ಮಂಡ್ಯ : ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿ ಬಿಟ್ಟಿದೆ. ಹಿಂದೆಲ್ಲಾ ಅಪ್ಪ ಅಮ್ಮ ಬೈದ್ರೆ, ಪೆಟ್ಟು ಕೊಟ್ರೆ ಅದನ್ನು ತಲೆಗೆ ಹಚ್ಚಿಕೊಳ್ಳುವ ಮಕ್ಕಳು ತುಂಬಾ ಕಡಿಮೆ. ಆದರೆ ಇತ್ತೀಚೆಗೆ ಮಕ್ಕಳಿಗೆ ಏನೂ ಹೇಳಲು ಭಯವಾಗುತ್ತಿದೆ. ಮೊಬೈಲ್ ನೋಡಬೇಡಿ, ಅದು ಮಾಡಬೇಡಿ, ಇದು ಮಾಡಬೇಡಿ ಅಂದ್ರೆ ಅನಾಹುತವನ್ನೇ ಮಾಡಿಕೊಂಡು ಬಿಡುತ್ತಾರೆ. ಈ ವಿಷಯದಲ್ಲಿ ಮನೋತಜ್ಞರು ಪೋಷಕರಲ್ಲಿ ಒಂದಿಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.
ಹೀಗೆ ಮಂಡ್ಯ ಮಳವಳ್ಳಿಯಲ್ಲಿ ದುರಂತವೊಂದು ನಡೆದು ಹೋಗಿದೆ. ಈ ದುರ್ಘಟನೆ ತಳಗವಾದಿ ಗ್ರಾಮದಲ್ಲಿ ನಡೆದಿದ್ದು ಇಬ್ಬರ ನಡುವೆ ಮನಸ್ತಾಪ ಇಬ್ಬರ ಜೀವವನ್ನೂ ಬಲಿ ಪಡೆದಿದೆ.
ಮೃತರನ್ನು ತಳಗವಾದಿ ಗ್ರಾಮದ 17 ವರ್ಷದ ಬಾಲಕಿ ಹಾಗೂ ಆಕೆಯ ತಂದೆ 46 ವರ್ಷದ ರಾಜು ಎಂದು ಗುರುತಿಸಲಾಗಿದೆ.
ಕಾಲೇಜಿಗೆ ಸೇರುವ ವಿಚಾರಕ್ಕೆ ಮಗಳು ಮತ್ತು ತಂದೆ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿಚಾರಕ್ಕೆ ಮನನೊಂದ ಮಗಳು ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮಗಳು ನೇಣಿಗೆ ಶರಣಾದ ಸುದ್ದಿ ಕೇಳಿದ ತಂದೆ ರಾಜು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post