40 ವರ್ಷದವನೊಂದಿಗೆ 22 ವರ್ಷದ ಯುವತಿಯೊಂದಿಗೆ ಅನೈತಿಕ ಸಂಬಂಧ ( Illegal Relationship) ಇಟ್ಟುಕೊಂಡ ಕರ್ಮಕ್ಕೆ ಜೈಲು ಸೇರಿದ್ದಾಳೆ
ಚೆನೈ : ಅನೈತಿಕ ಸಂಬಂಧ ( Illegal Relationship) ಅನ್ನುವ ಚಟ ಅದೆಷ್ಟು ಅಪಾಯಕಾರಿ ಅನ್ನುವುದಕ್ಕೆ ಈಗಾಗಲೇ ನಡೆದಿರುವ ಹಲವು ಘಟನೆಗಳು ಸಾಕ್ಷಿ. ಹಾಗಂತ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ.ಈ ನಡುವೆ ಪ್ರೇಯಸಿಗಾಗಿ ಪತ್ನಿಯ ಚಿನ್ನ ಕದ್ದ ಪತಿ ಮತ್ತು ಅದನ್ನು ಸ್ವೀಕರಿಸಿದ ಪ್ರಿಯತಮೆ ಜೈಲು ಸೇರಿದ ಘಟನೆ ಚೆನೈ ನಿಂದ ವರದಿಯಾಗಿದೆ.
ಚೆನೈ ಮೂಲದ 40 ವರ್ಷದ ಶೇಖರ್ ಮದುವೆಯಾಗಿ ಪತ್ನಿಯೊಂದಿಗೆ ಚೆನ್ನಾಗಿಯೇ ಸಂಸಾರ ಸಾಗಿಸುತ್ತಿದ್ದ. ಈ ನಡುವೆ 22 ವರ್ಷದ ಯುವತಿಯ ಅನೈತಿಕ ಸಂಪರ್ಕಕ್ಕೆ ಬಂದ ಶೇಖರ್ ಮನೆಯ ಕಡೆ ಫೋಕಸ್ ಕಳೆದುಕೊಂಡಿದ್ದ. ಹೀಗಾಗಿ ಮನೆಯಲ್ಲಿ ಸದಾ ಜಗಳ ಪ್ರಾರಂಭವಾಗಿತ್ತು. ಅದೊಂದು ದಿನ ಜಗಳ ಮಾಡಿಕೊಂಡ ಪತ್ನಿ ತವರು ಮನೆಗೆ ಹೋಗಿದ್ದಳು.
ಇದನ್ನು ಓದಿ : Modi declares assets : ಆಸ್ತಿ ವಿವರ ಘೋಷಿಸಿದ ಪ್ರಧಾನಿ : ಕೈಯಲ್ಲಿದೆ ನಾಲ್ಕು ಚಿನ್ನದ ಉಂಗುರ
ತವರು ಮನೆಗೆ ಹೋದ ಪತ್ನಿ, ಶೇಖರ್ ಬಂದು ನನ್ನ ಕರೆದುಕೊಂಡು ಹೋಗ್ತಾನೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ತಲೆ ಕೆಡಿಸಿಕೊಳ್ಳದ ಶೇಖರ್ ಬಿಂದಾಸ್ ಆಗಿದ್ದ.
ತಿಂಗಳು ಕಳೆದರೂ ಪತಿಯ ದಾರಿ ಕಾಣದ ಪತ್ನಿ ಮನೆಗೆ ಹಿಂತಿರುಗಿದ್ದಾಳೆ. ಅದೊಂದು ಮನೆ ಕ್ವೀನ್ ಮಾಡುತ್ತಿದ್ದ ವೇಳೆ ಕಪಾಟಿನಲ್ಲಿ ಇಟ್ಟಿದ್ದ 300 ಪವನ್ ಚಿನ್ನ ನಾಪತ್ತೆಯಾಗಿರುವುದು ಗೊತ್ತಾಗಿದೆ. ಶೇಖರ್ ನನ್ನು ಕೇಳಿದ್ರೆ ಅಂಗೈ ಆಕಾಶಕ್ಕೆ ತೋರಿದ್ದಾನೆ.
ಇದಾದ ಬಳಿಕ ಶೇಖರ್ ಪತ್ನಿ ವಿಷಯವನ್ನು ಮೈದುನನಿಗೆ ತಿಳಿಸಿದ್ದಾಳೆ. ಮೈದುನ ತನ್ನ ತಾಯಿಯ ಕಬೋರ್ಡ್ ಪರಿಶೀಲನೆ ಮಾಡಿದ್ರೆ ಅಲ್ಲೂ ಚಿನ್ನ ನಾಪತ್ತೆಯಾಗಿತ್ತು.
ಇದನ್ನು ಓದಿ :Janardhana reddy : ಬಳ್ಳಾರಿಯಲ್ಲಿ ಮತ್ತೆ ಗಣಿ ಅಗೆಯಲು ಹೊರಟ ಜನಾರ್ಧನ ರೆಡ್ಡಿ
ಕೊನೆಗೆ ಮನೆಯ ಸದಸ್ಯರು ಸೇರಿ ಪೂನಮಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಶೇಖರನನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗಳಿಂದ ಗಂಟಲು ಒಣಗಿಸಿಕೊಂಡ ಶೇಖರ್ ಸತ್ಯ ಕಕ್ಕಿದ್ದಾನೆ.
ವೆಲಚೇರಿ ಕೇದಾರಿಪುರಂನ ಸ್ವಾತಿ ಅನ್ನುವ ಯುವತಿಯೊಂದಿಗೆ ನನಗೆ ಅಕ್ರಮ ಸಂಬಂಧವಿದೆ. ಪೋರೂರುನಲ್ಲಿರುವ ಹೊಟೇಲ್ ನಲ್ಲಿ ನಾವಿಬ್ಬರೂ ಭೇಟಿಯಾಗುತ್ತೇವೆ. ಈ ವೇಳೆ ಆಕೆಯನ್ನು ಖುಶಿ ಪಡಿಸಲು ಮನೆಯಲ್ಲಿದ್ದ ಚಿನ್ನವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಕೆಲವು ಚಿನ್ನಾಭರಣಗಳನ್ನು ಮಾರಿ ಆಕೆಗೊಂದು ಕಾರು ಕೊಡಿಸಿರುವುದಾಗಿ ಶೇಖರ್ ಹೇಳಿದ್ದಾನೆ. ಇದೀಗ ಶೇಖರ್ ಮತ್ತು ಸ್ವಾತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಸ್ವಾತಿಯ ಬಳಿಯಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ.
Discussion about this post