ಪೊಲೀಸರು ತನಿಖೆಗಾಗಿ ಬಂದ್ರೆ ಹೈಡ್ರಾಮಾ ಮಾಡಿದ ಮಹಿಳೆ ಕೈ ಜಾರಿ ಮಗಳು ಬಿದ್ಲು (mother killed daughter) ಅಂದಿದ್ದಾಳೆ
ಬೆಂಗಳೂರು : ಮಗುವಿಗೆ ಮಾತು ಬರುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ತಾಯಿಯೊಬ್ಬಳು ತನ್ನ 4 ವರ್ಷದ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ (mother killed daughter) ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಜೀತಿ ಎಂದು ಗುರುತಿಸಲಾಗಿದೆ.
ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇದಾದ ಬಳಿಕ ಸುಷ್ಮಾ ತಾನು ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. (mother killed daughter) ಈ ವೇಳೆ ಗಮನಿಸಿದ ಅಕ್ಕಪಕ್ಕದ ಮನೆಯವರು ಸುಷ್ಮಾಳನ್ನು ರಕ್ಷಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Amit shah bommai : ಬೊಮ್ಮಾಯಿ ಜೀ ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾ ಹೈ…?
ಆದರೆ ಈಗ ಲಭ್ಯ ಮಾಹಿತಿ ಪ್ರಕಾರ ಮಗವನ್ನು ಉದ್ದೇಶಪೂರ್ವಕವಾಗಿ ಎಸೆದ ಮಹಿಳೆ ಆತ್ಮಹತ್ಯೆ ಮಾಡುವಂತೆ ನಾಟಕವಾಡಿದ್ದಾಳೆ. ಮಗು ಬಿದ್ದ ಸಾಕಷ್ಟು ಸಮಯ ಆಕೆ ಹಾರುವಂತೆ ನಾಟಕವಾಡಿದ್ದಳಂತೆ. ಸ್ಥಳೀಯರು ಬಂದ ನಂತರ ಆಕೆ ಯಥಾ ಸ್ಥಾನಕ್ಕೆ ಬಂದಿದ್ದಾಳೆ.
ಇನ್ನು ಪೊಲೀಸರು ಪ್ರಕರಣದ ಕುರಿತಂತೆ ತನಿಖೆಗೆ ಬಂದ ಸಂದರ್ಭದಲ್ಲೂ ಹೈಡ್ರಾಮ ಕ್ರಿಯೇಟ್ ಮಾಡಿದ್ದ ಮಹಿಳೆ ನಾನು ಮಗುವನ್ನು ಆಟವಾಡಿಸುತ್ತಿರುವಾಗ ಕೈ ಜಾರಿ ಮಗಳು ಬಿದ್ಲು, ನಾನು ಕೂಡಾ ಹಾರಲು ಮುಂದಾದ ವೇಳೆ ಅಕ್ಕ ಪಕ್ಕದ ಮನೆಯವರು ರಕ್ಷಿಸಿದ್ದಾರೆ ಅಂದ್ರಂತೆ. ಆದರೆ ಪೊಲೀಸರು ಸಿಸಿಟಿವಿ ವಿಡಿಯೋ ತೋರಿಸಿದ್ರೆ ಗಪ್ ಚುಪ್ ಆಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ಮೂರು ತಿಂಗಳ ಹಿಂದೆ ಸುಷ್ಮಾ ಮಗುವನ್ನು ರೈಲ್ವೆ ಸ್ಟೇಷನ್ ನಲ್ಲೇ ಬಿಟ್ಟು ಬಂದಿದ್ದರಂತೆ. ಆಗ ಪತಿಯೇ ಹೋಗಿ ಮಗುವನ್ನು ಕರೆದುಕೊಂಡು ಬಂದಿದ್ದರು ಅನ್ನಲಾಗಿದೆ. ಸುಷ್ಮಾ ದಂತ ವೈದ್ಯೆಯಾಗಿದ್ದು ಅವರ ಪತಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದಾರೆ.
Discussion about this post