ನಮ್ಮಲ್ಲೂ ಕಠಿಣ ಕ್ರಮಕ್ಕೆ ಖ್ಯಾತಿಯಾದ ರಾಜಕಾರಣಿಗಳಿದ್ದಾರೆ. ಅವರೆಲ್ಲರೂ ಯೋಗಿ ಆದಿತ್ಯನಾಥ್ ಕೆಲಸ ನೋಡಿ ಕಲಿಯಬೇಕು (Shrikant Tyagi )
(Shrikant Tyagi) ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯೋಗಿ ಆದಿತ್ಯನಾಥ್ ಅವರ ಯೋಜನೆಗೆ ಬ್ರೇಕ್ ಹಾಕಲು ವಿರೋಧಿಗಳು ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಆದರೆ ಸುಪ್ರೀಂಕೋರ್ಟ್ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಲು ಸಮ್ಮತಿಸಲಿಲ್ಲ.
ಹೀಗಾಗಿಯೇ ಇದೀಗ ಬುಲ್ದೋಜರ್ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಯೋಗಿ ಸರ್ಕಾರದ ಬುಲ್ಡೋಜರ್ ಕೇವಲ ಮುಸ್ಲಿಂರು ಮತ್ತು ಪ್ರತಿಪಕ್ಷಗಳ ಕಾರ್ಯಕರ್ತರ ಮನೆಗಳನ್ನು ಟಾರ್ಗೇಟ್ ಮಾಡಿದೆ ಅನ್ನುವ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ : Kolar rss SP Devaraj : ಕೋಲಾರದಲ್ಲಿ RSS ಕಾರ್ಯಕರ್ತನಿಗೆ ಇರಿತ : ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಎಸ್ಪಿ ದೇವರಾಜ್ ದರ್ಪ
ಅದಕ್ಕೆ ಅಪವಾದ ಅನ್ನುವಂತೆ ಇಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ನಾಯಕ ಶ್ರೀಕಾಂತ್ ತ್ಯಾಗಿ ಮನೆಯನ್ನು ಪುಡಿಗಟ್ಟಲಾಗಿದೆ. ನೋಯ್ಡಾದಲ್ಲಿರುವ ಶ್ರೀಕಾಂತ್ ತ್ಯಾಗಿ ನಿವಾಸಕ್ಕೆ ಬುಲ್ಡೋಜರ್ ಗಳು ಎಂಟ್ರಿ ಕೊಟ್ಟಿದ್ದು, ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ನೋಯ್ಡಾ ಅಥಾರಿಟಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿ ಕಾಮನ್ ಏರಿಯಾದಲ್ಲಿ ಒತ್ತುವರಿ ಆಗಿದೆ, ಇದನ್ನು ತೆರವುಗೊಳಿಸಲು ಬಂದಿದ್ದೇವೆ ಅಂದಿದ್ದಾರೆ.
ತ್ಯಾಗಿ ಮಹಿಳೆಯನ್ನು ನಿಂದಿಸಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲ ಗೂಂಡಾಗಳು ಮಹಿಳೆಯ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ಕೂಡಾ ದಾಖಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ನಾಯಕನ ಮೇಲೆ ಬುಲ್ಡೋಜರ್ ಆಸ್ತ್ರ ಪ್ರಯೋಗವಾಗಿದೆ. ಈಗಾಗಲೇ ಪೊಲೀಸರು ತ್ಯಾಗಿಗೆ ಸೇರಿದ ಮೂರು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀಕಾಂತ್ ತ್ಯಾಗಿ ಕೆಲ ದಿನಗಳ ಹಿಂದೆ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರನ್ನು ಥಳಿಸಿದ್ದ. ನಾನು ಬಿಜೆಪಿ ಮುಖಂಡ, ನಮ್ದೇ ಸರ್ಕಾರವಿದೆ ಏನು ಮಾಡ್ತೀರಾ ಎಂದು ಅವಾಜ್ ಬೇರೆ ಹಾಕಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಬುಲ್ಡೋಜರ್ ಗಳು ಶ್ರೀಕಾಂತ್ ತ್ಯಾಗಿ ಮನೆ ಮುಂದೆ ಪ್ರತ್ಯಕ್ಷವಾಗಿದೆ.
In the case of Noida’s Shrikant Tyagi, the police have formed 8 teams for his arrest. Along with this, 7 accused who entered the society without permission have also been arrested. Noida Phase-2 station in-charge has also been suspended. Gangster Act will be imposed on the accused Srikant who misbehaved with the woman in Noida. At present, Shrikant Tyagi is absconding. So there 8 teams have been formed for the arrest of Shrikant.
Discussion about this post