90 ಹಂದಿ ಕದಿಯಲು ಬಂದ ಖದೀಮರು ಮಾಲೀಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಜಾಲಹಳ್ಳಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು – Koppal
ಕೊಪ್ಪಳ : ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾದ ದರೋಡೆಕೋರರ ಮೇಲೆ ಬೆಂಗಳೂರು ಪೊಲೀಸರು ಆತ್ಮ ರಕ್ಷಣೆ ಸಲುವಾಗಿ ಗುಂಡಿನ ದಾಳಿ ನಡೆಸಿದ ಘಟನೆ ಕೊಪ್ಪಳ (Koppal) ಜಿಲ್ಲೆಯ ಕಾರಟಗಿ ತಾಲೂಕಿನ ಮೂಷ್ಟೂರು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಗಲಿ ಹತ್ತಿರ ಫಾರಂ ಒಂದಕ್ಕೆ ಜುಲೈ 16ರ ರಾತ್ರಿ 2 ಗಂಟೆ ಸುಮಾರಿಗೆ ನುಗ್ಗಿದ ಖದೀಮರು 90 ಹಂದಿಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಫಾರಂ ಮಾಲೀಕರಾದ ಸಂದೀಪ್ ಮತ್ತು ರಾಮಚಂದ್ರ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. (Koppal NEWS)
ಇದನ್ನೂ ಓದಿ : actress indraja : ಇಂದ್ರಜಾ ಮದುವೆಗೆ ಎಷ್ಟು ಜನ ಬಂದಿದ್ದರು… ಖರ್ಚಾಗಿತ್ತು ಎಷ್ಟು ಗೊತ್ತಾ..? ವೆಚ್ಚದ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಈಶಾನ್ಯ ಡಿಸಿಪಿ ಅನೂಪ್ ಶೆಟ್ಟಿ ತಂಡವೊಂದರನ್ನು ರಚಿಸಿದ್ದರು. ಈ ವೇಳೆ ಹಂದಿ ಕದಿಯಲು ಬಂದ ಖದೀಮರು ಮರಳಿ ಗ್ರಾಮದ ಟೋಲ್ ಬಳಿ ನಿಲ್ಲಿಸಿ ಮಲಗಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಾಗ ಕ್ಯಾಬಿನ್ ನಲ್ಲಿ ಇಬ್ಬರು ಮತ್ತು ಹಿಂದೆ ಮೂವರು ಮಲಗಿದ್ದರು. ಆರೋಪಿಗಳನ್ನು ಬಂಧಿಸಲು ಪೊಲೀಸರು ಗಾಡಿ ಹತ್ತಿದ್ರೆ ಎಚ್ಚರಗೊಂಡ ದರೋಡೆಕೋರರು ವಾಹನ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಅತೀ ವೇಗದಲ್ಲಿ ಗಾಡಿ ಓಡಿಸಿಕೊಂಡು ಹೋದ ವೇಳೆ ದರೋಡೆಕೋರರ ವಾಹನದಲ್ಲಿದ್ದ ಮುಖ್ಯ ಕಾನ್ಸ್ ಟೇಬಲ್ ಬಸವರಾಜ ಅವರನ್ನು ಕೊಲೆ ದುಷ್ಕರ್ಮಿಗಳು ಮುಂದಾಗಿದ್ದಾರೆ. ಈ ವೇಳೆ ಹಿಂಬದಿ ವಾಹನದಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಪ್ರವೀಣ್ ಖದೀಮರತ್ತ ಗುಂಡು ಹಾರಿಸಿದ್ದಾರೆ.
ಈ ವೇಳೆ ಅಶೋಕ ಮತ್ತು ಶಂಕರ ರಮೇಶ್ ಗಾಯಗೊಂಡಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಸಾಥ್ ನೀಡಿದ್ದ ಸಿಂಧನೂರು ತಾಲೂಕಿನ ಅಂಬಾಮಠದ ಅಂಬಣ್ಣ ರಾಮಣ್ಣ, ಪರಶುರಾಮ ರಾಮಣ್ಣ ಎಂಬವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Dio bike theft : ಡಿಯೋ ಬೈಕ್ ಕದಿಯಲೆಂದು ಬೆಂಗಳೂರಿಗೆ ಬರುತ್ತಿದ್ದ ತಮಿಳುನಾಡು ಚೋರರು ಅಂದರ್
ರಾಜ್ಯಪಾಲರಿಗೆ ಯಡಿಯೂರಪ್ಪ : ಆಫರ್ ಒಪ್ಪಿಕೊಳ್ತಾರ ರಾಜಾಹುಲಿ
ಸೈಕಲ್ ಹತ್ತಿ ಪಕ್ಷ ಕಟ್ಟಿದ ನಾಯಕನಿಗೆ ದೊಡ್ಡ ಪಟ ಕೊಡಲು ಬಿಜೆಪಿ ಸಿದ್ದವಾಗಿದೆ. ಆದರೆ ಅವರು ಒಪ್ಪಿಕೊಳ್ಳುವುದೇ ಅನುಮಾನವಂತೆ
ಬೆಂಗಳೂರು : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯಲ್ಲಿ ಸಕ್ರಿಯವಾಗಿರುವುದಾಗಿ ಹೇಳಿದ್ದಾರೆ. ಆದರೆ ರಾಜ್ಯ ನಾಯಕರು ಅದೆಷ್ಟರ ಮಟ್ಟಿಗೆ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುತ್ತಾರೆ ಅನ್ನುವುದು ಗೊತ್ತಿಲ್ಲ. ಈಗಾಗಲೇ ಯಡಿಯೂರಪ್ಪ ಬೆಂಬಲಿಗ ಶಾಸಕರನ್ನು ಯಶಸ್ವಿಯಾಗಿ ಸೈಡಿಗೆ ಸರಿಸಲಾಗಿದೆ. ಮಾತ್ರವಲ್ಲದೆ ರಾಜ್ಯ ಬಿಜೆಪಿ ಸಮನ್ವಯತೆ ಇಲ್ಲದೆ ಒದ್ದಾಡುತ್ತಿದೆ. ಮೂಲ ಮತ್ತು ವಲಸೆ ಕಿತ್ತಾಟ ಇನ್ನೂ ಜೀವಂತವಿದೆ.ಆದರೆ ರಾಷ್ಟ್ರೀಯ ಮಟ್ಟದಲ್ಲಿ ಯಡಿಯೂರಪ್ಪ ಖದರ್ ಇನ್ನೂ ಇದೆ.
ಹೀಗಾಗಿಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಅವರನ್ನು ರಾಜ್ಯಪಾಲರನ್ನಾಗಿ ಕಳುಹಿಸಿರುವ ಸಾಧ್ಯತೆಗಳಿದೆ.
ಆದರೆ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪ ಒಪ್ಪಿಕೊಳ್ಳುವುದು ಅನುಮಾನ ಅನ್ನಲಾಗಿದೆ. ಈ ಹಿಂದೆಯೂ ಅವರಿಗೆ ರಾಜ್ಯಪಾಲರಾಗುವ ಅವಕಾಶ ಬಂದಿತ್ತು. ಆದರೆ ಅವರು ಅದಕ್ಕೆ ಸಮ್ಮಿತಿಸಿರಲಿಲ್ಲ. ಈ ಕಾರಣದಿಂದ ಈ ಬಾರಿಯೂ ರಾಜ್ಯಪಾಲರಾಗುವ ಆಫರ್ ತಿರಸ್ಕರಿಸುತ್ತಾರೆ ಅನ್ನಲಾಗಿದೆ. ಅವರ ಫೋಕಸ್ ಏನಿದ್ರೂ ಮಕ್ಕಳನ್ನು ರಾಜಕೀಯವಾಗಿ ಸದೃಢಗೊಳಿಸುವುದಾಗಿದೆ. ಒಂದು ವೇಳೆ ರಾಜ್ಯಪಾಲರಿಗೆ ಹೋದರೆ ರಾಜ್ಯದಲ್ಲಿ ಹಿಡಿತ ತಪ್ಪುವ ಆತಂಕ ಯಡಿಯೂರಪ್ಪ ಅವರದ್ದು.
Discussion about this post