ಹಿಂದೊಮ್ಮೆ ಚೆಲುವಿನ ಚಿತ್ತಾರ ಅನ್ನುವ ಸಿನಿಮಾ ಅನಾಹುತ ಮಾಡಿತ್ತು. ಇದೀಗ KGF ಸರದಿ. ( KGF-inspired)
ಮಧ್ಯಪ್ರದೇಶ : ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಆದರೆ ಸಿಗರೇಟು, ಮದ್ಯಪಾನದ ದೃಶ್ಯಗಳು ಖುಲ್ಲಾಂ ಖುಲ್ಲಾ ತೋರಿಸುವ ಕಾರಣದಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಅದರಲ್ಲೂ ಮಕ್ಕಳ ಮುಂದೆ ಇತ್ತೀಚಿನ ಸಿನಿಮಾಗಳನ್ನು ತೋರಿಸುವಂತಿಲ್ಲ. ಹೊಡಿ ಬಡಿ ದೃಶ್ಯಗಳು ಇಂದಿನ ಜನಾಂಗ ಕಲಿಯುವುದೇನಿದೆ. ( KGF-inspired)
ಆದರೆ KGF ಸಿನಿಮಾ ನೋಡಿದ ಮಧ್ಯಪ್ರದೇಶ ಯುವಕನೊಬ್ಬ ರಾಕಿ ಬಾಯ್ ರೀತಿಯಲ್ಲೇ ಡಾನ್ ಆಗಲು ಹೋಗಿ ಜೈಲು ಸೇರಿದ್ದಾನೆ. ಅವನು ಜೈಲು ಸೇರಿದ ಆದರೆ 4 ಮಂದಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸಿನಿಮಾ ಮಾಡಿದವರು ಕೋಟಿ ಕೋಟಿ ಕಾಸು ಬಾಚಿದರು. ಸಿನಿಮಾ ನೋಡಿದ ಇವನೊಬ್ಬ 4 ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ್ದಾನೆ.
ಇದನ್ನು ಓದಿ : Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ
ಮಧ್ಯಪ್ರದೇಶದ 19 ವರ್ಷದ ಶಿವಪ್ರಸಾದ್, ಯಶ್ ಅಭಿನಯದ ಕೆಜಿಎಫ್ ಚಿತ್ರನೋಡಿ ಡಾನ್ ಆಗೋ ಹುಚ್ಚು ಬೆಳೆಸಿಕೊಂಡಿದ್ದ. ಹೀಗಾಗಿ ಡಾನ್ ಆಗಲೆಂದು ಸರಣಿ ಹತ್ಯೆಯೆಂಬ ಮಹಾ ಪಾಪ ಕೃತ್ಯಕ್ಕೆ ಕೈ ಹಾಕಿದ್ದಾನೆ. ಒಬ್ರನ್ನ ಹೊಡೆದ್ರೆ ಡಾನ್ ಆಗೋದಿಲ್ಲ ಅಂತಾ ನಾಲ್ವರು ಅಮಾಯಕರಿಗೆ ಮಸಣದ ದಾರಿ ತೋರಿದ್ದಾನೆ.
ಶಿವನ ಸರಣಿ ಕೊಲೆಯ ವಿವರ ಹೀಗಿದೆ…
ಆಗಸ್ಟ್ 27 : ರಾತ್ರಿ ಮಾರ್ಬಲ್ ಅಂಗಡಿಯೊಂದರ ಸೆಕ್ಯುರಿಟಿ ಗಾರ್ಡ್ ಸೋನು ವರ್ಮಾರ ಮೇಲೆ ರಾಡ್ ಬಳಸಿ ಹಲ್ಲೆ ಬಳಿಕ ಕೊಲೆ
ಆಗಸ್ಟ್ 28 : ಕಾರ್ಖಾನೆಯೊಂದರ ಸಿಬ್ಬಂದಿ ಕಲ್ಯಾಣ್ ಲೋಧಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ
ಆಗಸ್ಟ್ 29 : ಕಲಾ ಮತ್ತು ವಾಣಿಜ್ಯ ಕಾಲೇಜಿನ ಭದ್ರತಾ ಸಿಬ್ಬಂದಿ ಶಂಭು ನಾರಾಯಣ ದುಬೆ ಅವರನ್ನು ಕಲ್ಲಿನಿಂದ ಹೊಡೆದು ಕೊಲೆ
ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಮಾಡಿದ ಕೊಲೆ ಪ್ರಕರಣದ ವಿವರವನ್ನೂ ಪೊಲೀಸರ ಮುಂದೆ ಈತ ಬಾಯಿ ಬಿಟ್ಟಿದ್ದಾನೆ.
Serial-killer Shivprasad Dhurve. His last murder in Bhopal caught on CCTV. @DGP_MP pic.twitter.com/uOSqe07rCx
— P Naveen (@PNaveenTOI) September 2, 2022
ಮಲಗಿದ್ದ ಮಂದಿಯೇ ಈತನ ಟಾರ್ಗೇಟ್ ಆಗಿದ್ದು, ಕೊಲೆ ಮಾಡಿದ್ದನ್ನ ಯಾರು ನೋಡಿಲ್ಲ ಎಂದು ದೃಢಪಡಿಸಿ ಎಸ್ಕೇಪ್ ಆಗುತ್ತಿದ್ದ. ಆದರೆ ಒಂದು ಕೊಲೆ ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಈ ಸೀರಿಯಲ್ ಕಿಲ್ಲರ್ ಇತಿಹಾಸವೂ ಅಷ್ಟೇ ಖರಾಬ್ ಆಗಿದೆ. ಪುಣೆಯಲ್ಲಿ ಹೋಟೆಲ್ ವೈಟರ್ ಆಗಿ ಕೆಲಸ ಮಾಡಿತ್ತದ್ದ ವೇಳೆ ಮಾಲೀಕನನ್ನೇ ಕೊಲೆ ಮಾಡಲು ಹೋಗಿ ಜೈಲು ಸೇರಿ ಬಳಿಕ ಬಿಡುಗಡೆಯಾಗಿದ್ದ.
ಎಂಟನೇ ತರಗತಿ ತನಕ ಓದಿದ್ದ ಶಿವ ಬಳಿಕ ಗೋವಾ ಮತ್ತು ಪುಣೆಯಲ್ಲಿ ಹೋಟೆಲ್ ಸಪ್ಲಯೈರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ನಿರುದ್ಯೋಗಿಯಾಗಿದ್ದ ಈತ ಡಾನ್ ಆಗಲು ಹೊರಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Discussion about this post