ಸ್ನಾನದ ಬಳಿಕ ಟವಲ್ ನೀಡಲು ವಿಳಂಭ ಮಾಡಿದಳು ಅನ್ನುವ ಕ್ಷುಲಕ ಕಾರಣಕ್ಕೆ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಬಾಲಾಘಾಟ್’ನ ಹೀರಾ ಪುರ್ ಎಂಬಲ್ಲಿ ಶನಿವಾರ ನಡೆದಿದೆ.ಮೃತ ಮಹಿಳೆಯನ್ನು ಪುಷ್ಪ ಬಾಯಿ (45) ಎಂದು ಗುರುತಿಸಲಾಗಿದೆ.
50 ವರ್ಷದ ರಾಜ್ ಕುಮಾರ್ ಬಾಹೆ, ಸ್ನಾನ ಮುಗಿಸಿದ ಬಳಿಕ ಟವೆಲ್ ಗಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಬೇರೆ ಕೆಲಸದಲ್ಲಿ ಮಗ್ನಳಾಗಿದ್ದ ಪುಷ್ಪಾ ಕೆಲ ನಿಮಿಷ ಕಾಯುವಂತೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ರಾಜ್ ಕುಮಾರ್ ಬಚ್ಚಲು ಮನೆಯಿಂದ ಬಂದವನೇ, ಹೆಂಡತಿ ತಲೆಯನ್ನು ಗೋಡೆಗೆ ಪದೇ ಪದೇ ಬಡಿದಿದ್ದಾನೆ. ಅಷ್ಟು ಹೊತ್ತಿಗೆ ಸ್ಥಳಕ್ಕೆ ದೌಡಾಯಿಸಿದ ದಂಪತಿಯ 23 ವರ್ಷದ ಮಗಳು ತಾಯಿಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಅಷ್ಟು ಹೊತ್ತಿಗೆ ಪುಷ್ಪಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಆರೋಪಿ ರಾಜ್ ಕುಮಾರ್ ಬಾಹೆ ಅರಣ್ಯ ಇಲಾಖೆಯಲ್ಲಿ ದಿನಗೂಲಿಗೆ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Discussion about this post