಅನ್ನುವಂತೆ ಮತ್ತೆ ಮನೆಗೆ ವಾಪಾಸ್ ಬಂದಿದ್ದಾಳೆ. ಈ ನಡುವೆ ಕುಮಾರ್ ಅವರ ಪತ್ನಿ ಚಿಕಿತ್ಸೆ ಮುಗಿಸಿ ಮನೆಗೆ ಬಂದ್ರೆ ಮನೆಯನ್ನು ಗುಡಿಸಿ ಗುಂಡಾಂತರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಪ್ರಭಾಮಣಿಯೇ ಕಳ್ಳಿ ಎಂದು ಗೊತ್ತಾಗಿದೆ.
ಬಗಲ್ ಮೇ ಕಳ್ಳಿಯ ಕಥೆ ಕೇಳಿ ಅಚ್ಚರಿಯಾಗಿದ್ದಾರೆ. ಆದರೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಕಳೆದ 2 ವರ್ಷದಲ್ಲಿ ಈಕೆ 20ಕ್ಕೂ ಹೆಚ್ಚು ಮನೆಗಳನ್ನು ದೋಚಿದ್ದಾಳೆ ಎಂದು ಗೊತ್ತಾಗಿದೆ. ಆಂದ ಹಾಗೇ ಎಲ್ಲವೂ ಕೂಡಾ ನಕಲಿ ಕೀ ಬಳಸಿ ಎಸಗಿದ ಕೃತ್ಯಗಳು ಎಂದು ಗೊತ್ತಾಗಿದೆ.
ಪಿಎಸ್ಐ ನೇಮಕಾತಿ ಹಗರಣಕ್ಕೆ ಟ್ವಿಸ್ಟ್ : ಹಗರಣದಲ್ಲಿ ಕಾಂಗ್ರೆಸ್ ಶಾಸಕನ ಪುತ್ರನ ಹೆಸರು
ಪೊಲೀಸ್ ನೇಮಕಾತಿ ಹಗರಣದಲ್ಲಿ ಬಿಜೆಪಿ ಸಚಿವರಿದ್ದಾರೆ ಅನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಇದೀಗ ಸಿಐಡಿ ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕರ ಪುತ್ರನೊಬ್ಬನ ಹೆಸರು ಉಲ್ಲೇಖಿತಗೊಂಡಿದೆ.
ಬೆಂಗಳೂರು : ದೇಶದಲ್ಲೇ ತಲ್ಲಣ ಮೂಡಿಸಿದ್ದ ಕರ್ನಾಟಕ ಪೊಲೀಸ್ ನೇಮಕಾತಿ ಹಗರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ಈ ಟ್ವಿಸ್ಟ್ ನಿಂದ ಮುಜುಗರಕ್ಕೆ ಒಳಗಾಗಲಿದೆ.
ಖಾಸಗಿ ಸುದ್ದಿ ವಾಹಿನಿಯೊಂದು ಈ ಸಂಬಂಧ ವರದಿ ಪ್ರಸಾರ ಮಾಡಿದ್ದು, ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕನ ಪುತ್ರರ ಹೆಸರಿದೆ ಅಂದಿದೆ. ಈಗಾಗಲೇ ಬಂಧಿತನವಾಗಿರುವ ಆರ್ ಡಿ ಪಾಟೀಲ್ ( ರುದ್ರಪ್ಪ ದ್ಯಾಮಪ್ಪ ಪಾಟೀಲ್ ) ಕಾಂಗ್ರೆಸ್ ಶಾಸಕನ ಪುತ್ರನ ಹೆಸರನ್ನು ಬಹಿರಂಗಪಡಿಸಿದ್ದಾನೆ.
ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯ ಪ್ರಕಾರ ಅಪ್ಝಲ್ ಪುರ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರುಣ್ ಕುಮಾರ್ ಪಾಟೀಲ್ ಈ ಹಗರಣದಲ್ಲಿ ಕಿಂಗ್ ಪಿನ್ ಅನ್ನಲಾಗಿದೆ. ಅಪ್ಪನ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯನ್ನು ಪಿಎಸ್ಐ ಮಾಡಲು ಅರುಣ್ ಪಾಟೀಲ್ ಈ ಅಕ್ರಮ ಎಸಗಿದ್ದರು ಎಂದು ಗೊತ್ತಾಗಿದೆ. ಜೊತೆಗೆ ಹಯ್ಯಾಳಿ ದೇಸಾಯಿ ಕಡೆಯಿಂದ 10 ಲಕ್ಷ ರೂಪಾಯಿ ಪಡೆದು ಅದನ್ನು ಅರುಣ್ ಕುಮಾರ್ ಪಾಟೀಲ್ ಗೆ ತಾನೇ ತಲುಪಿಸಿರುವುದಾಗಿ ಆರ್,ಡಿ.. ಪಾಟೀಲ್ ಹೇಳಿದ್ದು, ಈ 10 ಲಕ್ಷ ರೂಪಾಯಿ ಹಣವನ್ನು ಅರುಣ್ ಕುಮಾರ್ ಪಾಟೀಲ್ ಹಾಗೂ ಅವರ ತಮ್ಮ ಮಹಾಂತೇಶ್ ಪಾಟೀಲ್ ಹಂಚಿಕೊಂಡಿದ್ದಾರೆ ಎಂದು ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯನ್ನು ಕೊಟ್ಟಿದ್ದಾನೆ.
ಜೊತೆಗೆ ಎಂವೈ ಪಾಟೀಲ್ ಅವರಿಗೂ ಈ ವ್ಯವಹಾರ ಗೊತ್ತಿತ್ತು ಅಂದಿರುವ ರುದ್ರಪ್ಪ ದ್ಯಾಮಪ್ಪ ಪಾಟೀಲ್ ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ನೆರಳಿದೆ ಅನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾನೆ.
Discussion about this post