ಹಾವೇರಿ : ಮನೆಯ ಮುಂದೆ ಮಗುವಿಗೆ ತಾಯಿ ಕೈ ತುತ್ತು ತಿನ್ನಿಸುತ್ತಿದ್ದ ವೇಳೆ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟ ಘಟನೆ ಹಿರೇಕೇರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು 11 ತಿಂಗಳ ತನ್ವಿತ್ ಮಲ್ಲಿಕಾರ್ಜುನ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಮನೆಯ ಎದುರಿನ ಆವರಣದಲ್ಲಿ ತಾಯಿ ಮಾಲಾ ವಾಲ್ಮೀಕಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ವೇಳೆ ತೆಂಗಿನಮರದಿಂದ ಕಾಯಿ ಮಗುವಿನ ತಲೆ ಮೇಲೆ ಬಿದ್ದಿದೆ.
ಗಾಯಗೊಂಡ ಮಗುವನ್ನು ಗ್ರಾಮದಲ್ಲೇ ಚಿಕಿತ್ಸೆ ನೀಡಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗು ಮೃತಪಟ್ಟಿದೆ.
Discussion about this post