ಸೆಲೆಬ್ರೆಟಿಗಳ ಮದುವೆ ಅಂದ್ರೆ ಅದರ ಗಮ್ಮತೇ ಬೇರೆ. ಇನ್ನು ಖರ್ಚಿನ ವಿಷಯಕ್ಕೆ ಬಂದ್ರೆ ಕೇಳುವುದೇ ಬೇಡ. ಇಡೀ ಇಂಡಸ್ಟ್ರಿ ತಿರುಗಿನೋಡಬೇಕು. ಹತ್ತಾರು ಜನ ಮದುವೆ ಬಗ್ಗೆ ಒಂದೆರಡು ತಿಂಗಳು ಮಾತನಾಡಬೇಕು. ಊಟದ ವಿಚಾರಕ್ಕೆ ಬಂದ್ರೆ ಅದೆಷ್ಟು ವೇಸ್ಟ್ ಆದ್ರೂ ಪರವಾಗಿಲ್ಲ, ತಟ್ಟೆಯಲ್ಲಿ ತುಂಬಿ ತುಳುಕುತ್ತಿರಬೇಕು. ( actress indraja )
ಆದರೆ ಕೆಲವೊಂದು ಸೆಲೆಬ್ರೆಟಿಗಳು ದುಬಾರಿ ಖರ್ಚಿನ ವಿಷಯದಲ್ಲಿ ಸುದ್ದಿಯಲ್ಲಿ ಸುದ್ದಿ ಮಾಡಿದ್ರೆ ಮತ್ತೆ ಕೆಲ ಸೆಲೆಬ್ರೆಟಿಗಳು ಸಿಂಪಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಪೈಕಿ ಒಂದು ಹೆಸರು ದಕ್ಷಿಣ ಭಾರತದ ನಟಿ ಇಂದ್ರಜಾ ( actress indraja )
ಒಂದು ಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡಿದವರು ಇಂದ್ರಜಾ. ನಾಲ್ಕು ಭಾಷೆಗಳಲ್ಲಿ ನಟಿಸುವ ಮೂಲಕ ಟಾಪ್ ನಾಯಕಿ ಅನ್ನಿಸಿಕೊಂಡಿದ್ದರು. ತೆಲುಗಿನ ಬಹುತೇಕ ಎಲ್ಲಾ ಟಾಪ್ ಹೀರೋಗಳ ಜೊತೆ ನಟಿಸಿದ ಹಿರಿಮೆ ಇವರದ್ದು.
ಮದುವೆಯ ಬಳಿಕ ಕೆಲ ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಮತ್ತೆ ಈಗ ಎರಡನೇ ಇನ್ನಿಂಗ್ಸ್ ನಲ್ಲಿ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ. ಇದರೊಂದಿಗೆ ಕೆಲ ಟಿವಿ ಶೋಗಳಿಗೆ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ವಿಚಾರದಲ್ಲಿ ಇಂದ್ರಜಾ ಬಗ್ಗೆ ಎಲ್ಲರಿಗೂ ಸಾಕಷ್ಟು ವಿಷಯ ಗೊತ್ತಿದೆ. ಆದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇತ್ತೀಚೆಗೆ ಟಿವಿ ಶೋವೊಂದರಲ್ಲಿ ಇಂದ್ರಜಾ ತಮ್ಮ ವೈಯಕ್ತಿಕ ಜೀವನದ ಹಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ : Roopa Hadagali : ಕಸದ ಲಾರಿಗೆ ದಂಪತಿ ಬಲಿ : ಹೆಣ್ಣು ಮಕ್ಕಳ ನೆರವಿಗೆ ಪಿಎಸ್ಐ ರೂಪಾ ಹಡಗಲಿ
ತಮ್ಮ ಮದುವೆ ಬಗ್ಗೆ ಮಾತನಾಡಿದ ಇಂದ್ರಜಾ.. ‘ನಮ್ಮದು ಪ್ರೇಮ ವಿವಾಹ. ನಮ್ಮ ಮದುವೆಯಲ್ಲಿ ಕೇವಲ 13 ಅತಿಥಿಗಳು ಭಾಗವಹಿಸಿದ್ದರು. ನಮ್ಮ ಮದುವೆಯ ವೆಚ್ಚ ಅಕ್ಷರಶಃ 7500 ರೂ ಅಂದಿದ್ದಾರೆ. ಅಂದ ಹಾಗೇ ಇಂದ್ರಜಾ ಅವರ ಗಂಡನ ಹೆಸರು ಮೊಹಮ್ಮದ್ ಅಬ್ಸರ್. 2006 ರಲ್ಲಿ ಇವರಿಬ್ಬರ ಮದುವೆಯಾಗಿತ್ತು.
13 ವರ್ಷಗಳ ಬಳಿಕ ದೆಹಲಿಗೆ ಭೇಟಿ : ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನ ಬಿಜೆಪಿ ಸಚಿವರ ಮನೆಗೆ ದೌಡು
ಸುದೀಪ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ಸೌಜನ್ಯದ ಭೇಟಿ ಅನ್ನುವುದು ಮಾಧ್ಯಮದ ಹೇಳಿಕೆಗೆ ಮಾತ್ರ ಸೀಮಿತ
ನವದೆಹಲಿ : ವಿಕ್ರಾಂತ್ ರೋಣ ಬಿಡುಗಡೆಯ ಗಡಿಬಿಡಿಯಲ್ಲಿರುವ ನಟ ಕಿಚ್ಚ ಸುದೀಪ್ ಈಗಾಗಲೇ ಚಿತ್ರದ ಪ್ರಚಾರ ಪ್ರಾರಂಭಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಸುದೀಪ್ ದೆಹಲಿಗೆ ಹಾರಿದ್ದಾರೆ. 13 ವರ್ಷಗಳ ಬಳಿಕ ಸುದೀಪ್ ದೆಹಲಿಗೆ ಭೇಟಿ ನೀಡಿದ್ದಾರೆ ಅನ್ನಲಾಗಿದೆ.
ಚಿತ್ರದ ಪ್ರಚಾರದ ಸಲುವಾಗಿ ದೆಹಲಿಗೆ ತೆರಳಿರುವ ಸುದೀಪ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಜೋಶಿಯವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : mangalore liquor : ದಕ್ಷಿಣ ಕನ್ನಡ ಕುಡುಕರ ಜಿಲ್ಲೆಯಾಗುತ್ತಿದೆಯೇ…. ಮದ್ಯ ಮಾರಾಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನ
ಹಾಗಾದ್ರೆ ಕೇಂದ್ರ ಸಚಿವರನ್ನು ಸುದೀಪ್ ಭೇಟಿಯಾಗಿದ್ಯಾಕೆ ಅನ್ನುವ ಪ್ರಶ್ನೆ ಮೂಡಿದೆ. ಇದೊಂದು ಸೌಜನ್ಯ ಭೇಟಿ ಅನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಆದರೆ ಮಾಹಿತಿಗಳ ಇದು ಸೌಜನ್ಯ ಭೇಟಿ ಮಾತ್ರವಲ್ಲ, ಬೇರೆ ವಿಷಯಗಳ ಬಗ್ಗೆಯೂ ಮಾತುಕತೆ ನಡೆದಿದೆ ಅನ್ನಲಾಗಿದೆ.
Discussion about this post