ಸಾಮಾಜಿಕ ಜಾಲತಾಣಗಳು ಸಕ್ರಿಯವಾದ ಮೇಲೆ ನೂರಾರು ವಿಡಿಯೋ APPಗಳು ಕೂಡಾ ಪ್ರಾರಂಭವಾಗಿದೆ. ಈ APPಗಳಲ್ಲಿ ಲೈಕ್ ಕಮೆಂಟ್ ಗಿಟ್ಟಿಸುವ ನಿಟ್ಟಿನಲ್ಲಿ ಯುವ ಜನತೆ ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಸೆಲ್ಪಿ ಅನ್ನುವ ಹುಚ್ಚು ಹಲವರ ಪ್ರಾಣಕ್ಕೆ ಕುತ್ತು ತಂದ ಬೆನ್ನಲ್ಲೇ ಹಲವು ಕಡೆಗಳಲ್ಲಿ ನೋ ಸೆಲ್ಪಿ ಝೋನ್ ಗಳನ್ನು ತೆರೆಯಬೇಕಾಗಿ ಬಂತು.
ಇದಾದ ಬಳಿಕ ರೀಲ್, ಶಾರ್ಟ್ ವಿಡಿಯೋ ಕ್ರೇಜ್ ಪ್ರಾರಂಭವಾಗಿದ್ದು, ಜೀವದ ಹಂಗು ತೊರೆದು ಲೈಕ್ ಹೆಚ್ಚಿಸಿಕೊಳ್ಳಲು ಸರ್ಕಸ್ ಪ್ರಾರಂಭವಾಗಿದೆ. ಓದುವ ಹುಚ್ಚು ಈ ಮಟ್ಟಿಗೆ ಇರುತ್ತಿದ್ರೆ Rank ಪಡೆಯಬಹುದಾಗಿತ್ತು. ಆದರೆ ಶಾರ್ಟ್ ವಿಡಿಯೋ ಖಯಾಲಿಗೆ ಬಿದ್ದ ಯುವಜನತ ತಮ್ಮ ಭವಿಷ್ಯಕ್ಕೆ ತಾವೇ ಕಲ್ಲು ಹಾಕುತ್ತಿದ್ದಾರೆ. ಜೊತೆಗೆ ಭವಿಷ್ಯ ಮಾತ್ರವಲ್ಲ ಆಯುಷ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಹೀಗೆ ಇನ್ಸ್ಟಾ ವಿಡಿಯೋ ಹುಚ್ಚಿಗೆ ಬಿದ್ದ ಗುಜರಾತಿನ ಬಾಲಕನೊಬ್ಬ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. 15 ವರ್ಷದ ಪ್ರೇಮ್ ಪಂಚಲ್ ಎಂಬ ಹೈಸ್ಕೂಲ್ ವಿದ್ಯಾರ್ಥಿ ವಿಡಿಯೋ ಮಾಡಲು ಗುಜರಾತಿನ ಅಹಮದಾಬಾದ್ನಲ್ಲಿ ಗೂಡ್ಸ್ ರೈಲು ಏರಿದ್ದಾನೆ. ಈ ವೇಳೆ ರೈಲಿನ ಬೋಗಿ ಮೇಲೆ ಹಾದು ಹೋಗಿದ್ದ ಎಲೆಕ್ಟ್ರಿಕ್ ವೈಯರ್ ಸ್ಪರ್ಶವಾಗಿ, ಹೈವೋಲ್ಟೇಜ್ ವಿದ್ಯುತ್ ಹರಿದು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ.
Discussion about this post